c24kannada

ವಸ್ತುಸ್ಥಿತಿಯತ್ತ

ಪೋಷಕರ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

 

ಬೀದರ್‌ : ಪೋಷಕರ ಜೊತೆ ಸೇರಿ ಪತಿಯನ್ನೇ ಕೊಂದಿರುವ ಘಟನೆ  ಬೀದರ್‌ ಜಿಲ್ಲೆಯ ಔರಾದ್ ತಾಲೂಕಿನ ಬಾಚೆಪಳ್ಳಿ ಗ್ರಾಮದಲ್ಲಿ ನಡೆದಿದೆ. ಪತಿ ಶ್ರೀಧರ್ ಶಿವರಾಜ್ ಜೋಜನೆ (30) ಕೊಲೆಯಾದ ವ್ಯಕ್ತಿಯಾಗಿದ್ದು,  ಪತ್ನಿ ಸವಿತಾ ಶ್ರೀಧರ್ ಜೋಜನೆ ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಐದು ವರ್ಷಗಳ ಹಿಂದೆ ಲಾದಾ ಗ್ರಾಮದ ಸವಿತಾಳನ್ನ ಪ್ರೀತಿಸಿ ಮದುವೆಯಾಗಿದ್ದ ಶ್ರೀಧರ್ ಆಗಾಗ ಕುಡಿದು ಬಂದು ಪತ್ನಿ ಸವಿತಾ ಜೊತೆ ಜಗಳವಾಡುತ್ತಿದ್ದರೆಂದು ತಿಳಿದು ಬಂದಿದೆ.

25ರಂದು ಬೆಳಿಗ್ಗೆ ಮನೆಯಲ್ಲಿ ಶ್ರೀಧರ್ & ಸವಿತಾಳ ಮಧ್ಯೆ ಗಲಾಟೆ ನಡೆದಿತು.  ಶ್ರೀಧರ್ ತಂದೆ ಶಿವರಾಜ್  ಇಬ್ಬರಿಗೂ ಬೈದು ಬುದ್ದಿ ಹೇಳಿದ್ದರು. ಇದಾದ ಬಳಿಕ ಸಂಜೆ ಮತ್ತೆ ಜೋರು ಗಲಾಟೆ ನಡೆದಿದ್ದು ಗಂಡನ ಕೊಲೆಯಲ್ಲಿ ಪತ್ನಿ ಸವಿತಾ ಜಗಳ ಅಂತ್ಯ ಕಂಡಳು.  ಶ್ರೀಧರ್ ಮೇಲೆ ಪತ್ನಿ ಸವಿತಾ, ಅತ್ತೆ ವಿಜಯಲಕ್ಷ್ಮಿ, ಮಾವ ಶಶಿಕಾಂತ್ ಅವರಿಂದ ಕೈಕಾಲು ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆಂದು  ಆರೋಪಿಸಲಾಗಿದೆ.  ಹಲ್ಲೆ ಹಿನ್ನೆಲೆ ತೀವ್ರವಾಗಿ ಗಾಯಗೊಂಡ ಶ್ರೀಧರ್ ಸ್ಥಳದಲ್ಲೇ ಸಾವನಪ್ಪಿದ್ದಾನೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!