ಕರ್ನಾಟಕ ರಿಪಬ್ಲಿಕ್ ಸೇನೆ ಆನೇಕಲ್ ತಾಲೂಕು ಶಾಖೆಯಿಂದ ತಾಲೂಕು ಕಚೇರಿಗೆ ಮುತ್ತಿಗೆ.
ಆನೇಕಲ್ ಶಕ್ತಿ ಕೇಂದ್ರದ ಮುಂದೆ ಕರ್ನಾಟಕ ರಿಪಬ್ಲಿಕ್ ಸೇನೆ ಘರ್ಜನೆ.
ಆನೇಕಲ್ ಶಕ್ತಿ ಕೇಂದ್ರದ ಮುಂದೆ ಕರ್ನಾಟಕ ರಿಪಬ್ಲಿಕ್ ಸೇನೆ ಘರ್ಜನೆ.

ಆನೇಕಲ್,ಜೂ,೧೫: ಆನೇಕಲ್ ಒಂದು ಮೀಸಲು ಕ್ಷೇತ್ರ ಅಲ್ಲದೆ ರಾಜ್ಯದ ಗಡಿ ಭಾಗ ಅತ್ತ ಜಿಬಿಎಗೂ ಒಳಪಡದೇ ಕೇವಲ ಜನಪ್ರತಿನಿಧಿಗಳ ಹುಸಿ ಆಶ್ವಾಸನೆಗಳಲ್ಲಿಯೇ ಉಸಿರಾಡುತ್ತಿರುವ ಹಳ್ಳಿಯಾಗಿದೆ. ಅಂತದ್ದರಲ್ಲಿ ಗೆದ್ದು ಬೀಗುತ್ತಿರುವ ಶಾಸಕ-ಸಂಸದರು ಬಡವರತ್ತ ಮುಖ ಮಾಡಲು ಮೂಗು ಮುರಿಯುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಿಪಬ್ಲಿಕನ್ ಸೇನೆ ಕಾರ್ಯಕರ್ತರು ಇಂದು ಶಕ್ತಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
ರಾಜ್ಯಾದ್ಯಕ್ಷ ಪ್ರಜ್ವಲ್ ಜಿಗಣಿ ಶಂಕರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಬಡವರ ಆಸರೆಯಾಗಿರುವ ಕೆಲ ಯೋಜನೆಗಳನ್ನು ಪಡೆಯಲು ತಾಲೂಕು ಕಚೇರಿಗೆ ಬಂದರೆ ಇತ್ತ ಪಡಿತರ ಚೀಟಿ ಕಸಿದುಕೊಳ್ಳಲಾಗಿದೆ, ಇದರಿಂದ ಆದಾಯ ಪ್ರಮಾಣ ಪತ್ರವೂ ಪರಿಗಣನೆಗೆ ಬರುತ್ತಿಲ್ಲ, ಸಣ್ಣ ಪುಣ್ಣ ಮೈಕ್ರೋ ಫೈನಾನ್ಸ್ ಸಾಲ ಪಡೆದರೆ ಸಾಕು ಆರ್ಥಿಕವಾಗಿ ಸಬಲರು ಶ್ರೀಮಂತರು ಎಂದು ಸರ್ಕಾರ ನಿರ್ದರಿಸಿ ಬಿಡುತ್ತದೆ ಇದರಿಂದ ಬಡವರ ಬದುಕು ದುಸ್ತರವಾಗಿದೆ ಆಳುವ ಸರ್ಕಾರಗಳು ಇನ್ನಿಲ್ಲದ ಆಮಿಷವೊಡ್ಡಿ ವಂಚಿಸುತ್ತಿವೆ ಎಂದು ತಾಲೂಕು ಅದ್ಯಕ್ಷ ಮೇಡಹಳ್ಳಿ ಆರ್ ಮುರಳಿ ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ನೂತನ ಮುಖ್ಯಮಂತ್ರಿ ಬಂದರು ಮತ್ತೊಮ್ಮೆ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕಂತೆ ಆದರೆ ಇದೀಗಿನ ಹಸಿರು ಪಡಿತರ ಚೀಟಿಗಳು ಗೊಂದಲಕ್ಕೀಡಾಗಿ ಎಲ್ಲರೂ ಶ್ರೀಮಂತರಾಗಿ ಬೀಗುತ್ತಿದ್ದಾರೆ ಎಂದು ಸರ್ಕಾರ ಬಡವರ ಹಣೆ ಮೇಲೆ ಮುದ್ರೆ ಒತ್ತಿದೆ ಇದರಿಂದ ಗ್ರಾಮೀಣ ಭಾಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ಉಪಾದ್ಯಕ್ಷ ಆನೇಕಲ್ ದಲಿತ್ ಚಿನ್ನಪ್ಪ ಆರೋಪಿಸಿದರು.
ತಾಲೂಕು ಆಡಳಿತದ ಶಕ್ತಿ ಕೇಂದ್ರ ವಾರದ ಮೊದಲ ದಿನ ಖಾಲಿ ಖಾಲಿಯಾಗಿರುತ್ತದೆ, ತಹಶೀಲ್ದಾರ್ ಬರುವುದೇ ವಾರದ ದಿನಗಳಲ್ಲಿ ಸಂಜೆ, ಅಷ್ಟರಲ್ಲಿ ರೈತರು ವಿದ್ಯಾರ್ಥಿಗಳ ಪೋಷಕರು ಆದಾಯ ಪ್ರಮಾಣಪತ್ರ, ಜಾತಿ, ಜಮೀನು ದಾಖಲೆಗಳ ಪಡೆಯಲು ಪರದಾಡಬೇಕು, ಅಲ್ಲದೆ ಸರ್ವರ್ ಇಲ್ಲ ವಿದ್ಯುತ್ ಇಲ್ಲ ಸ್ಕ್ಯಾನಿಂಗ್ ನಡೀತಿದೆ ಸಿಬ್ಬಂದಿಯಿಲ್ಲ ಎಂಬ ಹಾರಿಕೆ ಉತ್ತರಗಳನ್ನು ಕೇಳಿ ಕೇಳಿ ಜನ ರೋಸಿ ಹೋಗಿದ್ದಾರೆ, ಇನ್ನು ತಾಲೂಕಿನಾದ್ಯಂತ ರಸ್ತೆಗಳು ಗುಂಡಿಗಳಾಗಿ ಬಿದ್ದು ಹೈರಾಣವಾದರೂ ಶಾಸಕರು ರಸ್ತೆಗಳತ್ತ ಮುಖಮಾಡಿಲ್ಲ ಎಂದು ರಾಜ್ಯ ಕಾರ್ಯದರ್ಶಿ ಹೊಂಪಲಘಟ್ಟ ರವಿ ಸರ್ಕಾರವನ್ನು ಎಚ್ಚರಿಸಿದರು.
ಆದಾಯ ಮಿತಿ ೧.೨೦ಲಕ್ಷಕ್ಕೆ ಏರಿಸಿರುವ ಸರ್ಕಾರ ಅದೇ ನೀಡುವ ಗ್ಯಾರಂಟಿ ಯೋಜನೆಗಳಲ್ಲಿ ೨೦೦೦ದ ಜೊತೆಗೆ ಮೈಕ್ರೋ ಫೈನಾನ್ಸ್ ವಹಿವಾಟು ಸೇರಿ ಹಣದ ವ್ಯವಹಾಋ ಅಷ್ಟಕ್ಕೆ ಮೀರುತ್ತದೆ ಆದ್ದರಿಂದ ಮಾನದಂಡದ ಮಿತಿಯನ್ನು ಬಡವರ ಅನುಕೂಲಕ್ಕೆ ತಕ್ಕ ಹಾಗೆ ಬದಲಾಯಿಸಬೇಕು ಎಂದು ಜಿಲ್ಲಾಧ್ಯಕ್ಷ ಹೆಬ್ಬಗೋಡಿ ಎ ಮುನಿರಾಜು ಮನವಿ ಮಾಡಿದರು.
ತಾಲೂಕು ಆಡಳಿತದ ವೈಖರಿಯನ್ನು ಕಂಡೂ ಕಾಣದಂತೆ ಕುಳಿತಿರುವ ಶಾಸಕ ಸಂಸದರು ಕೂಡಲೇ ಹಳ್ಳಿಗಳ ಕಡೆಗೆ ಬರಬೇಕು ರಸ್ತೆ ಮೂಲಭೂತ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಬೇಕು ಎಂದು ವಾರದ ಗಡುವು ನೀಡಿ ಹೋರಾಟಗಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಕೊನೆಯಲ್ಲಿ ಗ್ರೇಡ್ ೨ ತಹಶೀಲ್ದಾಋಇ ಭವಾನಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಬೆಂ ವಿಭಾಗೀಯ ಅದ್ಯಕ್ಷ ದೊಡ್ಡ ಹಾಗಡೆ ಎಂ ಯಲ್ಲಪ್ಪ, ಜಿಲ್ಲಾ ಕಾರ್ಯದರ್ಶಿ ಬಿಎಂ ನಾಗೇಶ್, ಹಿರಿಯ ಮುಖಂಡಬ ಚೂಡಹಳ್ಳಿ ಕಾಳಯ್ಯ, ಗೌರವಾಧ್ಯಕ್ಷ ಬುಲೆಟ್ ಯಲ್ಲಪ್ಪ, ರೈತ ಕೂಡ್ಲು ಜಯರಾಮ್, ಪಟ್ಟಣಗೆರೆ ಗೊಲ್ಲಹಳ್ಳಿ ಯಲ್ಲಪ್ಪ, ಗೌರೇನಹಳ್ಳಿ ಜಬೀರ್, ಆಲಿ, ಯೂಸೂಪ್, ಕೊಡ್ಲಿಪುರದ ಮಂಜಣ್ಣ, ಶ್ರೀರಾಮು,ಕಲಾಮಂಡಳಿ ನಾಗರಾಜ್, ದಸಂಸ ಸಂಚಾಲಕ ಸಕಲವಾರ ನಾರಾಯಣ್, ಸೊಪ್ಪಹಳ್ಳಿ ಬಸವರಾಜ್ ಇದ್ದರು.