February 2026
M T W T F S S
 1
2345678
9101112131415
16171819202122
232425262728  
May 23, 2026

c24kannada

ವಸ್ತುಸ್ಥಿತಿಯತ್ತ

ಸರ್ಜಾಪುರ ಅಜೀಂ ಪ್ರೇಮ್‌ ಜಿ ಯೂನಿವರ್ಸಿಟಿ ಮೇಲೆನ ದಾಳಿಗೆ ಸಂಬಂದಿಸಿದಂತೆ ೨೫ ಎಬಿವಿಪಿ ಕಾರ್ಯಕರ್ತರ ಮೇಲೆ ಎಫ್‌ಐಆರ್

ಸರ್ಜಾಪುರ ಅಜೀಂ ಪ್ರೇಮ್‌ ಜಿ ಯೂನಿವರ್ಸಿಟಿ ಒಳನುಗ್ಗಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದ್ದು. ನ್ಯಾಯಾಲಯದಲ್ಲಿ ರೆಗ್ಯುಲರ್‌ ಬೇಲ್‌ ಗೆ ಕಾರ್ಯಕರ್ತರು ಕಾದು ಕುಳಿತಿದ್ದಾರೆ.

ಹತೋಟಿ ತಪ್ಪಿದ ಎಬಿವಿಪಿ ಹೋರಾಟ ಯೂನಿವರ್ಸಿಟಿ ಸೆಕ್ಯೂರಿಟಿಯನ್ನು ದಾಟಿ, ಮುಖ್ಯ ಗೇಟ್ ಒಳ ನುಗ್ಗಿತ್ತು. ಎಬಿವಿಪಿ ಕಾರ್ಯಕರ್ತರು ಆಗಲೇ ಹಲವಾರು ಸೆಕ್ಯೂರಿಟಿ ಹಾಗು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ನಿಂದಿಸಿದ್ದರು. ಪೊಲೀಸರು ಎಬಿವಿಪಿ ಯುವಕರನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನಿಸಿದರೂ ಕತ್ತಲಾಗುತ್ತಿದ್ದಂತೆ ಪರಿಸ್ಥತಿ ಕೈ ಮೀರಿತ್ತು. ಈ‌ ಸಂದರ್ಭದಲ್ಲಿ ಮೊದಲ‌ ವರ್ಷದ ಬಿಎ ವಿದ್ಯಾರ್ಥಿ ಮಹಮದ್ ಅಲಿ‌ ಅಹಮದ್ ರಿಗೆ ಹಲ್ಲೆ‌ ಮಾಡಿ‌ ನಿಂದಿಸಿದ್ದರು. ಯೂನಿವರ್ಸಿಟಿ ಒಳಗಡೆಗೆ ಎಬಿವಿಪಿ ಕಾರ್ಯಕರ್ತರು ನುಗ್ಗಿದ್ದಲ್ಲದೆ ಯೂನಿವರ್ಸಿಟಿ ನಾಮಫಲಕಕ್ಕೆ ಮಸಿ ಬಳಿದು ಹಿಂಸೆ ರೂಪ ತಾಳಿತ್ತು. ಕೂಡಲೇ ಸರ್ಜಾಪುರ ಪೊಲೀಸರು ಎಚ್ಚೆತ್ತು ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿ ರಾತ್ರಿ ಗಲಾಟೆಗೆ ತೆರೆ ಎಳೆದರು.

ಆನೇಕಲ್: ಸರ್ಜಾಪುರ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ಮೆರೆದ ಆರೋಪಕ್ಕೆ ಸಂಬಂದಿಸಿದಂತೆ 25 ಎಬಿವಿಪಿ ಕಾರ್ಯಕರ್ತರ ಮೇಲೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ಸರ್ಜಾಪುರ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. SPARK ವಿದ್ಯಾರ್ಥಿ ವೃಂದದ ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (AISA) ದಿಂದ ಕಾಶ್ಮೀರದ ಸೈನಿಕರನ್ನು ಅತ್ಯಾಚಾರಿಗಳು ಎಂದು ಬಿಂಬಿಸುವ ಚರ್ಚೆಯನ್ನು  ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಯೂನಿವರ್ಸಿಟಿಯ ಮಾನ್ಯತೆ ರದ್ದು ಗೊಳಿಸಲು ಕೋರಿ ಎಬಿವಿಪಿ ಕೇಂದ್ರ ಸಚಿವರಿಗೆ ಪತ್ರದ ಮೂಲಕ ಎಬಿವಿಪಿ ಕಾರ್ಯಕರ್ತರು ಮನವಿಯನ್ನೂ ಮಾಡಿದ್ದರು.

ಕೆಲ‌ ಸಮಯ

ಮರುದಿನ ಬುಧವಾರ ಬೆಳಗ್ಗೆ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಸೆಕ್ಯೂರಿಟಿ ಹೆಡ್ ಎಸ್ ವಿಲ್ಸನ್ ನೀಡಿದ ದೂರಿನಂತೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.  25 ಎಬಿವಿಪಿ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಿಸಿದ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ದೂರಿನಲ್ಲಿ ಯೂನಿವರ್ಸಿಟಿಗೆ  ಒತ್ತಾಯ ಪೂರ್ವಕ ಪ್ರವೇಶ ಹಾಗು ಸೆಕ್ಯೂರಿಟಿಗಳಾದ ಜಗದೀಶ್, ಚಂದನ್ ಮಹಾಲಿಕ್, ಚಟ್ಟಾರ್ ಬಹುದ್ದೂರ್, ನರೇಶ್, ಶ್ರೀಪತಿ ಮತ್ತು ಹರೀಶ್ ಮೇಲೆ ದೊಣ್ಣೆಗಳಿಂದ ಕೊಲೆ ಬೆದರಿಕೆ ಅಲ್ಲದೆ ಮೊದಲ ಬಿಎ ವಿದ್ಯಾರ್ಥಿ ಮಹಮದ್ ಅಲಿ ಅಹಮದ್ ಮೇಲೆ ಹಲ್ಲೆ ಮಾಡಿದ  ಆರೋಪ ಹೊರೆಸಿ ದೂರು ನೀಡಿದ್ದರು.

ಪ್ರಕರಣದ ಮುಂದಿನ ಪ್ರಕ್ರಿಯೆಯಂತೆ 25 ಎಬಿವಿಪಿ ಕಾರ್ಯಕರ್ತರು ಆನೇಕಲ್ ನ್ಯಾಯಾಲಯದಲ್ಲಿ ರೆಗ್ಯುಲರ್ ಬೇಲ್ ಗೆ ಮನವಿ‌ ಮಾಡಿದ್ದು. ಕಂಡೀಷನಲ್‌ ಬೇಲ್ ಸಿಕ್ಕಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಪೊಲೀಸರು ಸ್ಥಳದಲ್ಲಿದ್ದರೂ ಕಾರ್ಯಕರ್ತರನ್ನ ತಹಬಂದಿಗೆ ತರದೇ ಇದ್ದದ್ದು ಪೊಲೀಸರ ನಿರ್ಲಕ್ಷತೆಗೆ ಕಾರಣ ಎನ್ನಲಾಗಿದೆ.

ಮೇಲಾಗಿ ಪ್ರತಿಭಟನೆಗೆ ಅನುವು ಮಾಡಿಕೊಟ್ಟು ಮುಂಜಾಗ್ರತೆಯಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸದೆ ಇದ್ದದ್ದು  ಘಟನೆಗೆ ಕಾರಣ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!