c24kannada

ವಸ್ತುಸ್ಥಿತಿಯತ್ತ

ಬಂಡೆ ಗಣಿಗಾರಿಕೆ ಹಾಗೂ ನಿಲ್ಲದ ಓವರ್ ಲೋಡ್ ಟಿಪ್ಪರ್‌ ಸಂಚಾರ.. ಪ್ರಾಣದ ಭೀತಿಯಲ್ಲಿ ಸಾರ್ವಜನಿಕರು

ಗುಡಿಬಂಡೆ  : ವರ್ಲಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ಕ್ರಷರ್ ಕಲ್ಲು ಸಾಗಾಣಿಕೆ ಮಾಡುವ ಟಿಪ್ಪರ್ ಸಂಚಾರಕ್ಕೇನು ಕಡಿಮೆಯಿಲ್ಲ, ಓವರ್ ಲೋಡ್ ಸಾಗಾಣಿಕೆಯಿಂದ ರಸ್ತೆಗಳ ಹಾಳಾಗುತ್ತಿವೆ, ಕಡಿಮೆ ಟನ್‌ಗೆ ಆದೇಶ ಪಡೆದುಕೊಂಡು ದುಪ್ಪಟ್ಟು ಟನ್ ಸಾಗಾಣಿಕೆ  ಆಗುತ್ತಿದೆ. ಓವರ್ ಲೋಡ್ ತುಂಬಿದ ಟಿಪ್ಪರ್‌ಗಳ ಸಂಚಾರಕ್ಕೆ ಬ್ರೇಕ್ ಹಾಕಲು ಆಗುತ್ತಿಲ್ಲ.  ಓವರ್ ಲೋಡ್ ಟಿಪ್ಪರ್ ಹಾವಳಿಯ ಜತೆಗೆ ಮಿತಿ ಮೀರಿದ ವೇಗ ಹಾಗೂ ಟಿಪ್ಪರ್ ಮೇಲೆ ಸುರಕ್ಷಿತ ಹೊದಿಕೆ ಇಲ್ಲದೆ ಸಂಚರಿಸುವ ಕಾರಣ ಜನರ ಕಣ್ಣಿಗೆ ಧೂಳು ಹಾಗೂ ಬ್ರೇಕ್ ಹಾಕಿದಾಗ ಓವರ್ ಲೋಡ್ ಕಲ್ಲು, ಜಲ್ಲಿ ರಸ್ತೆ ಹಾಗೂ ರಸ್ತೆಗಳ ತಿರುವಿನಲ್ಲಿ ಉದುರುತ್ತಿವೆ.

 

 

ರಸ್ತೆಯಲ್ಲಿ ಸಂಚಾರ ಮಾಡಲು  ಹಲವು ವಾಹನ ಸವಾರರು ಭಯಭೀತರಾಗುತ್ತಿದ್ದಾರೆ .  ಸ್ಥಳೀಯ ರೈತ ಮುಖಂಡರು ಹಾಗೂ ಡಿಎಸ್ಎಸ್ ಸಂಘಟನಾ ಹೋರಾಟಗಾರರು ಆಕ್ರೋಶ  ವ್ಯಕ್ತಪಡಿಸುತ್ತಿದ್ದಾರೆ . ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಭೇಟಿ ಮಾಡಿ ಹಾಗೂ ಈ ವರ್ಲಕೊಂಡ ಕೊಲಂಪಲ್ಲಿ ರಸ್ತೆ ಜಿಲ್ಲಾ ಪಂಚಾಯಿತಿಗೆ ಸೇರಿರುವ ರಸ್ತೆ ಹಾಗಾಗಿ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಈ ಭಾಗದ ಶಾಸಕರು ದಯವಿಟ್ಟು ಗಮನ ಹರಿಸಬೇಕು ಎಂದು ಹೇಳಿದರು.

 

ಕ್ರಷರ್ ಕಲ್ಲು ಮಾಲೀಕರಿಗೆ  ಎಷ್ಟು ಹೇಳಿದರು ಕಿವಿಗೆ ಹಾಕೋಳ್ಳುತ್ತಿಲ್ಲ , ನಮ್ಮ ಇಷ್ಟ ನಾವು ಸರ್ಕಾರದಿಂದ ಆದೇಶಗಳು ಇವೆ ಎಂದು ಉಡಾಫೆ ಉತ್ತರಗಳನ್ನು ನೀಡುತ್ತಾರೆ .  ಟಿಪ್ಪರ್ ಓವರ್ ಲೋಡನ್ನು ಕಡಿವಾಣ ಹಾಕಬೇಕು. ಕೊಲಂಪಲ್ಲಿ ವರ್ಲಕೊಂಡ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ಪ್ರಾಣದ ನಷ್ಟವು ಉಂಟಾಗುವ ಸಂಭವವಿದೆ.  ಸರ್ಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡು ನ್ಯಾಯ ಒದಗಿಸಬೇಕು ಎಂದು ಡಿಎಸ್ಎಸ್ ಸಂಘದ ಜಿಲ್ಲಾ ಕಾರ್ಯದರ್ಶಿಗಳು ರಾಜು ಹಾಗೂ ಸಾರ್ವಜನಿಕರು,  ರೈತರು  ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!