ಉಗ್ರಗಾಮಿ ಸಂಘಟನೆಗಳ ಭಯೋತ್ಪಾಧನೆಯನ್ನು ಬುಡಸಮೇತ ಕಿತ್ತು ಹಾಕಲಾಗ್ತಿದೆ-ವಿಜಯೇಂದ್ರ
https://youtu.be/6WisXpk39rs?si=64L2f_Touq8T9YMr
ಚಿಕ್ಕಬಳ್ಳಾಪುರ : ಆಪರೇಷನ್ ಸಿಂಧೂರ ಮೂಲಕ ಪಾಕ್ ಉಗ್ರ ನೆಲೆಗಳ ದ್ವಂಸ ಹಿನ್ನೆಲೆ ವಿಜಯೇಂದ್ರ ಪ್ರತಿಕ್ರಿಯಿಸಿದರು. ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಮಾತನಾಡಿದ ಅವರು ಇಡೀ ಭಾರತ ಹೆಮ್ಮೆ ಪಡುವ ಶುಭ ಘಳಿಗೆ, ಫಹಲ್ಗಾಮ್ ನಲ್ಲಿ 26 ಹಿಂದೂಗಳ ಹತ್ಯೆ ಮಾಡಿದ ಉಗ್ರರ ವಿರುದ್ದ ಉಗ್ರವಾದ ಕ್ರಮ ಕೈಗೊಂಡಿದ್ದಾರೆ. ಭಯೋತ್ಪಾದಕರಿಗೆ ಬುದ್ದಿ ಹೇಳುವ ಕೆಲಸ ಆಗಿದೆ. ಈ ಅಪೇಕ್ಷೆ ಪ್ರತಿಯೊಬ್ಬ ಭಾರತೀಯರಿಗೂ ಇತ್ತು. ನಿನ್ನೆ ಮದ್ಯ ರಾತ್ರಿ ಪಾಕಿಸ್ತಾನದ 9 ಕಡೆ ಉಗ್ರಗಾಮಿಗಳ ತಾಣಗಳನ್ನ ಭಸ್ಮ ಮಾಡುವ ಕೆಲಸ ಮಾಡಿದ್ದಾರೆ. ಉಗ್ರಗಾಮಿ ಸಂಘಟನೆಗಳನ್ನು ಭಯೋತ್ಪಾಧನೆಯನ್ನು ಬುಡಸಮೇತ ಕಿತ್ತು ಹಾಕಲಾಗ್ತಿದೆ. ನರೇಂದ್ರ ಮೋದಿ ಉಗ್ರಗಾಮಿಗಳನ್ನು ಮಟ್ಟ ಹಾಕುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಮೋದಿ ಜಗತ್ತಿನ ಯಾವುದೇ ಕಡೆ ಹೋದರು ಉಗ್ರಗಾಮಿಗಳನ್ನು ಮಟ್ಟಹಾಕುವಂತೆ ಹೇಳಿದ್ದಾರೆ. ಇವತ್ತು ಆ ದಿನ ಬಂದಿದೆ ಉಗ್ರಗಾಮಿಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗ್ತಿದೆ, ಭಾರತೀಯ ಯೋಧರು ಕಾರ್ಯಾಚರಣೆ ಮಾಡಿ ಯಶಸ್ವಿಯಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
