May 23, 2026

c24kannada

ವಸ್ತುಸ್ಥಿತಿಯತ್ತ

ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

https://youtu.be/qqY5Z6Y6Ebk?si=9ocyyzakybUK8_3q

ಯಾದಗಿರಿ: ನಾನು‌ ಅಧ್ಯಕ್ಷರ ಬದಲಾವಣೆ ಬಗ್ಗೆ ಪಬ್ಲಿಕ್ ನಲ್ಲಿ ಮಾತಾಡೋದಿಲ್ಲ ಬಹಳ ಸ್ಪಷ್ಟವಾಗಿ ಆ ರೀತಿ ಮಾತಾಡಬಾರದು ಅಂತ ಹೈಕಮಾಂಡ್ ಹೇಳಿದೆ. ಯಾರ್ಯಾರು ಮಾತಾಡ್ತಾರೆ ಅವರ ಬಗ್ಗೆ ನಾನು ಕಮೆಂಟ್ ಮಾಡಲ್ಲ,ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.ಯಾದಗಿರಿಯಲ್ಲಿ ಮಾತನಾಡಿದ ಅವರು  ನಾನು ಯಾವತ್ತೂ ಮಾತಾಡೋದಿಲ್ಲ, ಖರ್ಗೆಯವರು ಬಂದಾಗ ನೀವು ಎಐಸಿಸಿ ಅಧ್ಯಕ್ಷರು ನೀವೇ ಜವಾಬ್ದಾರರು ಅಂತ ಕೇಳಿ ಎಂದು ಹೇಳಿದರು.

 

ಕರ್ನಾಟಕ ನಂಬರ್ ಒನ್ ಭ್ರಷ್ಟ ರಾಜ್ಯ ಎಂಬ ಶಾಸಕ ರಾಯರೆಡ್ಡಿ ಹೇಳಿಕೆ ವಿಚಾರವಾಗಿ  ಮಾತನಾಡಿದ ಅವರು ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದ್ದ ಪರಿಸ್ಥಿತಿ ಅವರು ಹೇಳಿದ್ದಾರೆ. ನಮ್ಮ ಅವಧಿಯಲ್ಲಿ ಸುಧಾರಣೆ ಆಗ್ತಾಯಿದೆ. ಭ್ರಷ್ಟಾಚಾರ ಕಡಿಮೆ ಆಗ್ತಾಯಿದೆ, ಇನ್ನು ‌3 ವರ್ಷದಲ್ಲಿ ಸಂಪೂರ್ಣ ಕಡಿಮೆ ಆಗುತ್ತೆ. ಬಿಜೆಪಿ ಇದ್ದಾಗ ನೂರಕ್ಕೆ ನೂರು ಭಾಗ ಭ್ರಷ್ಟಾಚಾರ ದೇಶದಲ್ಲಿ ಜಾಸ್ತಿ ಇತ್ತು ಅಂತ ಹೇಳಿದ್ದಾರೆ. ಆದರೆ ನಮ್ಮ ಅವಧಿಯಲ್ಲಿ ನಡೆದಿರುವದಲ್ಲ ಎಂದು ಹೇಳಿದರು.

 

ಸರ್ಕಾರದ ಜೆಡಿಎಸ್ ಫೋಸ್ಟರ್ ಅಭಿಯಾನ ವಿಚಾರ‌ವಾಗಿ ಮಾತನಾಡಿದ ಅವರು ಜೆಡಿಎಸ್ ನವರು ಏನೇ ಮಾಡಿದ್ರು ಜನ ಅವರಿಗೆ ತಿರಸ್ಕಾರ ಮಾಡಿದ್ದಾರೆ‌. ಯಾಕೆಂದ್ರೆ ಅವರ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ, ಹಗರಣಗಳ ಮೇಲೆ ಹಗಣರಗಳು ನಡೆದಿವೆ. ಬೆಲೆ ಏರಿಕೆ ಮಾಡಿದ್ರು ಇದರಿಂದ ಅವರನ್ನ ಜನ ತಿರಸ್ಕಾರ ಮಾಡಿದ್ರು. ಅದಕ್ಕೆ ನಮಗೆ 136 ಸ್ಥಾನವನ್ನ ಗೆಲ್ಲಿಸಿದ್ದಾರೆ ಎಂದ ರಾಮಲಿಂಗರೆಡ್ಡಿ ಹೇಳಿದರು.

 

Leave a Reply

Your email address will not be published. Required fields are marked *

error: Content is protected !!