c24kannada

ವಸ್ತುಸ್ಥಿತಿಯತ್ತ

ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ ರಿಯಾನ್ ಪರಾಗ್..!

ಕೋಲ್ಕತ್ತ ನೈಟ್​ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ನ ಕ್ಯಾಪ್ಟನ್ ರಿಯಾನ್ ಪರಾಗ್ ವಿನಾಶಕಾರಿ ಬ್ಯಾಟಿಂಗ್ ನಡೆಸಿದರು. ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಹೊಸ ದಾಖಲೆಯನ್ನು ರಿಯಾನ್ ಪರಾಗ್  ಸೃಷ್ಟಿಸಿದರು. ಕೆಕೆಆರ್ ಬೌಲರ್ ಮೊಯಿನ್ ಅಲಿ ಎಸೆದ ಇನ್ನಿಂಗ್ಸ್‌ನ 13ನೇ ಓವರ್‌ನ ಮೊದಲ ಎಸೆತದಲ್ಲಿ ಆರ್‌ಆರ್ ಬ್ಯಾಟರ್ ಹೆಟ್ಮೆಯರ್ ಸಿಂಗಲ್ ತೆಗೆದುಕೊಂಡು ರಿಯಾನ್ ಪರಾಗ್‌ಗೆ ಸ್ಟ್ರೈಕ್ ನೀಡಿದರು. ನಂತರ  ರಿಯಾನ್ ಪರಾಗ್ ಸತತ 4 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.

 

ನಂತರ ಮೊಯಿನ್ ಅಲಿ ಒಂದು ವೈಡ್ ಬಾಲ್ ಮಾಡಿದರು. ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸುವ ಮೂಲಕ ಒಂದೇ ಓವರ್​​ನಲ್ಲಿ ಐದು ಸಿಕ್ಸರ್ ಬಾರಿಸಿದರು. ನಂತರ ವರುಣ್ ಚಕ್ರವರ್ತಿ ಓವರ್ ಬೌಲ್ ಮಾಡಲು ಬಂದರು. ಹೆಟ್ಮೆಯರ್ ಮತ್ತೊಮ್ಮೆ ಸಿಂಗಲ್ ತೆಗೆದುಕೊಂಡು ಪರಾಗ್‌ಗೆ ಸ್ಟ್ರೈಕ್ ನೀಡಿದರು. ಆಗ ಮತ್ತೊಂದು ಸಿಕ್ಸರ್​ ಬಾರಿಸಿದರು. ಆ ಮೂಲಕ ತಾವು ಎದುರಿಸಿದ ಆರು ಬಾಲ್​ನಲ್ಲಿ 6 ಸಿಕ್ಸರ್ ಬಾರಿಸಿದರು, ಈ ಆರು ಸಿಕ್ಸರ್‌ಗಳು ಒಂದೇ ಓವರ್‌ನಲ್ಲಿ ಬರದಿದ್ದರೂ, ಅವು ಸತತ ಆರು ಎಸೆತಗಳಲ್ಲಿ ಬಂದವು.

 

ಕೊನೆಯ 2 ಓವರ್‌ಗಳವರೆಗೆ ನಾನು ಕ್ರೀಸ್​​ನಲ್ಲಿ ಇರಬೇಕೆಂದು ಪ್ಲಾನ್ ಮಾಡಿದ್ದೆ. ದುರಾದೃಷ್ಟವಶಾತ್ 18ನೇ ಓವರ್‌ನಲ್ಲಿ ಔಟಾದೆ. ನನ್ನ ಲೆಕ್ಕಾಚಾರ ತಪ್ಪಾಯ್ತಯ್ತು. ಕೊನೆಯ 6 ಓವರ್‌ಗಳಲ್ಲಿ ನಮಗೆ ಉತ್ತಮ ಆಯ್ಕೆಗಳು ಸಿಗಬಹುದಿತ್ತು ಎಂದು ನಾನು ಭಾವಿಸುತ್ತೇನೆ. ಬೇರೆಯವರ ಬಗ್ಗೆ ದೂರುವುದಕ್ಕೆ ಏನೂ ಇಲ್ಲ. ನಾನೇ ಅದನ್ನು ಮಾಡಬೇಕಿತ್ತು ಎಂದು ಹೇಳಿದರು. ಪರಾಗ್ ಬ್ಯಾಟಿಂಗ್ ಅಬ್ಬರದ ನಡುವೆಯೂ ಕೆಕೆಆರ್​ ರಾಜಸ್ಥಾನ್ ವಿರುದ್ಧ ಕೇವಲ ಒಂದು ರನ್​ಗಳಿಂದ ಗೆಲುವು ಸಾಧಿಸಿತು.

Leave a Reply

Your email address will not be published. Required fields are marked *

error: Content is protected !!