ಮಹಿಳಾ ಸಾಧಕಿಯರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’
‘ಎಲ್ಲವನ್ನೂ ಎಲ್ಲರನ್ನೂ ಎಂತಹದ್ದನ್ನೂ ಸಹಿಸುವ ಶಕ್ತಿ ತಾಯಿಗಷ್ಟೇ ಇದೆ’ -ಡಾ ನಾಗಲಕ್ಷ್ಮಿ ಚೌಧರಿ ಅಭಿಮತ.
ಬೆಂ,ಆನೇಕಲ್,ಮಾ,22: ಜಗತ್ತಿನ ಅರ್ದದಷ್ಟು ಮಹಿಳೆಯರೇ ಇದ್ದೀವಿ, ಅದರಲ್ಲೂ ನಾವು ಹೆರುವ ಮಕ್ಕಳಿಂದಲೇ ದೌರ್ಜನ್ಯಕ್ಕೊಳಗಾಗುವ ಪರಿಸ್ಥಿತಿಯಿದೆ. ಎಲ್ಲ ತರಹದ ಸಹಿಷ್ಣುವನ್ನೂ ತಡೆಸುಕೊಳ್ಳುವ ಶಕ್ತಿ ತಾಯಿಯೊಬ್ಬಳಿಗೇ ಇದೆ. ತಾಯಿಯಿಲ್ಲದೇ ಸೃಷ್ಟಿಯೇ ಇರೋಲ್ಲ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌದರಿ ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು.
ಅವರು ಬನ್ನೇರುಘಟ್ಟದಲ್ಲಿ ಮಾತೃ ವಾತ್ಸಲ್ಯ ಫೌಂಡೇಷನ್ವತಿಯಿಂದ ಭಾನುವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಧನೆಗೈದ ಮಹಿಳೆಯರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾತು ಮುಂದುವರೆಸಿ ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಹುಡುಗಿಯರು ಮುಟ್ಟಾದರೆ ಊರಾಚೆಗೆ ಇಡ್ತಾರೆ, ಗರ್ಭಿಣಿಯರನ್ನ ತಿಂಗಳುಗಳ ಕಾಲ ಊರಾಚೆ ಇಡ್ತಾರೆ ಅನ್ನೋದಾದರೆ ದೇವರು ಇಂತಹ ಕಟ್ಟುಪಾಡುಗಳನ್ನ ಪಾಲಿಸಿ ಎಂದು ಎಲ್ಲಿಯಾದರೂ ಹೇಳಿದ್ದಾರಾ? ಇಲ್ಲವಲ್ಲ, ಇವೆಲ್ಲ ಜನರ ಮೂಢನಂಬಿಕೆಗಳಷ್ಟೇ… ಹಿಂದೆ ನಮ್ಮ ಮುತ್ತಾತರಿಗೆ ಎರೆಡು ಮೂರು ಪತ್ನಿಯರಿರುತ್ತಿದ್ದರು. ಯಾಕಂದರೆ ಆಗಲೂ ಮಹಿಳೆಯನ್ನ ಹೆಣ್ಣಾಗಿಯೇ ಕಾಣುತ್ತಿದ್ದರು. ಹೆಂಡತಿ ಹೆರಿಗೆಗೆ ಅಥವಾ ಮುಟ್ಟಾದರೆ ಸಾಕು ಆಚೆ ಹಾಕಿದರೆ ಆ ಸಂದರ್ಭದಲ್ಲಿ ಮತ್ತೊಬ್ಬ ಹೆಣ್ಣನ್ನ ಮನೆಗೆ ಕರೆಸಿಕೊಂಡು ಮದುವೆಯಾಗುವ ಪದ್ದತಿ ಜಾರಿಯಾಗುತ್ತಿತ್ತು. ಇದರಿಂದ ಅರಿಯುವುದೇನೆಂದರೆ ಮಹಿಳೆಯರು ಎಲ್ಲವನ್ನೂ ಪ್ರಶ್ನಿಸದೇ ಸಹಿಸಿಕೊಳ್ಳಲಷ್ಟೇ ಅರ್ಹಳು ಎಂದು ತಿಳಿದಿದ್ದರು.
ಇದರಿಂದ ಮಹಿಳೆ ತನ್ನ ಹಕ್ಕುಗಳನ್ನ ಕೇಳುವ ಅರಿವು ಕಳೆದುಕೊಳ್ಳುವುದು ಆಕೆಯ ಸಾವಿಗೆ ಸಮ ಎಂದು ನುಡಿದರು. ಆದ್ದರಿಂದ ಮಹಿಳೆಯರಿಗೆ ಅರಿವಿನ ಅತ್ಯಗತ್ಯವಾದ ಜ್ಞಾನ ಇರಲೇಬೇಕೆಂದು ಪ್ರತಿಪಾದಿಸಿದರು. ಏನೇ ತೊಂದರೆಯಾದರೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ಎಲ್ಲ ಪೊಲೀಸರು ಕೆಟ್ಟವರಿರುವುದಿಲ್ಲ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.
ವೇದಿಕೆಯ ಅಧ್ಯಕ್ಷತೆಯನ್ನು ಎಸ್ ಹೆಚ್ ರಾಮಚಂದ್ರಪ್ಪ ವಹಿಸಿಕೊಂಡಿದ್ದರು. ನಾಗಲೇಖ ಸ್ವಾಗತಿಸಿ, ಇನ್ಸಪೆಕ್ಟರ್ ಕೆ ವಿಶ್ವನಾಥ್ ವಂಧಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಎಂ ಕೃಷ್ಣಪ್ಪ, ಆನೇಕಲ್ ಮಾಜಿ ಬಿಇಒ ಜಯಲಕ್ಷ್ಮಿ , ಆನೇಕಲ್ ಮಮತಾ ಯಜಮಾನ್, ಅನ್ನಪೂರ್ಣ ಮತ್ತಿತರರು ಇದ್ದರು.

