ಸಾಲಕ್ಕಾಗಿ ಗಂಡನ ಮುಂದೆಯೇ ವೃದ್ದೆಯ ಕೊಂದ ನೆರೆ ಮನೆ ವಾಸಿ
8 ಲಕ್ಷ ಸಾಲ ತೀರಿಸಲು ವೃದ್ಧೆಯ ಹತ್ಯೆ,
ನೆರೆಮನೆಯ ನಿವಾಸಿಯಿಂದ ಕೊಲೆ,
ಕೃತ್ಯ ನಡೆದ ಗಂಟೆಗಳಲ್ಲಿ ಆರೋಪಿಯ ಬಂಧನ
ನೆಲಮಂಗಲ : ಸ್ಟ್ರೋಕ್ ಗೆ ತುತ್ತಾಗಿದ್ದ ಗಂಡನ ಜೊತೆಯಲ್ಲಿ ವಾಸವಾಗಿದ್ದ ವೃದ್ಧ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು, ಕೃತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ನೆಲಮಂಗಲ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.ನೆಲಮಂಗಲದ ಪೇಟೆಬೀದಿಯಲ್ಲಿ ಸಂಜೆ ಸುಮಾರಿಗೆ ವೃದ್ಧೆ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ, ಶೋಭಾ(70) ಮಹಿಳೆಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು, ಸ್ಥಳಕ್ಕೆ ಬಂದ ನೆಲಮಂಗಲ ಟೌನ್ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾಗ ಚಿನ್ನಾಭರಣಕ್ಕಾಗಿ ನಡೆದ ಹತ್ಯೆ ಎಂದು ಸಂಶಯ ಪಟ್ಟಿದ್ದರು, ಒಬ್ಬನೇ ಕೃತ್ಯ ಎಸಗಿದ್ದಾನೆ ಎಂಬ ಸಂಶಯದ ಮೇಲೆ ತನಿಖೆ ಮುಂದಾಗ ಪೊಲೀಸರು ಕೃತ್ಯ ನಡೆದ ಕೆಲವೇ ಘಟನೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಶಿವಕುಮಾರ್ ಎಂದು ತಿಳಿದು ಬಂದಿದ್ದು, ನೆಲಮಂಗಲದಲ್ಲಿ ಹೋಲ್ ಸೇಲ್ ವ್ಯಾಪಾರಿಯಾಗಿದ್ದ. ವ್ಯಾಪಾರದಲ್ಲಿ ನಷ್ಟಕ್ಕೆ ತುತ್ತಾಗಿದ್ದ ಈತ ಕೊಲೆ ಕೃತ್ಯ ಎಸಗಿದ್ದಾನೆಂಬ ಮಾಹಿತಿ ತಿಳಿದು ಬಂದಿದೆ. ನೆರೆಮನೆಯ ನಿವಾಸಿಯಾಗಿದ್ದ ಶಿವಕುಮಾರ್ ಸಾಲದ ಹಣ ತೀರಿಸಲು ವೃದ್ಧ ದಂಪತಿಗಳ ಮೇಲೆ ಕಣ್ಣಿಟ್ಟಿದ್ದ.
ಸ್ಟ್ರೋಕ್ ಗೆ ತುತ್ತಾಗಿದ ವಯೋವೃದ್ಧ ಗಂಡ ಮತ್ತು ವೃದ್ಧ ಹೆಂಡತಿ ಇಬ್ಬರೇ ಮನೆಯಲ್ಲಿ ವಾಸವಾಗಿರುವುದನ್ನ ಗಮನಿಸಿದ್ದ ಈತ, ನಿನ್ನೆ ಸುಮಾರು 1:03 ಸಮಯಕ್ಕೆ ವೃದ್ಧರ ಮನೆ ಪ್ರವೇಶಿಸಿ ಚಾಕುವಿನಿಂದ ಇರಿದು ಶೋಭಾರನ್ನು ಕೊಲೆ ಮಾಡಿದ್ದಾನೆ, ಹಣಕ್ಕಾಗಿ ಮನೆಯಲ್ಲಿ ಹುಡುಕಾಡಿದ್ದಾನೆ ಹಣ ಸಿಗದೇ ಇದ್ದಾಗ ವೃದ್ಧೆಯ ಮೈಮೇಲಿದ್ದ ಚಿನ್ನಾಭರಣ ದೋಚಿ 1:30 ರ ಸಮಯದಲ್ಲಿ ಮನೆಯಿಂದ ಹೊರಗೆ ಬಂದಿದ್ದಾನೆ.
ಸ್ಟ್ರೋಕ್ ಪೀಡಿತ ಗಂಡನಿಗೆ ಚಿಕಿತ್ಸೆ ನೀಡಲು ಸಂಜೆ ವೈದ್ಯರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ, ಆರೋಪಿ ಪತ್ತೆಗಾಗಿ ಮನೆ ಸುತ್ತಮುತ್ತಲಿನ ಸಿಸಿ ಕ್ಯಾಮಾರ ಪರಿಶೀಲನೆ ಮಾಡಿದ್ದಾಗ ಆಕ್ಟಿವಾ ಸ್ಕೂಟರ್ ಸುಳಿವು ಪತ್ತೆಯಾಗಿದೆ, ವಾಹನದ ನಂಬರ್ ಮೇಲೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

