May 23, 2026

c24kannada

ವಸ್ತುಸ್ಥಿತಿಯತ್ತ

ಹೃದಯ ವಿದ್ರಾವಕ ಘಟನೆ: ತನ್ನಿಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣು

 

ದಾವಣಗೆರೆ : ಪತ್ನಿ ಸಾವಿನಿಂದ ನೋವು ಅನುಭವಿಸುತ್ತಿದ್ದ ವ್ಯಕ್ತಿ ತನ್ನಿಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಸಹ ಆತ್ಮಹತ್ಯೆ  ಮಾಡಿಕೊಂಡಿರುವ  ಘಟನೆ ದಾವಣಗೆರೆ  ಎಸ್‌ಪಿಎಸ್‌ ನಗರದಲ್ಲಿ ನಡೆದಿದೆ. ಮಕ್ಕಳಾದ ಸಿಂಧುಶ್ರೀ(4), ಶ್ರೀಜಯ್‌(3)ನನ್ನು ಕೊಲೆಗೈದು ಬಳಿಕ ತಂದೆ ಉದಯ್‌(35) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲ ತಿಂಗಳ ಹಿಂದೆ ಅಷ್ಟೇ ಉದಯ್‌ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದ ಪತಿ ಉದಯ್‌ , ಇಂದು  ಮಕ್ಕಳನ್ನು ಸಾಯಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.  ಇನ್ನು ನೇಣಿಗೆ ಶರಣಾಗುವ ಮೊದಲು ರಕ್ತದಲ್ಲಿ ಐಲವ್​ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆ ಮೇಲೆ ಬರೆದಿದ್ದಾರೆ.

 

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ನಿವಾಸಿ  ಉದಯ್  ಹಾಗೂ ಹೇಮಾ ಪರಸ್ಪರ ಪ್ರೀತಿಸಿ ಮದ್ವೆ ಆಗಿದ್ದರು. ಆದ್ರೆ, ಕಳೆದ ಎಂಟು ತಿಂಗಳ ಹಿಂದೆ ಪತ್ನಿ ಹೇಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಪ್ರೀತಿಸಿ ಕೈಹಿಡಿದಾಕೆ ಸಾವನ್ನಪ್ಪಿದ್ದರಿಂದ  ಉದಯ್​ ನೋವಿನಲ್ಲಿದ್ದ. ಕೊನೆಗೆ ನೋವು ತಡೆದುಕೊಳ್ಳಲಾಗದೇ ಸಾವಿನ ತೀರ್ಮಾನ ಕೈಗೊಂಡಿದ್ದಾರೆ. ಇನ್ನು ನೇಣಿಗೆ ಶರಣಾಗುವ ಮೊದಲು ರಕ್ತದಲ್ಲಿ ಐಲವ್​ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆ ಮೇಲೆ ಬರೆದಿದ್ದಾರೆ. ಇನ್ನು ಮಕ್ಕಳನ್ನ  ಉಸಿರು ಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು, ಶ್ವಾನ ದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ ಪರಿಶೀಲನೆ ನಡೆಸಿದರು..

Leave a Reply

Your email address will not be published. Required fields are marked *

error: Content is protected !!