ಭೂಕಂಪ, ಸುನಾಮಿ ಮತ್ತೊಂದು ಕೊರೋನಾವೈರಸ್ ಆಗುತ್ತೆ-ಕೋಡಿಮಠದ ಸ್ವಾಮೀಜಿ ಸ್ಫೋಟಕ ಭವಿಷ್ಯ!

ಮಳೆ ಬೆಳೆ ವಿಚಾರ, ಕಳೆದ ಬಾರಿಗಿಂತ ಈ ಬಾರಿ ಪ್ರಾಕೃತಿಕ ದೋಷಗಳು ಹೆಚ್ಚಿವೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು. ಗದಗನಲ್ಲಿ ಮಾತನಾಡಿದ ಅವರು ಕರ್ನಾಟಕಕ್ಕೆ ಮಳೆ ಬೆಳೆ ತೊಂದರೆ ಇಲ್ಲ, ಶುಭಯೋಗ ಇದೆ ಆದರೆ ಪ್ರಾಕೃತಿಕ ದೋಷಗಳು ಬಹಳ ಇವೆಭೂಕಂಪ, ಭೂಮಿ ಸುನಾಮಿ, ವಾಯು ಸುನಾಮಿ ಆಗೋದು ಕಳೆದ ಬಾರಿಗಿಂತ ಈ ಬಾರಿ ಪ್ರಾಕೃತಿಕ ದೋಷಗಳು ಹೆಚ್ಚಿವೆ. ಬಿಸಿಲ ಧಗೆ ಬಹಳ ಆಗತ್ತೆ, ಹಿಮಪಾತ ಆಗತ್ತೆ. ಪ್ರಾಕೃತಿಕ ದೋಷವೇ ಮತ್ತೊಂದು ಕರೋನಾ ಆಗಿ ಬರತ್ತೆ ಈ ಬಾರಿ ಬರೋ ಸಂವತ್ಸರ ಕೆಟ್ಡದೇನಲ್ಲ, ಚೆನ್ನಾಗಿದೆ. ಇದು ಜಾಗತಿಕ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ತೊಂದರೆ ಇದೆ ಎಂದು ಹೇಳಿದರು.
