ಆನೇಕಲ್ ಶಾಶ್ವತ ಕುಡಿಯುವ ನೀರಿನ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ ಶಿವಣ್ಣ
ಆನೇಕಲ್ ಶಾಶ್ವತ ಕುಡಿಯುವ ನೀರಿನ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ ಶಿವಣ್ಣ

ಆನೇಕಲ್ ಪಟ್ಟಣದ 91 ಕೋಟಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಬಿ ಶಿವಣ್ಣ ಚಾಲನೆ.
ಬೆಂ,ಆನೇಕಲ್,ಫೆ,23: ಆನೇಕಲ್ ಪಟ್ಟಣದಲ್ಲಿ 91 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಶಾಸಕ ಬಿ ಶಿವಣ್ಣ ಸೋಮವಾರ ಮದ್ಯಾಹ್ನ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಶಾಸಕ ಬಿ ಶಿವಣ್ಣ ಮಾತನಾಡಿ ಜನತೆಯ ಬಹುದಿನಗಳ ಕನಸಾದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಬೃಹತ್ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಹಾಗೂ ಸುಮಾರು 75 ಕಿ.ಮೀ ಉದ್ದದ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಸೇರಿದ್ದು , ಮುಖ್ಯವಾಗಿ ಕಾವೇರಿ ನೀರು ಸಂಗ್ರಹಾಗಾರಕ್ಕೆ ಚಾಲನೆ ನೀಡಿದ್ದು ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಆನೇಕಲ್ ಪಟ್ಟಣದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ ಇದು ನನಗೆ ಸಂತಸ ತಂದಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಎನ್ ಎಸ್ ಪದ್ಮನಾಭ ಮಾತನಾಡಿ, 2022ರಲ್ಲಿ ಮಾಜಿ ಸಂಸದ ಡಿ.ಕೆ ಸುರೇಶ್ ರ ಮತ್ತು ಶಾಸಕ ಬಿ ಶಿವಣ್ಣರ ಪರಿಶ್ರಮದಿಂದ ಮತ್ತು ನನ್ನ ಪ್ರಯತ್ನದಿಂದ ಇಂದು ಆನೇಕಲ್ ಪಟ್ಟಣಕ್ಕೆ 91 ಕೋಟಿ ಅಧಿಕ ವೆಚ್ಚದ ಓವರ್ ಹೆಡ್ ಟ್ಯಾಂಕ್ ಹಾಗೂ ಪೈಪ್ ಲೈನ್ ಕಾಮಗಾರಿಗೆ ಚಾಲನೆ ದೊರೆತಿದೆ, ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ದೊಡ್ಡ ಹಾಗಡೆ ಹರೀಶ್, ಎನ್ಎಸ್ ಪದ್ಮನಾಭ, ಅರ್ಜುನ್, ಮಾಲ್ತೇಶ್, ರಾಜೇಂದ್ರ ಪ್ರಸಾದ್, ಪುರಸಭಾ ಮುಖ್ಯಾಧಿಕಾರಿ, ಲೋಕೇಶ್ ಗೌಡ, ಮತ್ತಿತರರು ಹಾಜರಿದ್ದರು
