BENGALURU CRIME KARNATAKA ಕಾರಿನಲ್ಲಿ ಸಿನಿಮೀಯ ರೀತಿಯಲ್ಲಿ ಮೂವರಿಂದ ವ್ಯಕ್ತಿ ಕಿಡ್ನಾಪ್, ಮೂರು ದಿನ ಕಾರಿನಲ್ಲಿ ಸುತ್ತಾಟ. ಅಲರ್ಟ್ ಆದ ಎಲೆಕ್ಟ್ರಾನಿಕ್ಸಿಟಿ ಪೊಲೀಸ್, ಕೊಲೆಯಾಗುತ್ತಿದ್ದ ವ್ಯಕ್ತಿಯ ರಕ್ಷಿಸಿದ ಪೊಲೀಸರು. 3 months ago newsdesk ಕಾರಿನಲ್ಲಿ ಸಿನಿಮೀಯ ರೀತಿಯಲ್ಲಿ ಮೂವರಿಂದ ವ್ಯಕ್ತಿ ಕಿಡ್ನಾಪ್, ಮೂರು ದಿನ ಕಾರಿನಲ್ಲಿ ಸುತ್ತಾಟ. ಅಲರ್ಟ್ ಆದ ಎಲೆಕ್ಟ್ರಾನಿಕ್ಸಿಟಿ ಪೊಲೀಸ್, ಕೊಲೆಯಾಗುತ್ತಿದ್ದ ವ್ಯಕ್ತಿಯ ರಕ್ಷಿಸಿದ ಪೊಲೀಸರು. ಬೆಂಗಳೂರು,ಆನೇಕಲ್,ಫೆ,18: ಸಿನಿಮೀಯ ರೀತಿಯಲ್ಲಿ ಸ್ಪಾ ವ್ಯವಸ್ಥಾಕನ ಬೈಕ್ ಅಡ್ಡಗಟ್ಟಿ ಕಾರಿನಲ್ಲಿ ವೆವಸ್ಥಾಪಕನ ಅಪಹರಿಸಿದ ಘಟನೆ ಶಿವರಾತ್ರಿಯಂದು ನಡೆದಿದೆ. ಕಾರಿನಲ್ಲಿ ವ್ಯಕ್ತಿಯನ್ನು ಕೂಡಿಹಾಕಿ ಹಲ್ಲೆ ಮಾಡಿ ಮೂರು ದಿನಗಳ ಕಾಲ ಹಿಂಸಿಸಿ ಹಣಕ್ಕೆ ಬೇಡಿಕೆ ಇಟ್ಟು ಪೊಲೀಸರ ಎಣೆದ ಬಲೆಗೆ ಬಿದ್ದ ಬಂಧಿಸಲ್ಪಟ್ಟಿದ್ದಾರೆ. ರೌಡಿ ಆರೋಪಿಗಳನ್ನು ಎಲೆಕ್ಟ್ರಾನಿಕ್ಸಿಟಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನೇಕಲ್ ತಿರುಪಾಳ್ಯದಲ್ಲಿ ವಾಸವಿರುವ ಮೂಲತಃ ಬಿಹಾರದ ಅಶೀತ್ ಕುಮಾರ್ ಎಸ್ (28) ಅಪಹರಣಕ್ಕೊಳಗಾದ ಸ್ಪಾ ಮೇನೇಜರ್ ಆಗಿದ್ದಾರೆ. ಆತನ ಸ್ನೇಹಿತ ಮನುಕುಮಾರ್ ಅಪಹರಣಕಾರರಿಂದ ತಪ್ಪಿಸಿಕೊಂಡು ಇಡೀ ಪ್ರಕರಣ ಬೆಳಕಿಗೆ ಬರುವಂತೆ ನೋಡಿಕೊಂಡವನಾಗಿದ್ದಾರೆ. ಜಿಗಣಿಯ ಕರಗದಮ್ಮ ದೇವಾಲಯ ಪಕ್ಕದ ವಾಸಿ ಕಾರು ಚಾಲಕ ಅಕ್ಷಯ್ (26). ರೌಡಿ ಶೀಟರ್ ಹಾಗು ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ವರ್ಷಗಳ ಹಿಂದೆ ಜಿಮ್ ಕಿರಣ್ ಕೊಲೆಯ ಐದನೇ ಆರೋಪಿ ಅಮೇಜಾನ್ ಉದ್ಯೋಗಿ ಆನೇಕಲ್ ಹೊಂಪಲಘಟ್ಟ ವಾಸಿ ಪ್ರಜ್ವಲ್ (25). ಹಾಗು ಆನೇಕಲ್ ತಾಲೂಕಿನ ಮಂಟಪ ಗ್ರಾಮದ ಮಂಜುನಾಥ್ ಅಪಹರಣ ಮಾಡಿದ ಮೂವರು ಆರೋಪಿಗಳಾಗಿದ್ದಾರೆ. ಅಪಹರಣಕ್ಕೆ ಕಾರಣ: ಬೆಂಗಳೂರು-ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯ ಸಲ್ಲಾರಿಸ್ ಅಪಾರ್ಟ್ಮೆಂಟ್ ನಲ್ಲಿ ಫೆಸಿಲಿಟಿ ಮೇನೇಜರ್ ಆಗಿದ್ದ ಮಂಜುನಾಥ್ ಅಪಾರ್ಟ್ಮೆಂಟ್ ಕಲೆಕ್ಷನ್ ಹಣವನ್ನು ಆನ್ಲೈನ್ ಆಟಗಳಿಗೆ ಕಳೆದುಕೊಂಡಿದ್ದ. ಇನ್ನು ಮೂರನೇ ಆರೋಪಿ ಮಂಜುನಾಥ್ ಇಎಂಐ ಕಟ್ಟಲು ಹಣವಿಲ್ಲದೆ ಪರದಾಡುತ್ತಿದ್ದ. ಬನ್ನೇರುಘಟ್ಟದಲ್ಲಿ ಹುಟ್ಟುಹಬ್ನದ ಸಂಭ್ರಮದಲ್ಲಿ ಈ ಮೂವರು ಒಟ್ಟಿಗೆ ಸೇರಿದಾಗ ಹಣಕಾಸಿನ ಮುಗ್ಗಟ್ಟು ಪ್ರಸ್ತಾಪವಾಗಿ ಯಾರನ್ನಾದರೂ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಡಲು ಸಂಚು ರೂಪಿಸಿ ಕಾಯುತ್ತಿರುತ್ತಾರೆ. ಅಪಹರಣ: ಬೇಗೂರಿನ ಅಕ್ಷಯ ನಗರದಲ್ಲಿನ ಥೈ ಸ್ಪಾದಲ್ಲಿ ಪ್ರಕಾಶ್ ಎಂಬ ಮಾಲಕನೊಡನೆ ಅಪಹರಣಕ್ಕೊಳಗಾದ ಆಶೀತ್ ಪಾಲುದಾರನಾಗಿದ್ದು ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಕಳೆದ 15 ಶಿವರಾತ್ರಿಯಂದು ರಾತ್ರಿ 8 ಕ್ಕೆ ಸ್ಪಾ ಮುಚ್ಚಿ ಬೆಟ್ಟದಾಸನಪುರದ ಮಾರ್ಗವಾಗಿ ತನ್ನ ಸ್ನೇಹಿತ ಮನುಕುಮಾರ್ನ ಜೊತೆ ತಿರುಪಾಳ್ಯದ ಮನೆಗೆ ಬೈಕಿನಲ್ಲಿ ಬರುತ್ತಿರುತ್ತಾರೆ. ರಾತ್ರಿ 9ರ ಆಜುಬಾಜಿನಲ್ಲಿ ಬಿಳಿ ಹುಂಡೈ ಕಾರಿನಲ್ಲಿ ಬಂದ ಮೂವರು ಆರೋಪಿಗಳು ಮಾರಕಾಸ್ತ್ರ ಸಮೇತ ಸಂತ್ರಸ್ಥರ ಬೈಕ್ ಅಡ್ಡಗಟ್ಟಿದ್ದಾರೆ. ಹಲ್ಲೆ ಮಾಡಿ ಅಶೀತ್ ಕುಮಾರ್ನನ್ನು ಕಾರಿನಲ್ಲಿ ತುಂಬಿಕೊಂಡಿದ್ದಾರೆ. ಉಳಿದ ಬೈಕ್ ಸವಾರ ಮನು ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿ ಕಾರಿಗೆ ಎತ್ತಿಹಾಕಿಕೊಳ್ಳುವಷ್ಟರಲ್ಲಿ ರಸ್ತೆಯಲ್ಲಿ ಎದುರಿಗೆ ಬೈಕ್ ಬರುತ್ತಿದ್ದು ಅದನ್ನು ಗಮನಿಸಿದ ಆರೋಪಿಗಳು ಮನುವನ್ನು ದಾರಿಯಲ್ಲೇ ಬಿಟ್ಟು ಆಶೀತ್ ಸಮೇತ ಕಾರಿನಲ್ಲಿ ಪರಾರಿಯಾಗುತ್ತಾರೆ. ಅನಂತರ ಅಶೀತ್ಗೆ ಹಲ್ಲೆ ಮಾಡಿ ಮೊಬೈಲ್ ಮೂಲಕ ಮನುವಿಗೆ ಕರೆ ಮಾಡಿಸಿ ಐದು ಲಕ್ಷ ಕೊಡದಿದ್ದರೆ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ. ಇತ್ತ ಮನು ಆಟೊದಲ್ಲಿ ಮರಳಿ ಸ್ಪಾ ಮಾಲಕ ಪ್ರಕಾಶ್ ಬಳಿ ಬಂದು ನಡೆದ ವಿಚಾರ ತಿಳಿಸಿ, ಕೂಡಲೇ ಹಣ ಹವಣಿಸಿಕೊಳ್ಳುವಂತೆ ತಪರಾಕಿ ಮಾಡಿದ್ದಾನೆ. ಸೋಮುವಾರ ಸಂಜೆವರೆಗೆ ಆರೋಪಿಗಳ ಬಳಿ ಹಣವಿಲ್ಲದೆ ಕಾರಿಗೆ ಪೆಟ್ರೋಲ್ ಸಾಲದೆ ಸಂತ್ರಸ್ಥ ಆಶೀತ್ ಬಳಿಯಿದ್ದ ಹದಿನೈದು ಸಾವಿರ ಖರ್ಚುಮಾಡಿ ಕೊನೆಗೆ ಹಣವಿಲ್ಲದೆ ಸ್ಪಾ ಮಾಲಕ ಪ್ರಕಾಶ್ಗೆ ಹಣ ತರುವಂತೆ ಆಗಾಗ್ಗೆ ಕರೆ ಮಾಡಿ ಅವರು ಹೇಳಿದ ಜಾಗಕ್ಕೆ ಬರುವಂತೆ ತಿಳಿಸಿದ್ದಾರೆ. ಇದಾದ ನಂತರ ಮರುದಿನ ೧೬ರಂದು ಎಲೆಕ್ಟ್ರಾನಿಕ್ಸಿಟಿ ಪೊಲೀಸ್ ಠಾಣೆಯಲ್ಲಿ ಗಾಯಾಳು ಮನುಕುಮಾರ್ ಇಡೀ ಪ್ರಕರಣದ ಇಂಚಿಂಚು ಮಾಹಿತಿ ನೀಡಿ ಅಪಹರಣ ಪ್ರಕರಣ ದಾಖಲಿಸುತ್ತಾರೆ. ಆಗಾಗಲೇ ಎಚ್ಚೆತ್ತ ಎಲೆಕ್ಟ್ರಾನಿಕ್ಸಿಟಿ ಪೊಲೀಸ್ ಇನ್ಸಪೆಕ್ಟರ್ ನವೀನ್, ತನ್ನ ಮೇಲಾಧಿಕಾರಿ ಡಿಸಿಪಿ ನಾರಾಯಣ್, ಎಸಿಪಿ ಸತೀಶ ಮಾರ್ಗದರ್ಶನದಲ್ಲಿ ಇಡೀ ಆರೋಪಿಗಳ ಪ್ಲಾನ್ ಗೆ ಪ್ರತಿ ಪ್ಲಾನ್ ಹೆಣೆದು ಹೊಂಚು ಹಾಕಿ ಹಣದ ಬ್ಯಾಗ್ ಸಮೇತ ಆರೋಪಿಗಳ ಹೇಳಿದ ಜಾಗದಲ್ಲಿ ಮರೆಯಲ್ಲಿ ಕಾಯುತ್ತಿರುತ್ತಾರೆ. ಬೆಂಗಳೂರು ದಕ್ಷಿಣ ಡಿಸಿಪಿ ನಾರಾಯಣ್, ಕಡೆಯಿಂದ ಐವತ್ತು ಸಾವಿರ ರಿವಾರ್ಡ್ ನ್ನು ಪಿಐ ಸಿಬ್ಬಂದಿಗೆ ಘೋಷಿಸಿದ್ದಾರೆ. Post navigation Previous ವಿಜಯನಗರ ಪೊಲೀಸರ ಕಾರ್ಯಾಚರಣೆ…ಸ್ಟಾರ್ ಗೋಲ್ಡ್ ಕಂಪನಿ ಮಾಲೀಕ ಯೋಗೀಶ್. ಬಂಧನ…Next ಬೆಂಗಳೂರಿನಲ್ಲಿ ಫೆಸ್ಟೋ ಸಂಸ್ಥೆಯ ಹೊಸ GCC ಉದ್ಘಾಟನೆ: 600 ಉದ್ಯೋಗಾವಕಾಶ.