c24kannada

ವಸ್ತುಸ್ಥಿತಿಯತ್ತ

ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ನಗುವಿನ ಒಡೆಯ ಪುನೀತ್​​ ರಾಜಕುಮಾರ್​ಗೆ 50ರ ಸಂಭ್ರಮ

 

ಇಂದು ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್​ ೫೦ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ.. ರಾಜ್ಯಾದ್ಯಂತ ಮರೆಯಲಾರದ ರಾಜರತ್ನನ ನೆನಪು ಮನೆ ಮಾಡಿದೆ.. ಮಧ್ಯರಾತ್ರಿಯಿಂದಲೇ ಅಪ್ಪು ಅಭಿಮಾನಿಗಳ ಸೆಲೆಬ್ರೇಷನ್ ಜೋರಾಗಿದೆ. ಇವತ್ತು ಬಾನದಾರಿಯಲ್ಲಿ ಜಾರಿ ಹೋದ ಮರೆಯಲಾರದ ಮಾಣಿಕ್ಯ. ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ನಗುವಿನ ಒಡೆಯ ಪುನೀತ್​​ ರಾಜಕುಮಾರ್​ಗೆ 50ರ ಸಂಭ್ರಮ. ಅಪ್ಪು ನಮ್ಮೊಂದಿಗಿಲ್ಲದಿದ್ರೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರ ಅನ್ನೋದಕ್ಕೆ ಈ ಜನಸಾಗರವೇ ಸಾಕ್ಷಿಯಾಗಿದೆ.

 

ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬ. ಮಧ್ಯರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸಮಾಧಿ ದರ್ಶನ ಪಡೆಯಲು ಆಗಮಿಸಿದರು.  ಆದ್ರೆ, ಬೆಳಗ್ಗೆ ದರ್ಶನ ವ್ಯವಸ್ಥೆ ಇರುವ ಕಾರಣದಿಂದ ಅಪ್ಪು ಅಭಿಮಾನಿಗಳು, ಕಂಠೀರವ ಸ್ಟುಡಿಯೋ ಮುಂದೆ ಪಟಾಕಿ ಸಿಡಿಸಿ, ಕೇಕ್​ ಕತ್ತರಿಸಿ ಸಂಭ್ರಮಿಸಿದರು. ಹಾಗೇ ಅಪ್ಪು ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದರು.   ಪುನೀತ್​​ ರಾಜ್​ಕುಮಾರ್​​ 50ನೇ ಹುಟ್ಟುಹಬ್ಬ ಪ್ರಯುಕ್ತ, ‘ಅಪ್ಪು’ಸಿನಿಮಾ ರೀ-ರಿಲೀಸ್ ಆಗಿ ಭರ್ಜರಿ​​ ಪ್ರದರ್ಶನ ಕಾಣುತ್ತಿದೆ.

ನಿನ್ನೆ ಮೋಹಕ ತಾರೆ ರಮ್ಯಾ ಅಪ್ಪು ಸಿನಿಮಾ ನೋಡಿದರು. ವೀರೇಶ್​​ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ಚಿತ್ರ ವೀಕ್ಷಿಸಿದ ರಮ್ಯಾ, ಸಿಕ್ಕಾಪಟ್ಟೆ ಖುಷಿ ಪಟ್ಟರು. ರಮ್ಯಾರಿಗೆ ನಟಿ ಶರ್ಮಿಳಾ ಮಾಂಡ್ರೆ ಸಾಥ್ ನೀಡಿದರು.  ಇನ್ನು, ಸಿನಿಮಾ ವೀಕ್ಷಿಸಿದ ಬಳಿಕ ಮಾತ್ನಾಡಿದ ರಮ್ಯಾ, 23 ವರ್ಷದ ಹಿಂದೆ ಈ ಸಿನಿಮಾನ ನೋಡಿದ್ದೆ. ಆಗಿದ್ದ ಸೇಮ್​ ಕ್ರೇಜ್​ ಈಗಲೂ ಇದೆ. ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದು ಬಹಳ ಖುಷಿ ಕೊಡ್ತು. ನಾನು ಕೂಡ ಅಪ್ಪು ಫ್ಯಾನ್​ ಅಂತ ಹೇಳಿದರು

 

ಅಪ್ಪು ಹುಟ್ಟುಹುಬ್ಬ ಪ್ರಯುಕ್ತ ಹಬ್ಬದ ವಾತವರಣ ಸೃಷ್ಟಿಸಿದೆ.. ಅಪ್ಪು ದೈಹಿಕವಾಗಿ ನಮ್ಮೆಲ್ಲರನ್ನ ಅಗಲಿದ್ರೂ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ವಿರಾಜಮಾನರಾಗಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಅನ್ನೋ ರೀತಿ ಅಭಿಮಾನಿಗಳ ಆರಾಧ್ಯದೈವ ಎಂದಿಗೂ ಕನ್ನಡಿಗರ ಹೃದಯದಲ್ಲಿ ಅಜರಾಮರ.

Leave a Reply

Your email address will not be published. Required fields are marked *

error: Content is protected !!