CRIME_ARREST: ಸೈಜ್‌ಗಲ್ಲಿನಿಂದ ವ್ಯಕ್ತಿಯ ಕಾಲು ಜಜ್ಜಿ ವೈರಲ್ ಆಗಿದ್ದ ಘಟನೆಯ 11 ಮಂದಿ ಆರೋಪಿಗಳ ಬಂಧನ.
ಮಂಡ್ಯ:
CRIME: ಸೈಜ್‌ಗಲ್ಲಿನಿಂದ ವ್ಯಕ್ತಿಯ ಕಾಲು ಜಜ್ಜಿ ವೈರಲ್ ಆಗಿದ್ದ ಘಟನೆಯ 11 ಮಂದಿ ಆರೋಪಿಗಳ ಬಂಧನ.

ಪ್ರಕರಣ ದಾಖಲಾಗತ್ತಿದ್ದಂತೆ ಸಂಬಂಧಿಕರ ಮನೆಗಳಲ್ಲಿ ಅಡಗಿದ್ದ ಗಿರೀಶ್, ಮದ್ದಪ್ಪ, ಪ್ಲಗ್ ಮಂಜ, ಗಣೇಶ, ಶಿವಣ್ಣ, ನಿಂಗಣ್ಣ ಸೇರಿ 11 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು ಇನ್ನೂ ಮೂವರಿಗಾಗಿ ಬಲೆ ಬೀಸಿದ್ದಾರೆ.
ಹುಡುಗಿಯೊಬ್ಬಳ ಪ್ರೇಮ ವಿವಾಹಕ್ಕೆ ಸಹಕಾರ ನೀಡಿದ ಎಂಬ ಆರೋಪದ ಹಿನ್ನಲೆ ಯುವಕನನ್ನು ಸಂಬಂದಿಕರೇ ಅಮಾನವೀಯವಾಗಿ ಸೈಜುಕಲ್ಲಿನಿಂದ ಕಾಲು ಜಜ್ಜುವ ಕ್ರೂರ ಘಟನೆ 22 ರಂದು ಪಾಂಡವಪುರದ ಕನಗನಹಳ್ಳಿಯಲ್ಲಿ ನಡೆದಿತ್ತು.
ಇಡೀ ಘಟನೆಯನ್ನ ವಿಡಿಯೋ ಮಾಡಿದ್ದು ದೃಶ್ಯಗಳು ವೈರಲ್ ಆಗಿತ್ತು.
ಪ್ರಕಾಶ್ ಹಾಗೂ ಆತನ ಬಾಮೈದ ಬೊಮ್ಮಲಾಪುರದ ನವೀನ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಗಿರೀಶ್ ಗ್ಯಾಂಗ್. ನವೀನ್ ಕಾಲನ್ನ ಸೈಜ್ ಗಲ್ಲಿನಿಂದ ಜಜ್ಜಿ ಹಾಕಿದ್ದರು.
ಈ ಸಂಬಂದ ಮಂಡ್ಯದ ಪಾಂಡವಪುರ ಠಾಣೆ ಇನ್ಸ್ಪೆಕ್ಟರ್ ಶರತ್ ಕುಮಾರ್ 14 ಆರೋಪಿಗಳ ಪೈಕಿ 11 ಮಂದಿಯನ್ನ ಬಂಧಿಸಿದ್ದಾರೆ.
#CrimeNews #MandyaCrime #Pandavapura#PoliceAction.

