May 2026
M T W T F S S
 123
45678910
11121314151617
18192021222324
25262728293031
May 23, 2026

c24kannada

ವಸ್ತುಸ್ಥಿತಿಯತ್ತ

ಫೌಲ್ಟ್ರಿ ಫೀಡ್ ನಡುವೆ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಜಿಗಣಿ ಪೊಲೀಸರು.

ಫೌಲ್ಟ್ರಿ ಫೀಡ್ ನಡುವೆ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಜಿಗಣಿ ಪೊಲೀಸರು.

ಫೌಲ್ಟ್ರಿ ಫೀಡ್ ನಡುವೆ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಜಿಗಣಿ ಪೊಲೀಸರು.

ಬೆಂ(ಆನೇಕಲ್),ಮೇ,08: ಕೋಳಿ ಪೌಲ್ಟ್ರಿ ಫೀಡ್ ನಡುವೆ ಬೃಹತ್ ಗಾಂಜಾ ಮೂಟೆಗಳನ್ನಿರಿಸಿ ಅಂತರ ರಾಜ್ಯಗಳಿಗೆ ಸಾಗಿಸುತ್ತಿದ್ದ ಅಂತರರಾಜ್ಯ ಆರೋಪಿಗಳನ್ನ ಮಾಲು ಸಮೇತ ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆನೇಕಲ್ ತಾಲೂಕಿನ ಕೊಪ್ಪ-ಬೇಗೂರು ಮುಖ್ಯ ರಸ್ತೆಯ ಪ್ರಾರ್ಥನಾ ಜ್ಯೂಸ್ ಸೆಂಟರ್ ಬಳಿ ತೆರಳುತ್ತಿದ್ದ ಟ್ರಕ್ ನಲ್ಲಿ ಗಾಂಜಾ ಇರುವ ಖಚಿತ ಮಾಹಿತಿ ಪಡೆದ ಜಿಗಣಿ ಇನ್ಸಪೆಕ್ಟರ್ ಮಂಜುನಾಥ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.
ಬಿಹಾರ ರಾಜ್ಯದ ವಿನೋದ್, ಬಾಬು, ಮೊಹಮದ್ ಸಬೀರ್ ಖಾನ್ ಮತ್ತು ಒಡಿಶಾದ ರಾಮಾಯಣ ಯಾದವ್ ಈ ಗಾಂಜಾ ಸಾಗಣೆ ಜಾಲದಲ್ಲಿದ್ದು ಇಬ್ಬರನ್ನು ಬಂಧಿಸಿ ಮತ್ತಿಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಬಲೆ ಬೀಸಿದ್ದಾರೆ.
ಮುಹಮ್ ಇಂಟರ್ ನ್ಯಾಷನಲ್ಇಂಡೋ ಟ್ರಾನ್ಸಫರ್ಗೆ ಸೇತಿದ ಟಾಟಾ ಟ್ರಕ್ ನಲ್ಲಿ ಛತ್ತಿಸ್ಘಡದಿಂದ ತಮಿಳುನಾಡಿನ‌ ನಾಮಕಲ್ ಭಾಗಕ್ಕೆ 250 ಕಿಲೋ ಗಾಂಜಾ ಮೂಟೆಗಳನ್ನ ಫೌಲ್ಟ್ರಿ ಫೀಡ್ ನಡುವೆ ಇರಿಸಿ ಸಾಗಿಸಲಾಗುತಿತ್ತು.
ಒಟ್ಟು 1,25,00,000. ಮೌಲ್ಯದ ಗಾಂಜಾ ವಶಕ್ಕೆ ಪಡೆದು ಎನ್ಡಿಪಿಎಸ್ ಪ್ರಕರಣ 20(b)(2)(c)ದಂತೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇಡೀ ಪ್ರಕರಣವನ್ನು ಬೇಧಿಸಿದ ಜಿಗಣಿ ಪೊಲೀಸರನ್ನು ಬೆಂ ಗ್ರಾ ಎಸ್ಪಿ ಚಂದ್ರಕಾಂತ್ ಪ್ರಶಂಸಿಸಿದ್ದು ಸೂಕ್ತ ರಿವಾರ್ಡ್ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಎಸ್ಪಿ ಚಂದ್ರಕಾಂತ್ ಹೇಳಿಕೆ: ಅಕ್ಕಿ ಬೆಳೆಯುವ ಒಡಿಶಾದಲ್ಲಿ ಫೌಲ್ಟ್ರಿ ಫೀಡ್ ಸಾಗಣೆ ವಾಹನದಲ್ಲಿ ಎಂಟು ಮೂಟೆಗಳನ್ನ ಇರಿಸಿ ರವಾನಿಸಿದ್ದಾರೆ ತಮಿಳುನಾಡಿಗೆ ಛತ್ತೀಸ್ಘಡದಿಂದ ಬೆಂಗಳೂರು ಹೊರವಲಯದ ಮೂಲಕ ಹೋಗುವ ಮಾರ್ಗದ ಮುಖಾಂತರ ತೆರಳಲಿದ್ದು ಕೆಲ ರಿಸೀವರ್ಸ್ ಬಂದು ಗಾಂಜಾ ಇಳಿಸಿಕೊಳ್ಳುತ್ತಾರೆ ಎಂದು ಚಾಲಕ ಹಾಗು ಕ್ಲೀನರ್ ಗೆ ಮಾಹಿತಿ ನೀಡಿ ಕಳುಹಿಸಿಕೊಟ್ಟಿದ್ದಾರೆ. ವಶಕ್ಕೆ ಪಡೆದಿರುವ ಮೊಹಮದ್ ಹಾಗು ರಾಮಾಯಣ ಯಾದವ್ ಇಬ್ಬರು ಆರೋಪಿಗಳಿಗೂ ಈ ಕುರಿತು ಮಾಹಿತಿಯಿದೆ. ಈಗ ಕಳುಹಿಸಿಕೊಟ್ಟ ಬಿಹಾರಿಯನ್ನ ಪತ್ತೆ ಹಚ್ಚಬೇಕು, ಅಲ್ಲದೆ ರಿಸೀವರ್ ಯಾರೂ ಅಂತ ತಿಳಿದುಬಂದಿಲ್ಲ. ಇನ್ನೂ ಈ ಜಾಲದ ಮೂಲದ ಬೆನ್ನು ಬಿದ್ದಿದ್ದೇವೆ ಅಂದುಕೊಂಡಂತೆ ಸಾಧಿಸಿದಲ್ಲಿ ಇನ್ನೂ ಹೆಚ್ಚು ಗಾಂಜಾ ವಶಕ್ಕೆ ಪಡೆಯುವ ವಿಶ್ವಾಸವಿದೆ. ಈಗಾಗಲೇ ಬೃಹತ್ ಮಟ್ಟದ ಗಾಂಜಾ ವಶ ಇದಾಗಿದೆ 250 ಕಿಲೋ ಗೆ ಸರ್ಕಾರಿ ಬೆಲೆಯಂತೆ ಒಂದುಕ್ಕಾಲು ಕೋಟಿ ರೂಪಾಯಿಗಳಾಗಿವೆ.
ಇದನ್ನು ಬೇರೆಡೆ ಇರುವ ಬೆಲೆಗೆ ಮಾರಾಟ ಮಾಡಿದರೆ ಹತ್ತುಕೋಟಿಯಷ್ಟಾಗುತ್ತದೆ. ಮುಖ್ಯವಾಗಿ ಯುವ ಸಮುದಾಯ ಹಾಗು ಕಾರ್ಮಿಕರನ್ನ ಗುರಿಯಾಗಿಸಿ ಈ ಗಾಂಜಾ ಸರಭರಾಜಾಗಿದೆ. 05ಗ್ರಾಂ ಪ್ಯಾಕೆಟಿಗೆ ನೂರು ರೂಪಾಯಿ ಪಡೆಯುವ ಜಾಲಗಳಿವೆ. ಅವುಗಳನ್ನ ಬೆನ್ನಟ್ಟುತ್ತೇವೆ. ಒಟ್ಟಾರೆ ಇನ್ಸಪೆಕ್ಟರ್ ಮಂಜುನಾಥ್ ಡಿವೈಎಸ್ಪಿ ಎಸ್ಪಿ ತಂಡಕ್ಕೆ ಶ್ಲಾಘಿಸುತ್ತೇನೆ, ನಗದು ರೂಪದ ರಿವಾರ್ಡ್ ಜೊತೆಗೆ ಶ್ಲಾಘನಾ ಪತ್ರ ನೀಡಿ ಬೆಂಬಲಿಸುತ್ತೇನೆ ಎಂದರು.
ಮಾಧ್ಯಮಘೋಷ್ಟಿಯಲ್ಲಿ ಎಎಸ್ಪಿ ಲಕ್ಷ್ಮಿನಾರಾಯಣ್ ಜಿಗಣಿ ಇನ್ಸಪೆಕ್ಟರ್ ಮಂಜುನಾಥ್ ಇದ್ದರು.

 

Leave a Reply

Your email address will not be published. Required fields are marked *

error: Content is protected !!