c24kannada

ವಸ್ತುಸ್ಥಿತಿಯತ್ತ

ಇಲ್ಲೊಂದು ದೇವರಿಗೆ ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ, ಬೀಡಿ-ಸಿಗರೇಟ್‌ನಿಂದಲೇ ಆರತಿ

ಸಾಮಾನ್ಯವಾಗಿ ದೇವರಿಗೆ ನೈವೇದ್ಯ ಅಂತಾ ನಾವು ತಿಂಡಿ ತಿನಿಸು  ಹಣ್ಣು, ಹಂಪಲುಗಳನ್ನು ಇಡುತ್ತಾರೆ. ಇನ್ನೂ ಹೆಚ್ಚಾಗಿ ಹಾಲು ತುಪ್ಪದಿಂದ ಅಭಿಷೇಕವನ್ನು ಮಾಡಿ ತುಪ್ಪದ ದೀಪದಿಂದ ಆರತಿ ಮಾಡಲಾಗುತ್ತದೆ. ಆದರೆ ಇಲ್ಲೊಂದು ದೇವರು ಮಾತ್ರ ಉಳಿದೆಲ್ಲಾ ದೇವರಿಗಿಂತ ಫುಲ್ ಡಿಫ್ರೆಂಟ್. ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ, ಬೀಡಿ-ಸಿಗರೇಟ್‌ನಿಂದಲೇ ಆರತಿಯನ್ನ ಬೆಳಗುತ್ತಾರೆ.  ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದ ಖಾಪ್ರಿ ದೇವರ ಜಾತ್ರೆ ಮಾತ್ರ ಕೊಂಚ ವಿಭಿನ್ನವಾಗಿ ನಡೆಯುತ್ತದೆ.  ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ದೇವರಿಗೆ ಪೂಜೆಯನ್ನ ಸಲ್ಲಿಸುತ್ತಾರೆ. ಹರಕೆಯನ್ನ ಇಟ್ಟುಕೊಂಡು ಬಂದಂತಹ ಭಕ್ತರು ಸಿಗರೇಟು, ಕ್ಯಾಂಡಲ್‌ನಿಂದ ಆರತಿಯನ್ನ ಮಾಡೋದರ ಜೊತೆಗೆ ಮದ್ಯದಿಂದಲೇ ದೇವರಿಗೆ ಅಭಿಷೇಕವನ್ನ ಸಹ ಮಾಡ್ತಾರೆ. ಇದಲ್ಲದೇ ದೇವರಿಗೆ ಕೋಳಿ ಬಲಿಯನ್ನ ಕೊಟ್ಟು ರಕ್ತದಿಂದ ಸಹ ನೈವೇದ್ಯ ಮಾಡಲಾಗುತ್ತದೆ. ಖಾಪ್ರಿ ದೇವರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಈ ರೀತಿಯ ಹರಕೆಯನ್ನ ಮಾಡಲಾಗುತ್ತದೆ ಎಂದು ಭಕ್ತರ ನಂಬಿಕೆ

 

ತನ್ನದೇ ಆದ ಇತಿಹಾಸ ಹೊಂದಿರುವ ಖಾಪ್ರಿ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನ ತಂದು ಪೂಜಿಸುತ್ತಿದ್ದನಂತೆ. ಆದಾದ ನಂತರ ಆತ ಕಣ್ಮರೆಯಾದ ನಂತರ ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ.ನಂತರ ಕನಸ್ಸಿನಲ್ಲೂ ದೇವರು ಬಂದು ತನಗೆ ಕೋಳಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ದೇವಸ್ಥಾನವನ್ನ ಕಟ್ಟಲಾಯಿತು ಅನ್ನೋದು ಜನರ ಮಾತು. ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದು ಪ್ರತಿ ವರ್ಷ ಇದೇ ರೀತಿ ಸಾರಾಯಿ, ಸಿಗರೇಟ್, ಕೋಳಿ ಅರ್ಪಿಸುತ್ತಾರೆ. ಅಲ್ಲದೇ ಹೆದ್ದಾರಿಗೆ ಹೊಂದಿಕೊಂಡೇ ಈ ದೇವರು ಇದ್ದು ದೇವಸ್ಥಾನವಾದ ಬಳಿಕ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಸಹ ಕಡಿಮೆಯಾಗಿದೆ ಅನ್ನೋದು ಭಕ್ತರ ಅಭಿಪ್ರಾಯ. ಒಟ್ಟಾರೆ ಕಾರವಾರದಲ್ಲಿ ನಡೆಯುವ ಸಾರಾಯಿ ಜಾತ್ರೆ ಸಾಕಷ್ಟು ವಿಶೇಷತೆ ಹೊಂದಿದೆ. ದೇವರನ್ನ ಹೀಗೂ ಆರಾಧಿಸುತ್ತಾರೆ ಅನ್ನೋದಕ್ಕೆ ಖಾಪ್ರಿ ದೇವರು ಸಾಕ್ಷಿಯಾಗಿದೆ.

 

Leave a Reply

Your email address will not be published. Required fields are marked *

error: Content is protected !!