ಇರಾನ್ ದೇಶದ ಸರ್ವೋಚ್ಛ ನಾಯಕ ಖಮೇನಿ ಹತ್ಯೆಗೆ ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮಸ್ಥರ ಕಣ್ಣೀರು.
ಇರಾನ್ ದೇಶದ ಸರ್ವೋಚ್ಛ ನಾಯಕ ಖಮೇನಿ ಹತ್ಯೆಗೆ
ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮಸ್ಥರ ಕಣ್ಣೀರು
ಚಿಕ್ಕಬಳ್ಳಾಪುರ : ಭಾರತದ ರೂಪಾಯಿಯ ರೂಪದಲ್ಲೇ ವ್ಯವಹರಿಸಿ ಭಾರತದ ಹಡಗು ಯುದ್ದ ನೌಕೆಗಳಿಗೆ ತನ್ನ ಬಂದರುಗಳಲ್ಲಿ ಅವಕಾಶ ಮಾಡಿಕೊಡುತ್ತಿದ್ದ ಖಮೇನಿ ಹತ್ಯೆಗೆ ಭಾರತದ ಗ್ರಾಮವೊಂದು ಕಂಬನಿ ಮಿಡಿದಿದೆ.
ಇರಾನ್ ದೇಶದ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಗೌರಿಬಿದನೂರು ತಾಲೂಕಿನ ಅಲಿೀಪುರದ ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ, ಗ್ರಾಮದಲ್ಲಿ ಅಘೋಷಿತ ಬಂದ್ ನಿರ್ಮಾಣವಾಗಿದ್ದು, ಸ್ವಯಂಪ್ರೇರಿತರಾಗಿ ಗ್ರಾಮಸ್ಥರು ಅಂಗಡಿಗಳ ಬಾಗಿಲು ಮುಚ್ಚುವ ಮೂಲಕ ಬಂದ್ ಮಾಡಿದ್ದಾರೆ.
ಬೆಳಗ್ಗೆಯಿಂದಲೇ ಕಪ್ಪು ಪಟ್ಟಿ ಧರಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ, ಶಿಯಾ ಸಮುದಾಯದ ಮುಸ್ಲಿಂಮರು ಅಮೇರಿಕಾ ವಿರುದ್ಧ ಅಕ್ರೋಶವನ್ನ ವ್ಯಕ್ತಪಡಿಸಿದ್ದಾರೆ, ಖಮೇನಿ ಅವರ ಪೋಟೋ ಹಿಡಿದು ಕಣ್ಣೀರು ಹಾಕಿದ್ದಾರೆ, ಗ್ರಾಮದ ತುಂಬ ಶೋಕ ಅವರಿಸಿದೆ, ಗ್ರಾಮದ ಅಂಜುಮನ್ ಎ ಜಾಫರಿಯಾ ಸಮಿತಿ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಮಾಡಲು ಗ್ರಾಮಸ್ಥರು ಸಿದ್ಧತೆಯನ್ನ ನಡೆಸಿದ್ದಾರೆ.
ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ, ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆಯಲ್ಲಿ ಮಾತುಕಥೆಯನ್ನ ನಡೆಸಿದ್ದಾರೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಹೇಳಿದ್ದಾರೆ.
ಅಯಾತೊಲ್ಲಾ ಅಲಿ ಖಮೇನಿ 1986ರಲ್ಲಿ ಅಲೀಪುರ ಗ್ರಾಮಕ್ಕೆ ನೀಡಿದ್ದರು, ಇರಾನ್ ದೇಶದ ಧಾರ್ಮಿಕ ನಿಯಮಗಳನ್ನು ಅಲೀಪುರ ಗ್ರಾಮದಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಗ್ರಾಮದ ಬಹುತೇಕ ಮಂದಿ ಇರಾನ್, ಅರಬ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಜೊತೆಯಲ್ಲಿ ವ್ಯಾಪಾರ,ವಹಿವಾಟು ಮತ್ತು ಶಿಕ್ಷಣ ಕಾರಣಕ್ಕೆ ಸಂಬಂಧವನ್ನು ಹೊಂದಿದ್ದಾರೆ, ವಿಶೇವಾಗಿ ಇರಾನ್ ದೇಶದೊಂದಿಗೆ ವೈವಾಹಿಕ ಸಂಬಂಧಗಳನ್ನ ಅಲ್ಲೀಪುರ ಗ್ರಾಮದವರು ಹೊಂದಿದ್ದಾರೆ.
