May 23, 2026

c24kannada

ವಸ್ತುಸ್ಥಿತಿಯತ್ತ

ರೋಡ್ ರೇಜ್ ರೌಡಿಸಂ.. ರಪ್ ರಪ್ ಅಂತ ಹೆಲ್ಮೆಟ್ ಅಲ್ಲೇ ಹೊಡೆದ ಕಿಡಿಗೇಡಿಗಳು!

 

ಬೆಂಗಳೂರು :  ಈ ರೋಡ್ ರೇಜ್ ಪ್ರಕರಣದ ರಾಕ್ಷಸ ಕೃತ್ಯಕ್ಕೆ ಯಾವಗ ಕಡಿವಾಣವೇ ಬೀಳುತ್ತೆ.?  ಗಾಡಿ ಟಚ್ ಆಯ್ತು ಅಂತ ಕಿಡಿಗೇಡಿಗಳು ರಸ್ತೆಯಲ್ಲೇ ವಾಹನ ಸವಾರನಿಗೆ ರಕ್ತ ಬರುವ ಹಾಗೆ ಹೊಡೆದಿದ್ದಾರೆ. ಬೆಂಗಳುರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಾಡಿ ಟಚ್ ಆಗಿದ್ದಕ್ಕೆ ಆ ಯುವಕ ತಪ್ಪಾಯ್ತು ಅಂತ ಕೇಳಿಕೊಂಡಿದ್ದಾನೆ. ಆದರೂ ಕಿರಾತಕರ ಗ್ಯಾಂಗ್‌ಗೆ ಕರುಣೆಯೇ ಬಂದಿಲ್ಲ. ರಪ್ ರಪ್ ಅಂತ ಹೆಲ್ಮೆಟ್ ಅಲ್ಲಿ ತಲೆಗೆ ಹೊಡೆಯುವ ದೃಶ್ಯ ಎದೆ ಝಲ್ ಅನ್ನುವಂತಿದೆ.

 

ತಲೆ ಮೇಲೆ ಗಾಯ, ಕಣ್ಣಲ್ಲಿ ನೀರು ಸುರಿಸುತ್ತಿರುವ ಯುವಕ ಕ್ಷಮಿಸಿ ಅಂತ ಅಂಗಲಾಚಿದ್ದಾನೆ. ಇಷ್ಟಾದರೂ ಪಾಪಿಗಳು ಹೆಲ್ಮೆಟ್‌ನಲ್ಲಿ ಥಳಿಸುವುದನ್ನು ಮಾತ್ರ ನಿಲ್ಲಿಸಿಯೇ ಇಲ್ಲ.ರಸ್ತೆಯಲ್ಲಿ ಈ ಯುವಕನ ಆಕ್ರಂದನ ಕೇಳಲಾಗದೆ ಸ್ಥಳೀಯರು ಸಹಾಯಕ್ಕೆ ಬಂದಿದ್ದಾರೆ. ಸ್ಥಳೀಯರು ಸುತ್ತುವರಿದರೂ ಆ ಯುವಕರ ಆಕ್ರೋಶ ಕಡಿಮೆ ಆಗಲೇ ಇಲ್ಲ. ಈ ದೃಶ್ಯವನ್ನು ನೋಡಿದ್ರೆ ಸಿಲಿಕಾನ್ ಸಿಟಿಯಲ್ಲಿ ರೋಡ್ ರೇಜ್ ಪ್ರಕರಣಕ್ಕೆ ಕೊನೆಯೇ ಇಲ್ಲದ ಹಾಗಿದೆ ಅನ್ನೋದು ಗೊತ್ತಾಗಿದೆ. ರೋಡ್ ರೇಜ್ ರೌಡಿಸಂಗೆ ಕೊನೆ ಯಾವಾಗ? ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ A1 ಮುಖೇಶ್, A2 ವಿಜಯ್, A3 ಶರಣ್, A4 ಪ್ರವೀಣ್, A5 ಶಶಿ ವಿರುದ್ಧ ಎಫ್‌ ಐ ಆರ್‌  ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!