ಈಜಲು ಬಂದ ಉದ್ಯೋಗಿ ಕ್ವಾರಿಯಲ್ಲಿ ಮುಳುಗಿ ಸಾವು
ಕಲ್ಲುಕ್ವಾರಿಯಲ್ಲಿ ಮುಳಗಿ ಯುವಕ ಸಾವು.
ಆನಾಎಕಲ್,ಅ,03: ಗಾಂಧಿ ಜಯಂತಿ ಹಿನ್ನಲೆ ಬಿಸಿಲಿನ ತಾಪಕ್ಕೆ ಈಜಲು ಬಂದ ಯುವಕ ಕಲ್ಲು ಕ್ವಾರಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಶುಕ್ರವಾರ ಮದ್ಯಾಹ್ನ ಆಂದ್ರ ಮೂಲದ ಬೆಂಗಳೂರು ಹಲಸೂರಿನ ವಾಸಿ ಗಣೇಶ್ ವಿನಯ್ (30) ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಯುವಕ.
ಆನೇಕಲ್-ಮೈಸೂರಮ್ಮನದೊಡ್ಡಿ ಎಲ್ಲಮ್ಮನಪಾಳ್ಯ ಬಳಿಯ ಕಲ್ಲುಕ್ವಾರಿಯಲ್ಲಿ 8 ಮಂದಿ ಯುವಕ ಯುವತಿಯರು ಆಗಮಿಸಿದ್ದರು. ಅದರಲ್ಲಿ ಅರ್ದಂಬರ್ದ ಈಜಲು ಬರುತ್ತಿದ್ದ ಉಳಿದವರು ವಿನಯ್ನನ್ನು ರಕ್ಷಿಸಲು ಹರಸಾಹಸ ಪಟ್ಟರೂ ಕಾಪಾಡಲಾಗದೆ ಕೈಚೆಲ್ಲಿದ್ದಾರೆ.
ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಗಣೇಶ್ ವಿನಯ್ ರಜೆಗಾಗಿ ಸ್ನೇಹಿತರೊಂದಿಗೆ ಜನನಿಬಿಡ ಕ್ವಾರಿಗೆ ಬಂದಿದ್ದು ಬಹು ಬೇಗ ಘಟನೆ ಬೆಳಕಿಗೆ ಬಾರದೆ ರಾತ್ರಿ ಜಿಗಣಿ ಪೊಲೀಸರಿಗೆ ಮಾಹಿತಿ ಬಂದಿದೆ. ಶನಿವಾರ ಬೆಳಗ್ಗೆ ಜಿಗಣಿ ಪೊಲೀಸರು ಅಗ್ನಿಶಾಮಕದಳದ ಸ್ಥಳಕ್ಕೆ ದೌಡಾಯಿಸಿದೆ. ಯುವಕನ ಕಳೆಬರವನ್ನು ಹುಡುಕುವಲ್ಲಿ ಸಾರ್ವಜನಿಕರು ಸಹಕರಿಸುತ್ತಿದ್ದಾರೆ.


