ಸೋಮವಾರ ರಾಶಿ ಭವಿಷ್ಯ-ಮೇ,05,2025

ಮೇಷ ರಾಶಿ
ಇಂದು ವಿದ್ಯಾರ್ಥಿಗಳಿಗೆ ಸಾಧಾರಣ ಫಲ
ಸ್ತ್ರೀಯರಿಗೆ ಉದ್ಯೋಗದಲ್ಲಿ ಭೀತಿ
ದೃಢ ನಿರ್ಧಾರಗಳು ತೊಂದರೆಗೆ ಕಾರಣ ಆಗಲಿದೆ
ಹೊಂದಾಣಿಕೆ ಇರಲಿ ಆದರೆ ರಾಜಿ ಮಾಡಿಕೊಳ್ಳೋದು ಬೇಡ
ದ್ವೇಷ ಸಾಧನೆಯಿಂದ ಯಾವುದೇ ರೀತಿಯ ಫಲವಿಲ್ಲ
ಆಸ್ತಿಗಾಗಿ ಜಗಳ, ಮನಸ್ತಾಪ ಆಗಲಿದೆ
ಗೋ ಸೇವೆಯನ್ನು ಮಾಡಬೇಕು
ವೃಷಭ ರಾಶಿ
ಇಂದು ಸಮಾಜದಲ್ಲಿ, ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರು ಮಾಡಲು ಪ್ರಯತ್ನ ಮಾಡಿದ್ರೆ ವಿಫಲ ಆಗಲಿದೆ
ನಿಮ್ಮ ವೈಯಕ್ತಿಕವಾದ ವರ್ಚಸ್ಸು ಕೆಲಸ ಮಾಡುವುದಿಲ್ಲ
ಬೇರೆಯವರನ್ನು ದೂಷಿಸಬೇಡಿ
ಸಕಾಲಕ್ಕೆ ಆಹಾರವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ಮಕ್ಕಳ ಬಗ್ಗೆ ಚಿಂತಿಸದಿರಿ ಶುಭವಿದೆ
ನಿಮ್ಮ ಅಭಿಪ್ರಾಯಕ್ಕೆ ನಿಜವಾಗಿಯೂ ಬೆಲೆ ಇದೆ
ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಬೇಕು
ಮಿಥುನ ರಾಶಿ
ಇಂದು ಸರ್ಕಾರಿ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಇರಲಿದೆ
ಮಾತೆಯವರಿಗೆ ವಸ್ತ್ರಾಭರಣ ಪ್ರಾಪ್ತಿಯಾಗಬಹುದು
ಇಂದು ಶುಭ ಕಾರ್ಯಗಳಕು ಅರ್ಧಕ್ಕೆ ನಿಲ್ಲುತ್ತವೆ
ಬೇರೆಯವರ ವಿಚಾರ ತೊಂದರೆ ಮಾಡಬಹುದು
ಇಷ್ಟವಿಲ್ಲದ ಕೆಲಸ ಮಾಡಬೇಡಿ
ಸ್ವಂತ ಉದ್ಯೋಗಕ್ಕೆ ಮುಂದಾಗಬಹುದು
ಗಣಪತಿಯನ್ನು ಪ್ರಾರ್ಥನೆ ಮಾಡಬೇಕು
ಕಟಕ ರಾಶಿ
ಹಲವಾರು ದಿನಗಳ ಕನಸು ನನಸಾಗುವ ದಿನವಿದು
ನಿಮ್ಮವರೇ ಶತ್ರುಗಳಾಗಿ ಕಾಟ ಕೊಡುತ್ತಾರೆ
ಕೇವಲ ಮಾತು ಬೇಡ ಧೈರ್ಯವಿರಲಿ
ಚಿಂತಿಸಿದ ಕೆಲಸಗಳನ್ನು ಪೂರ್ಣ ಮಾಡಿ
ತಂದೆ ಮಕ್ಕಳ ಸಂಬಂಧ ಮಧುರವಾಗಿರಲಿ
ಯಾವುದೇ ಸಂದರ್ಭದಲ್ಲಿ ಕೋಪವನ್ನು ಮಾಡಿಕೊಳ್ಳಬೇಡಿ
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಸಿಂಹ ರಾಶಿ
ಇಂದು ಸಂಕಷ್ಟ ದೂರವಾಗಲಿದೆ ಅನ್ನುವ ಫಲ ನಿಮ್ಮ ಗ್ರಹಗತಿಯಲ್ಲಿರಲಿದೆ
ಇಂದು ಧನ ಅಥವಾ ದ್ರವ್ಯ ಲಾಭ ಆಗಲಿದೆ
ಹಲವಾರು ರೀತಿಯ ಯೋಜನೆಗಳಿಂದ ಸಾಧನೆ ಮಾಡುತ್ತೀರಿ
ಸಮಾಜದಲ್ಲಿ ಕೀರ್ತಿ, ಹೆಸರು ಸುಲಭವಾಗಿ ಸಿಗಲಿದೆ
ಬಂಧುಗಳಲ್ಲಿ ವಿಶ್ವಾಸ ಹೆಚ್ಚಾಗುತ್ತದೆ
ನಿಮ್ಮ ಪ್ರಯತ್ನ ಸಫಲವಾಗತ್ತೆ ಪೂರ್ಣಾನಂದ ಹೊಂದುತ್ತೀರಿ
ದುರ್ಗಾರಾಧನೆ ಮಾಡಬೇಕು
ಕನ್ಯಾ ರಾಶಿ
ಇಂದು ವಿದ್ಯಾರ್ಥಿಗಳಿಗೆ ಅಪಯಶಸ್ಸು
ಯಾವುದೇ ದ್ವೇಷದಿಂದ ಯಾವುದೇ ನಿರ್ಧಾರ ಮಾಡಬೇಡಿ
ಸಹೋದರರ ಇಷ್ಟಕ್ಕೆ ತಕ್ಕಂತೆ ನಡೆಯಬೇಕು
ಬಹು ದಿನಗಳ ವಿಚಾರದಲ್ಲಿ ಅಪ ಯಶಸ್ಸು
ಇಂದು ಆಸ್ತಿಗಾಗಿ ಕೊರಗುತ್ತೀರಿ
ಇಂದು ನಿಮ್ಮ ತಪ್ಪಿನ ಅರಿವಾದರೆ ಶುಭವಿದೆ
ಕುಲದೇವತಾ ಪ್ರಾರ್ಥನೆ ಮಾಡಬೇಕು
ತುಲಾ ರಾಶಿ
ಇಂದು ಹಿರಿಯರ ಜೊತೆ ಗಹನವಾದ ವಿಚಾರವನ್ನು ಚರ್ಚೆ ಮಾಡುತ್ತೀರಿ
ಆರ್ಥಿಕವಾದ ಸಮತೋಲನವನ್ನು ಕಾಪಾಡಿಕೊಳ್ಳಬೇಕು
ಮಕ್ಕಳಿಂದ ಹಣದ ಸಹಾಯ ಆಗಲಿದೆ
ದೂರದೂರಿಗೆ ಪ್ರಯಾಣ ಮಾಡುವುದರಿಂದ ಶುಭವಿದೆ
ವಾಹನ ಲಾಭದಿಂದ ಸಂತೋಷವನ್ನು ಉಂಟುಮಾಡಲಿದೆ
ಬಂಧುಗಳಲ್ಲಿ ಕೆಲವು ಒಪ್ಪಂದವನ್ನು ಮಾಡಿಕೊಳ್ಳುತ್ತೀರಿ
ನಾಗರಾಧನೆ ಮಾಡಬೇಕು
ವೃಶ್ಚಿಕ ರಾಶಿ
ಇಂದು ವ್ಯಾವಹಾರಿಕವಾಗಿ ನಷ್ಟ ಆಗುವುದರಿಂದ ನಿರಾಸೆ ಬೇಸರ ಆಗಲಿದೆ
ದುಶ್ಚಟಗಳಿರುವವರಿಗೆ ತೊಂದರೆಯಾಗಬಹುದು
ವಿದ್ಯಾರ್ಥಿಗಳಿಗೆ ಆರೋಗ್ಯದ ಸಮಸ್ಯೆಯಿಂದ ಹಿನ್ನಡೆಯಾಗಲಿದೆ
ತಾಯಿಯವರ ಪ್ರೀತಿಯ ಕೊರತೆ ಆಗಲಿದೆ
ದುಡ್ಡು ಅಧಿಕಾರದಿಂದ ದೂರವಿದ್ದು ಮಾನವೀಯತೆಯಿಂದ ಬದುಕಬೇಕಾಗಲಿದೆ
ಇಂದು ವೈದ್ಯಕೀಯ ಕ್ಷೇತ್ರದವರಿಗೆ ಶುಭವಿದೆ
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು
ಧನಸ್ಸು ರಾಶಿ
ಇಂದು ನರದ ಸಮಸ್ಯೆ ಅಥವಾ ಮೂಳೆಯ ಸಮಸ್ಯೆ ಕಾಡಬಹುದು
ಯಾರ ಜೊತೆಯಲ್ಲೂ ದ್ವೇಷ ಬೇಡ
ತಿಳಿಯಬೇಕಾದ ವಿಚಾರ ಬಹಳಷ್ಟು ಇದೆ
ಮನಸ್ಸಿನಲ್ಲಿ ಅಶಾಂತಿ ಇದೆ
ಅಧಿಕ ಒತ್ತಡದಿಂದ ಯಾವ ಕೆಲಸವೂ ಮಾಡಬೇಡಿ
ಮಾನಸಿಕವಾಗಿ ಸಮಾಧಾನವಿರಲಿ
ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಬೇಕು
ಮಕರ ರಾಶಿ
ಇಂದು ಸಮಾಧಾನದಿಂದ ಇದ್ದರೆ ಮಾತ್ರ ಕೆಲಸಗಳಾಗಲಿದೆ
ಮಕ್ಕಳ ಬಗ್ಗೆ ಅತಿಯಾದ ಚಿಂತನೆಯನ್ನು ಮಾಡುತ್ತೀರಿ
ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
ಇಂದು ನಿಮಗೆ ಆರೋಗ್ಯ ಸಮಸ್ಯೆ ಕಾಡಬಹುದು
ಸಮಾಜದಲ್ಲಿ ಅಪಹಾಸ್ಯಕ್ಕೆ ಈಡಾಗುತ್ತೀರಿ
ನಿಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿ ಒಳ್ಳೆಯದಾಗಲಿದೆ
ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು
ಕುಂಭ ರಾಶಿ
ಇಂದು ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
ಹಲವು ಯೋಜನೆಗಳಿಂದ ಹಿನ್ನಡೆಯಾಗಬಹುದು
ಪ್ರಿಯರಿಂದ ವಂಚನೆಯಾಗಬಹುದು
ವಿವಾಹ ವಿಚಾರದಲ್ಲಿ ಸಮಸ್ಯೆಯಾಗಬಹುದು
ಕುಟುಂಬದ ಖರ್ಚು ಅಧಿಕ ಆಗುವುದರಿಂದ ಆತಂಕ ಆಗಲಿದೆ
ಭವಿಷ್ಯ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಬೇಕು
ಮೀನ ರಾಶಿ
ಇಂದು ಹೃದ್ರೋಗಿಗಳಿಗೆ ಸಮಸ್ಯೆಯಾಗಬಹುದು ಎಚ್ಚರಿಕೆವಹಿಸಬೇಕು
ಇಂದು ಶತ್ರು ಕಾಟ ಹೆಚ್ಚಾಗಬಹುದು
ಒತ್ತಡ ಬದುಕಿನಿಂದ ಸ್ವಲ್ಪ ಹೊರ ಬರಬೇಕಾಗುತ್ತದೆ
ಮಕ್ಕಳು ನಿಮ್ಮನ್ನು ದೂಷಿಸಬಹುದು
ನಿಮ್ಮ ಕೆಲವು ಕಠಿಣ ಮಾತು ನಿಮಗೆ ತೊಂದರೆಯಾಗಬಹುದು
ದೂರದ ಸಂಬಂಧಿಕರ ವಿಚಾರಕ್ಕೆ ಹೋದರೆ ನಿಮಗೆ ವಿರುದ್ಧವಾದ ಹೇಳಿಕೆ ಕೊಡಬಹುದು
ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಬೇಕು
