ಸಚಿವ ಸುಧಾಕರ್ ಷಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ಸಚಿವ ಡಿ ಸುಧಾಕರ್ ಚಿಕಿತ್ಸೆ ಫಲಿಸದೆ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು(ಆನೇಕಲ್)ಮೇ,10: ಸಚಿವ ಡಿ. ಸುಧಾಕರ್ (66) ದೀರ್ಘ ಚಿಕಿತ್ಸೆ ಫಲಕಾರಿಯಾಗದೆ ಇಂದು ಭಾನುವಾರ ನಸುಕಿನ ಜಾವ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಮೊಳಕಾಲು ನೋವು ಹಾಗು ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಹೆಚ್ಚಿನ ಚಿಕಿತ್ಸೆಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಮಣಿಪಾಲ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ಸಚಿವ ಡಿ ಸುಧಾಕರ್ ರಾಜ್ಯದ ಯೋಜನೆ ಹಾಗು ಸಾಂಕಿಕ ಇಲಾಖೆ ಸಚಿವರಷ್ಟೇ ಅಲ್ಲದೆ ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಆಗಿದ್ದರು.
ಐಸಿಯುನಲ್ಲಿಯೇ ಇದ್ದ ಸುಧಾರಕರ್ ಇಂದು ಬೆಳಗ್ಗೆ 3.15ಕ್ಕೆ ಕೊನೆಯುಸಿರೆಳೆದಿದ್ದಾರೆ.ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನ.
ಮಧ್ಯಾಹ್ನ 2:30ಕ್ಕೆ ಹಿರಿಯೂರು ಕ್ರೀಡಾಂಗಣಕ್ಕೆ ಪಾರ್ಥಿವ ಶರೀರ.
ಸಂಜೆ 6ಕ್ಕೆ ಚಳ್ಳಕೆರೆಯಲ್ಲಿ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ.
ಕಿಮ್ಸ್ ಆಸ್ಪತ್ರೆಯಿಂದ ಕುಟುಂಬಸ್ಥರಿಗೆ ಪಾರ್ಥಿವ ಶರೀರ ರವಾನೆ.
ಆಸ್ಪತ್ರೆಯಿಂದ ಸದಾಶಿವನಗರದ ನಿವಾಸಕ್ಕೆ ಮೃತದೇಹ.
ಮನೆಯಿಂದ ನೇರವಾಗಿ ಹಿರಿಯೂರು ಕ್ಷೇತ್ರ ದತ್ತ ಪಯಣ
ಹಿರಿತೂರು ಕ್ಷೇತ್ರದ ಜನರಿಗೆ ಅಂತಿಮ ದರ್ಶನಕ್ಕೆ ಸಿದ್ದತೆ..
ಹಿರಿಯೂರಿನ ನೆಹರು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಸಿದ್ದತೆ…
ಮಧ್ಯಾಹ್ನ 12ಕ್ಕೆ ಹಿರಿಯೂರಿಗೆ ತಲುಪಲಿರುವ ಮೃತದೇಹ.
