ದುಷ್ಕರ್ಮಿಗಳಿಗೆ ರಕ್ಷಣೆ ಕೊಡುವಂತಹ ಒಳ ಒಪ್ಪಂದವನ್ನು ರಾಜ್ಯ ಸರ್ಕಾರ ಬಿಡಬೇಕು : ವಿ ಸೋಮಣ್ಣ ಕಿಡಿ
ತುಮಕೂರು : ಮಂಗಳೂರಿನಲ್ಲಿ ಮತ್ತೆ ಹಿಂದು ಮುಖಂಡರ ಕೊಲೆಗೆ ಬೆದರಿಕೆ ಹಾಕಿರುವ ವಿಚಾರ ಕೇಳಿಬಂದಿದ್ದು, ಕೇಂದ್ರ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.ರಾಜ್ಯ ಸರ್ಕಾರ ಮಾತಾಡೋದನ್ನು ಕಡಿಮೆ ಮಾಡಿ..ರಾಜ್ಯ ಸರ್ಕಾರ ಮಾತಾಡೋದನ್ನು ಕಡಿಮೆ ಮಾಡಿ. ಬೇರೆಯವರ ಮನೆಗೆ ಬೆಂಕಿ ಬಿದ್ದಿರೋದನ್ನು ಕಂಡು ಖುಷಿ ಪಡುತ್ತೀರಿ. ಆ ಬೆಂಕಿ ನಿಮ್ಮ ಮನೆಗೂ ಬೀಳುತ್ತದೆ ಅನ್ನೋದು ನೆನಪಿರಲಿ. ಬಹಿರಂಗವಾಗಿ ರಾಜಾರೋಷವಾಗಿ ಕೊಲೆ ಬೆದರಿಕೆ ಹಾಕುವವರಿಗೆ ಸರ್ಕಾರ ಹೆಡೆಮುರಿ ಕಟ್ಟಬೇಕು. ರಾಜ್ಯ ಸರ್ಕಾರ ನಿಷ್ಕ್ರಿಯ ಆದಾಗ ಎನ್ ಐ ಎ ನೂ ಎಂಟ್ರಿ ಆಗುತ್ತೆ. ಭಾರತ ಸರ್ಕಾರನೂ ಎಂಟ್ರಿ ಆಗುತ್ತೆ ರಾಜ್ಯ ಸರ್ಕಾರಕ್ಕೆ ವಿ ಸೋಮಣ್ಣ ಎಚ್ಚರಿಕೆ ಕೊಟ್ಟರು.
ದುಷ್ಕರ್ಮಿಗಳ ಹೆಡೆಮುರಿ ಕಟ್ಟುತ್ತೇವೆ ಎಂದು ಎದುರಿಗೆ ಹೇಳಿ ಅವರ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವುದನ್ನು ಸರ್ಕಾರ ಬಿಡಬೇಕು. ಅಂತವರಿಗೆ ರಕ್ಷಣೆ ಕೊಡುವಂತಹ ಒಳ ಒಪ್ಪಂದವನ್ನು ರಾಜ್ಯ ಸರ್ಕಾರ ಬಿಡಬೇಕು. ಒಬ್ಬರ ಜೀವ ತೆಗೆಯುತ್ತೇವೆ ಅಂತ ಬಹಿರಂಗವಾಗಿ ಬೆದರಿಕೆ ಹಾಕುವ ಪಟ್ಟಭದ್ರ ಹಿತಾಶಕ್ತಿಗಳಿಗೆ ಕನಿಕರ ತೋರಿಸಬೇಡಿ. ಸರ್ಕಾರ ಆ ಸಮುದಾಯದ ಮೇಲೆ ಸಾಪ್ಟ್ ಕರ್ನಾರ್ ತೋರುವುದನ್ನು ಬಿಡಬೇಕು ಎಂದು ಹೇಳಿದರು.
