ಚಾಕೊಲೇಟ್, ಪೆಪ್ಪರ್ಮೆಂಟ್, ಜೆಲ್ಲಿಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಬಣ್ಣಗಳ ಬಳಕೆ..ಟೆಸ್ಟ್ಗೆ ಒಳಪಡಿಸಲು ಮುಂದಾದ ಆಹಾರ ಇಲಾಖೆ
1 min read
ಪೆಪ್ಪರಮೆಂಟ್, ಚಾಕೊಲೇಟ್ , ಜೆಲ್ಲಿಸ್ ಮತ್ತು ಜೇಮ್ಸ್ ಮಕ್ಕಳಿಗೆ ತುಂಬಾ ಇಷ್ಟ. ಒಂದು ಪಕ್ಷ ಮಕ್ಕಳು ಊಟ ಬೇಕಾದರೂ ಬಿಡುತ್ತಾರೆ, ಇವುಗಳನ್ನು ತಿನ್ನುವುದು ಮಾತ್ರ ಬಿಡುವುದಿಲ್ಲ. ಆದರೆ ಇವುಗಳನ್ನು ಮಕ್ಕಳಿಗೆ ಕೊಡುವುದಕ್ಕೂ ಮುಂಚೆ ಆಹಾರ ಇಲಾಖೆಯವರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ, ಪೆಪ್ಪರಮೆಂಟ್, ಚಾಕೊಲೇಟ್ , ಜೆಲ್ಲಿಸ್ ಮತ್ತು ಜೇಮ್ಸ್ ಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದ್ದು, ಟೆಸ್ಟ್ ಮಾಡಲು ಹಾರ ಇಲಾಖೆ ಮುಂದಾಗಿದೆ .
ಮಕ್ಕಳು ಇಷ್ಟಪಡುವ ಸಿಹಿ ಪದಾರ್ಥಗಳಾದ ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ FSSAI ಸೂಚನೆ ಬೆನ್ನಲೆ ರಾಜ್ಯದಲ್ಲಿ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಪೆಪ್ಪರಮೆಂಟ್, ಚಾಕೊಲೇಟ್ , ಜೆಲ್ಲಿಸ್ ಮತ್ತು ಜೇಮ್ಸ್ ಗಳನ್ನು ಸ್ಯಾಂಪಲ್ಸ್ ಪಡೆದು ಆಹಾರ ಇಲಾಖೆಯವರು ಲ್ಯಾಬ್ಗಳಲ್ಲಿ ಟೆಸ್ಟ್ಗೆ ಒಳಪಡಿಸಲು ಮುಂದಾಗಿದ್ದಾರೆ.
