May 2026
M T W T F S S
 123
45678910
11121314151617
18192021222324
25262728293031
May 23, 2026

c24kannada

ವಸ್ತುಸ್ಥಿತಿಯತ್ತ

ಗಂಡನ ಮನೆಗೆ ಪತ್ನಿಯನ್ನ ಕಳುಹಿಸಿಕೊಡಿ ಎಂದಿದ್ದಕ್ಕೆ ಅಳಿಯನ ಮೇಲೆ ಪೆಟ್ರೋಲ್ ಸುರಿದು ಕೊ*ಲೆ.

ಪತ್ನಿ ಮಕ್ಕಳನ್ನ ಕಳಿಸಿಕೊಡಿ ಎಮದು ಬಂದ ಅಳಿಯನನ್ನ ಪೆಟ್ರೋಲ್ ಸುರಿದು ಕೊ*ಲೆ ಮಾಡಿದ ಆರೋಪದ ಮೇಲೆ ಮಾವ ಬಾಮೈದನ ಬಂಧನ.

ಗಂಡನ ಮನೆಗೆ ಪತ್ನಿಯನ್ನ ಕಳುಹಿಸಿಕೊಡಿ ಎಂದಿದ್ದಕ್ಕೆ ಅಳಿಯನ ಮೇಲೆ ಪೆಟ್ರೋಲ್ ಸುರಿದು ಕೊ*ಲೆ.

ಬೆಂಗಳೂರು(ಆನೇಕಲ್),ಮೇ,07: ಗಂಡನ ಮನೆಗೆ ಪತ್ನಿ- ಮಕ್ಕಳನ್ನ ಕಳುಹಿಸಿಕೊಡಿ ಎಂದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದರಿಂದ ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಯಲ್ಲಿ ಮೇ 2ರಂದು ಚಿಕಿತ್ಸೆ ಫಲಕಾರಿಯಾಗದೆ 25 ವರ್ಷದ ನವೀನ್ ಕೊನೆಯುಸಿರೆಳೆದಿದ್ದಾನೆ.
ಸಾಯುವ ಮುನ್ನ ಕೃಷ್ಣಗಿರಿಯ ಮಾಜಿಸ್ಟ್ರೇಟ್ ಮುಂದೆ ಡೆತ್ ಡಿಕ್ಲರೇಷನ್ ಹೇಳಿಕೆ ನೀಡಿದ ನವೀನ್ ತನ್ನ ಮೇಲೆ ಪೆಟ್ರೋಲ್ ಸುರಿದು ಹಲ್ಲೆ ಮಾಡಿ ಬೆಂಕಿ ಹಚ್ಚಿದ ಮಾವ ಸಂಪಂಗಿ ಬಾಮೈದ ಮುನೇಶ್ ಅತ್ತೆ ಪಚ್ಚಮ್ಮ ಹಾಗು ಹೆಂಡತಿ ಸುಚಿತ್ರಾ ಮೇಲೆ ಹೇಳಿಕೆ ದಾಖಲಿಸಿ ಅಸುನೀಗಿದ್ದಾನೆ.
ಅದರಂತೆ ಈ ಮೊದಲೇ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದ ಆನೇಕಲ್ ಪೊಲೀಸರು ಕೃಷ್ಣಗಿರಿ ನ್ಯಾಯಾಲಯದಿಂದ ಬಂದ ಡೆತ್ ಡಿಕ್ಲರೇಷನ್ ನೋಟ್ ಆಧರಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಹಿನ್ನಲೆ:
ನವೀನ್ ಸ್ವಭಾವತಃ ಕುಡುಕನಾಗಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದ, ಮನೆಗೆ ಸರಿಯಾಗಿ ಏನು ತಂದು ಹಾಕದೆ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಇದು ಆಗಾಗ ಮುಂದುವರೆದು ಗ್ರಾಮಸ್ಥರ ನೇತೃತ್ವದಲ್ಲಿ ನ್ಯಾಯಪಂಚಾಯತಿಯಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿತ್ತು.
ಆಗಾಗ ರಾಜಿ ಪಂಚಾಯಿತಿಯಾಗಿ ಬಾಡಿಗೆ ಮನೆ ಮಾಡಿದರೆ ಕಳುಹಿಸುವ ನಿರ್ಧಾರ ಹೆಂಡತಿ ಮನೆಯವರು ಬೇಡಿಕೆ ಇಟ್ಟಿದ್ದರು. ಇದು ನೆರವೇರದ ಕಾರಣ ಯುಗಾದಿ ಹಬ್ಬದ ನೆಪದಲ್ಲಿ ಹೆಂಡತಿ ಮಕ್ಕಳೊಂದಿಗೆ ಜನತಾಕಾಲನಿಯ ತವರು ಮನೆಯತ್ತ ಪತ್ನಿ ಹೆಜ್ಜೆ ಹಾಕಿದ್ದಳು.
ಕಳೆದ ಏಪ್ರಿಲ್ 14ರಂದು ಚೂಡೇನಹಳ್ಳಿಯ ಎಳೆನೀರು ಇಳಿಸುವ ನವೀನ್ ಆನೇಕಲ್ ಕಾವಲಹೊಸಹಳ್ಳಿಯ ಜನತಾ ಕಾಲೋನಿಯ ಅತ್ತೆ ಮನೆ ಬಳಿ ಬಂದು ತನ್ನ ಹೆಂಡತಿ – ಮಕ್ಕಳನ್ನು ತನ್ನ ಚೂಡೇನಹಳ್ಳಿ ಮನೆಗೆ ಕಳಿಹಿಸಿಕೊಡುವಂತೆ ಬೇಡಿದ್ದಾನೆ. ಇಷ್ಟೇ ಮಾವ ಬಾಮೈದ ಅತ್ತೆ ಹೆಂಡತಿಯೂ ಸೇರಿ ಹೊಡೆದು ನಿಂದಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರೆಂದು ತನ್ನ ಸಾವಿನ ಮುಂಚಿನ ಹೇಳಿಕೆಯಲ್ಲಿ ನಮೂದಿಸಿದ್ದಾನೆ.

ಅದರಂತೆ ಕೊಲೆ ಪ್ರಕರಣ ದಾಖಲಿಸಿರುವ ಆನೇಕಲ್ ಪೊಲೀಸರು ಮಾವ ಸಂಪಂಗಿ ಬಾಮೈದ ಮುನೀಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

 

 

ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾವ, ಗಾಯಾಳು ಆಸ್ಪತ್ರೆಯಲ್ಲಿ ಸಾವು.

ಮಕ್ಕಳು ಮಗಳನ್ನ ಜೊತೆಗೆ ಕಳಿಸಿಕೊಂಡು ಎಂದಿದ್ದೇ ಪೆಟ್ರೋಲ್ ಸುರಿಯಲು ಕಾರಣ.

ಆನೇಕಲ್ ಕಾವಲಹೊಸಹಳ್ಳಿಯ ಜನತಾ ಕಾಲೋನಿಯಲ್ಲಿ ಘಟನೆ.‌

ಅಳಿಯ ನವೀನ್ ಬೆಂಕಿಯ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವು.

ಮರಣೋತ್ತರ ಹೇಳಿಕೆಯಲ್ಲಿ ಮಾವ, ಅತ್ತೆ, ಬಾಮೈದ ಮತ್ತು ಪತ್ನಿಯ ಹೆಸರು ಉಲ್ಲೇಖ.

ಡೆತ್ ಡಿಕ್ಲರೇಷನ್ ಹೇಳಿಕೆಯಂತೆ ತಮಿಳುನಾಡು ನ್ಯಾಯಾಲಯದಿಂದ ಪ್ರಕರಣ.

ಆನೇಕಲ್-ತಳಿ ರಸ್ತೆಯ ಚೂಡೇನಹಳ್ಳಿಯಲ್ಲಿದ್ದ ನವೀನ್ ದಂಪತಿಗಳು.

ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಆನೇಕಲ್ ಪೊಲೀಸರು.

ಮರಣೋತ್ತರ ಹೇಳಿಕೆಯ ಮೇರೆಗೆ ಕೊಲೆ ಪ್ರಕರಣವಾಗಿ ಮಾರ್ಪಾಡಿಸಿದ ಆನೇಕಲ್ ಪೊಲೀಸರು.

ಮಾವ ಸಂಪಂಗಿ ಬಾಮೇದ ಮುನೇಶ್ ಅತ್ತೆ ಪಚ್ಚಮ್ಮ ಪತ್ನಿ ಸುಚಿತ್ರ ಆರೋಪಿಗಳು.

ಮಾವ ಸಂಪಂಗಿ ಬಾಮೇದ ಮುನೇಶ್ ರನ್ನ ಬಂಧಿಸಿ ಜೈಲೆಗೆ ಕಳುಹಿಸುವಲ್ಲಿ ಪೊಲೀಸರು ಯಶಸ್ವಿ.

ಬೆಂಕಿ ಹಚ್ಚಿದ ನಂತರ ಆನೇಕಲ್-ಹೊಸೂರು-ಕೃಷ್ಣಗಿರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ.

ತಮಿಳುನಾಡಿನ‌ ಕೃಷ್ಣಗಿರಿ ಆಸ್ಪತ್ರೆಯಲ್ಲಿ ಡೆತ್ ಡಿಕ್ಲರೇಷನ್ ಹೇಳಿಕೆಯ ಮೂಲಕ ಕೊಲೆ ಪ್ರಕರಣ.

 

Leave a Reply

Your email address will not be published. Required fields are marked *

error: Content is protected !!