c24kannada

ವಸ್ತುಸ್ಥಿತಿಯತ್ತ

ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ,ಮೂಳೆಗಳು ಪತ್ತೆ.

ಮೈಸೂರು :  ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ,ಮೂಳೆಗಳು ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್. ಡಿ ಕೋಟೆ ತಾಲೂಕಿನ ಜೊಂಪನಹಳ್ಳಿಯ ಚಿನ್ನಪ್ಪ ಪಾಳ್ಯ ಗ್ರಾಮದಲ್ಲಿ  ಪತ್ತೆಯಾಗಿದೆ. ದಾಸಪ್ರಕಾಶ್ ಎಂಬವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.  ಶೌಚಾಲಯದ ಗುಂಡಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಮನೆ ಮಾಲಿಕರು ದುರಸ್ತಿ ಕಾರ್ಯ ನಡೆಸಲು ಮುಂದಾಗಿದ್ದರು. ಈ ವೇಳೆ  ಶೌಚಾಲಯದ ಗುಂಡಿಯ ಒಳಗೆ ಮೂಳೆಗಳು ಪತ್ತೆಯಾದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.  ಸ್ಥಳಕ್ಕೆ ಪೋಲಿಸರ ಭೇಟಿ ಪರಿಶೀಲನೆ ನಡೆಸಿದರು.  ಸರ್ಕಲ್ ಇನ್‌ಸ್ಪೆಕ್ಟರ್ ಶಬೀರ್ ಹುಸೇನ್, ಡಿವೈಎಸ್ಪಿ ಗೋಪಾಲಕೃಷ್ಣ ಪರಿಶೀಲನೆ ಪ್ರಕರಣ ದಾಖಲು ಮಾಡಿದರು.

 

7 ತಿಂಗಳುಗಳಿಂದ ದಾಸ್‌ ಪ್ರಕಾಶ್ ಕಾಣೆಯಾಗಿದ್ದು, ಈಗ ಮೃತದೇಹ ಪತ್ತೆಯಾಗಿರುವುದು ಅನೇಕ ಅನುಮಾನ ಗಳಿಗೆ ಎಡೆ ಮಾಡಿಕೊಟ್ಟಿದೆ.  ಕಳೇಬರದ ಮೂಳೆಗಳನ್ನ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಮುಂದಿನ ತನಿಖೆಗೆ  ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!