September 2026
M T W T F S S
 123456
78910111213
14151617181920
21222324252627
282930  
November 3, 2026

c24kannada

ವಸ್ತುಸ್ಥಿತಿಯತ್ತ

ಕರ್ನಾಟಕ ದಲಿತ ಹಿಂದುಳಿದ ಕ್ರೈಸ್ತ ಧಾರ್ಮಿಕ ಅಲ್ಪಸಂಖ್ಯಾತ ಒಕ್ಕೂಟದಿಂದ ಪೆರಿಯಾರ್ ಜಯಂತಿ

ಕ್ರೈಸ್ತ ದಲಿತ ಹಿಂದುಳಿದ ಒಕ್ಕೂಟದಿಂದ ಪೆರಿಯಾರ್ ಜಯಂತಿ

 

 

ಶೋಷಿತರನ್ನ ಆಳುವುದಕ್ಕಾಗಿಯೇ ಮೇಲ್ವರ್ಗ ದೇವರನ್ನು ಸೃಷ್ಟಿಸಿಕೊಂಡಿದ್ದಾನೆ ಎಂದು ಪೆರಿಯಾರ್‌ ಅವರ ಜೀವಿತಾವಧಿಯಲ್ಲಿ ತಿಳಿಸುತ್ತಾ ಬಂದಿದ್ದಾರೆ. -ಸುರೇಶ್‌ ಗೌತಮ್.‌
ಆನೇಕಲ್‌,ಸೆ,೧೭: ಸಮಾಜದಲ್ಲಿ ತುಳಿಯಲೆಂದೇ ದೇವರನ್ನ ಮೇಲ್ವರ್ಗ ಎನ್ನಿಸಿಕೊಂಡವರು ದೇವರನ್ನು ಸೃಷ್ಟಿಸಿದ್ದಾರೆ ಅದರ ಮೂಲಕ ಮೂಢನಂಬಿಕೆ ಬಿತ್ತಿ ಸಂಪಾದಿಸಿದ್ದನ್ನೆಲ್ಲಾ ಇವಕ್ಕೇ ಖರ್ಚು ಮಾಡಿ ಜೀವನದಲ್ಲಿ ಶತಮಾನಗಳು ಕಳೆದರೂ ಮೇಲೇಳದಂತೆ ಮಾಡಿದ್ದಾರೆ ಎಂದು ಪೆರಿಯಾರ್‌ ರಾಮಸ್ವಾಮಿ ನಾಯ್ಕರ್‌ ತಿಳಿಸಿದ್ದಾರೆ. ಆದರೆ ಅವರು ತೋರಿಸಿದ ಮಾರ್ಗದಲ್ಲಿ ನಡೆಯಲು ನಾವು ಇನ್ನೂ ತಿಣುಕಾಡುತ್ತಿದ್ದೇವೆ ಎಂದು ರಾಮನಗರದ ಸುರೇಶ್‌ ಗೌತಮ್‌ ಬೇಸರ ವ್ಯಕ್ತಪಡಿಸಿದರು.
ಅವರು ಆನೇಕಲ್‌ ಜನತಾಕಾಲನಿಯ ಡಾ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ಹಿಂದುಳಿದ ಕ್ರೈಸ್ತ ಧಾರ್ಮಿಕ ಅಲ್ಪಸಂಖ್ಯಾತ ಒಕ್ಕೂಟ ಹಾಗು ಕರ್ನಾಟಕ ಕ್ರೈಸ್ತ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಪೆರಿಯಾರ್‌ರ ೧೪೭ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ಜೀವಮಾನದುದ್ದಕ್ಕೂ ಪೆರಿಯಾರ್‌ ಮೂಢನಂಬಿಕೆ, ದೇವರ ಸೃಷ್ಟಿಯ ಹಿನ್ನಲೆಯನ್ನು ಹೇಳಿದ್ದಷ್ಟೇ ಅಲ್ಲ ಅದನ್ನು ಹಾದಿ ಬೀದಿಯಲ್ಲಿ ಖಂಡಿಸುತ್ತಾ ಇಡೀ ತಮಿಳುನಾಡಿನ ಚರಿತ್ರೆಯನ್ನೇ ಬದಲಿಸಿದ ಅಪ್ರತಿಮ ಸಾಕ್ರೆಟಿಸ್‌ ಪೆರಯಾರ್‌ ಆಗಿದ್ದರು. ಇಂದು ಶತಮಾನ ಕಳೆದರೂ ಅಕ್ಷರ ಜ್ಙಾನವಿರುವ ನಾವು ಅದೇ ಮೂಢ ನಂಬಿಕೆಗಳತ್ತ ದೇವರು ದಿಂಡಿರು ಅಂತಲೇ ದೇವಾಲಯಗಳ ಕದ ತಟ್ಟುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.
ಸಂವಿದಾನಾತ್ಮಕವಾಗಿಯೇ ವೈಜ್ಞಾನಿಕ ವೈಚಾರಿಕ ಕ್ರಾಂತಿ ಮೂಲಕ ಪ್ರಶ್ನಿಸದೇ ಏನನ್ನು ಒಪ್ಪಬೇಡಿ ಎಂದು ಸಾರಿ ಇಡೀ ದೇಶಕ್ಕೆ ಮಾದರಿಯಾಗಿ ನಿಂತವರು ತಂದೆ ಪೆರಿಯಾರ್‌ ಇಡೀ ಶೋಷಿತ ಸಮುದಾಯ ಇಂದು ಅವರ ನಡೆಯಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.
ಪಿವಿಸಿಯ ಯಡವನಹಳ್ಳಿ ಕೃಷ್ಣಪ್ಪ, ನಾಗರತ್ನಮ್ಮ, ಮುನಿರತ್ನ, ಶಿವಬಾಲು, ಮುಂತಾದವರು ಮಾತನಾಡಿದರು.
ವೇದಿಕೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ದೊಮ್ಮಸಂದ್ರ ಕೆ ಮುನಿರಾಜು, ರಾಜ್ಯ ಪ್ರ ಕಾರ್ಯದರ್ಶಿ ವಿ ರಮೇಶ್‌ ನಿರೂಪಿಸಿ ರಾಜ್ಯ ಕಾರ್ಯದರ್ಶಿ ಎ ಸತೀಶ್‌ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನು ರಾಜ್ಯ ಉಪಾಧ್ಯಕ್ಷ ಬಿಎಂ ವೆಂಕಟೇಶ್‌ ಮಾಡಿದರು.ಶೋಷಿತರನ್ನ ಆಳುವುದಕ್ಕಾಗಿಯೇ ಮೇಲ್ವರ್ಗ ದೇವರನ್ನು ಸೃಷ್ಟಿಸಿಕೊಂಡಿದ್ದಾರೆ. ಎಂದು ಪೆರಿಯಾರ್‌ ಅವರ ಜೀವಿತಾವಧಿಯಲ್ಲಿ ತಿಳಿಸುತ್ತಾ ಬಂದಿದ್ದಾರೆ. -ಸುರೇಶ್‌ ಗೌತಮ್.‌
ಆನೇಕಲ್‌,ಸೆ,೧೭: ಸಮಾಜದಲ್ಲಿ ತುಳಿಯಲೆಂದೇ ದೇವರನ್ನ ಮೇಲ್ವರ್ಗ ಎನ್ನಿಸಿಕೊಂಡವರು ಸೃಷ್ಟಿಸಿದ್ದಾರೆ ಅದರ ಮೂಲಕ ಮೂಢನಂಬಿಕೆ ಬಿತ್ತಿ ಸಂಪಾದಿಸಿದ್ದನ್ನೆಲ್ಲಾ ಇವಕ್ಕೇ ಖರ್ಚು ಮಾಡಿ ಜೀವನದಲ್ಲಿ ಶತಮಾನಗಳು ಕಳೆದರೂ ಬಡವರನ್ನ ಮೇಲೇಳದಂತೆ ಮಾಡಿದ್ದಾರೆ ಎಂದು ಪೆರಿಯಾರ್‌ ರಾಮಸ್ವಾಮಿ ನಾಯ್ಕರ್‌ ತಿಳಿಸಿದ್ದಾರೆ. ಆದರೆ ಅವರು ತೋರಿಸಿದ ಮಾರ್ಗದಲ್ಲಿ ನಡೆಯಲು ನಾವು ಇನ್ನೂ ತಿಣುಕಾಡುತ್ತಿದ್ದೇವೆ ಎಂದು ರಾಮನಗರದ ಸುರೇಶ್‌ ಗೌತಮ್‌ ಬೇಸರ ವ್ಯಕ್ತಪಡಿಸಿದರು.
ಅವರು ಆನೇಕಲ್‌ ಜನತಾಕಾಲನಿಯ ಡಾ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ಹಿಂದುಳಿದ ಕ್ರೈಸ್ತ ಧಾರ್ಮಿಕ ಅಲ್ಪಸಂಖ್ಯಾತ ಒಕ್ಕೂಟ ಹಾಗು ಕರ್ನಾಟಕ ಕ್ರೈಸ್ತ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಪೆರಿಯಾರ್‌ರ ೧೪೭ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ಜೀವಮಾನದುದ್ದಕ್ಕೂ ಪೆರಿಯಾರ್‌ ಮೂಢನಂಬಿಕೆ, ದೇವರ ಸೃಷ್ಟಿಯ ಮರ್ಮದ ಹಿನ್ನಲೆಯನ್ನು ಹೇಳಿದ್ದಷ್ಟೇ ಅಲ್ಲ ಅದನ್ನು ಹಾದಿ ಬೀದಿಯಲ್ಲಿ ಖಂಡಿಸುತ್ತಾ ಇಡೀ ತಮಿಳುನಾಡಿನ ಚರಿತ್ರೆಯನ್ನೇ ಬದಲಿಸಿದ ಅಪ್ರತಿಮ ಸಾಕ್ರೆಟಿಸ್‌ ಪೆರಿಯಾರ್‌ ಆಗಿದ್ದರು. ಇಂದು ಶತಮಾನ ಕಳೆದರೂ ಅಕ್ಷರ ಜ್ಙಾನವಿರುವ ನಾವು ಅದೇ ಮೂಢ ನಂಬಿಕೆಗಳತ್ತ ದೇವರು ದಿಂಡಿರು ಅಂತಲೇ ದೇವಾಲಯಗಳ ಕದ ತಟ್ಟುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.
ಸಂವಿದಾನಾತ್ಮಕವಾಗಿಯೇ ವೈಜ್ಞಾನಿಕ ವೈಚಾರಿಕ ಕ್ರಾಂತಿ ಮೂಲಕ ಪ್ರಶ್ನಿಸದೇ ಏನನ್ನು ಒಪ್ಪಬೇಡಿ ಎಂದು ಸಾರಿ ಇಡೀ ದೇಶಕ್ಕೆ ಮಾದರಿಯಾಗಿ ನಿಂತವರು ತಂದೆ ಪೆರಿಯಾರ್‌ ಇಡೀ ಶೋಷಿತ ಸಮುದಾಯ ಇಂದು ಅವರ ನಡೆಯಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.
ಗೌರವಾಧ್ಯಕ್ಷ ಸಿಆರ್ ಲಕ್ಷ್ಮಣ್, ಉಪಾಧ್ಯಕ್ಷರಾದ ಮೊದಲಿಯಾರ್ ನಾರಯಣಸ್ವಾಮಿ, ಪಿ ವೆಂಕಟೇಶ್, ಅಪ್ಸರ್, ಪಿವಿಸಿಯ ಯಡವನಹಳ್ಳಿ ಕೃಷ್ಣಪ್ಪ, ನಾಗರತ್ನಮ್ಮ, ಮುನಿರತ್ನ, ಶಿವಬಾಲು, ಮುಂತಾದವರು ಮಾತನಾಡಿದರು.
ವೇದಿಕೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ದೊಮ್ಮಸಂದ್ರ ಕೆ ಮುನಿರಾಜು, ರಾಜ್ಯ ಪ್ರ ಕಾರ್ಯದರ್ಶಿ ವಿ ರಮೇಶ್‌ ನಿರೂಪಿಸಿ ರಾಜ್ಯ ಕಾರ್ಯದರ್ಶಿ ಎ ಸತೀಶ್‌ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನು ರಾಜ್ಯ ಉಪಾಧ್ಯಕ್ಷ ಬಿಎಂ ವೆಂಕಟೇಶ್‌ ಮಾಡಿದರು.

Leave a Reply

Your email address will not be published. Required fields are marked *

error: Content is protected !!