ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜಿರಾಫೆ ಸಾ*ವು.
ಬೆಂ(ಆನೇಕಲ್),ಮೇ,07:
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೂರು ವರ್ಷ ಮತ್ತು ಹತ್ತು ತಿಂಗಳ ವಯಸ್ಸಿನ ಶಿವಾನಿ ಎಂಬ ಹೆಣ್ಣು ಜಿರಾಫೆಯ ಮೃತಪಟ್ಟಿದೆ ಎಂದು ಉಧ್ಯಾನದ ಪ್ರಕಟಣೆ ತಿಳಿಸಿದೆ.
2024 ಫೆ 27ರಂದು ಚಾಮರಾಜೇಂದ್ರ ಮೃಗಾಲಯದಿಂದ ಶಿವಾನಿಯನ್ನು ತರಿಸಲಾಗಿತ್ತು.
ನಾಲ್ಕು ದಿನದಿಂದ ಆಹಾರ ಸೇವೆನೆಯನ್ನು ನಿಲ್ಲಿಸಿದ್ದು, ಮೃಗಾಲಯದ ಪಶುವೈದ್ಯರ ತಂಡ ಪಶು ವೈದ್ಯಕೀಯ ಆರೈಕೆ ನೀಡಿದ್ದು ಅದು ಚಿಕಿತ್ಸೆಗೆ ಸ್ಪಂದಿಸಿರುವುದಿಲ್ಲ ಹೀಗಾಗಿ ಅಂತಿಮವಾಗಿ ಗುರುವಾರ ಬೆಳಿಗ್ಗೆ ಸುಮಾರು 11:00 ಘಂಟೆಗೆ ಸಾವನ್ನಪ್ಪಿರುತ್ತದೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಪ್ರಾಣಿಯು ಸೀಕಲ್ ಟಾರ್ಷನ್‌ನಿಂದ ಮೃತಪಟ್ಟಿರುತ್ತದೆ ಎಂದು ವೈದ್ಯಾಧಿಕಾರಿಗಳು ವರದಿಸಿರುತ್ತಾರೆ.
ಪ್ರಾಣಿಯ ಒಳಾಂಗಗಳ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಮತ್ತು ಪಶುವೈದ್ಯಕೀಯ ಜೈವಿಕ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
