May 23, 2026

c24kannada

ವಸ್ತುಸ್ಥಿತಿಯತ್ತ

ನಮ್ಮ ತಂದೆ ತಾಯಿ ಕಣ್ಣಲ್ಲಿ ನೀರಾಕಿಸಿದವ್ರಿಗೆ ಆ ದೇವರೆ ಶಿಕ್ಷೆ ಕೊಡ್ತಾನೆ ಎಂದು ಹೆಚ್‌ಡಿ ರೇವಣ್ಣ  ಶಾಪ

ಮಂಡ್ಯ ; ನಮ್ಮ ತಂದೆ ತಾಯಿ ಕಣ್ಣಲ್ಲಿ ನೀರಾಕಿಸಿದವ್ರಿಗೆ ಆ ದೇವರೆ ಶಿಕ್ಷೆ ಕೊಡ್ತಾನೆ ಎಂದು ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಹೆಚ್‌ಡಿ ರೇವಣ್ಣ  ಶಾಪ ಹಾಕಿದರು. ರಾಜ್ಯದ ಜನ್ರಿಗೆ ಒಳ್ಳೆದಾಗ್ಲಿ ಅಂತ ದೇವರಲ್ಲಿ ಪ್ರಾರ್ಥಿಸಿದೆ.ನಮ್ಮ ಕುಟುಂಬ ಬಗ್ಗೆ ಪ್ರಾರ್ಥನೆ ಆಮೇಲೆ.ನಮ್ಮ ಮೇಲೆ ಏನ್ ನಡಿತು ಅನ್ನೋದು ಎಲ್ಲಾ ಗೊತ್ತಿದೆ. ನಾನು ಈಗ ಅದರ ಬಗ್ಗೆ ವಿವರಣೆ ಕೊಡಲ್ಲ ಕಾಲ ಬಂದಾಗ ಎಲ್ಲಾ ಗೊತ್ತಾಗತ್ತೆ.ನಾನು‌ ಮಂತ್ರಿಯಾಗಿದ್ದಾಗ ಲೂಟಿ ಮಾಡಿದ್ದೀನಿ ಅನ್ನೋ ಆರೋಪ ನನ್ನ ಮೇಲೆ ಇಲ್ಲಾ. ಯಾರು ಘರ್ಜನೆ ಮಾಡಬೇಕು ಅಂತ ಕಾಲ ಬಂದಾಗ ನಾನು ಉತ್ತರ ಕೊಡ್ತಿನಿ. ಭವಾನಿ ಏನ್ ಮಾಡಿದ್ದಾರೆ ಅನ್ನೋದನ್ನ ನೀವೆಲ್ಲಾ ನೋಡಿದ್ದೀರಿ. ಎಲ್ಲದಕ್ಕೂ ಕಾಲ ಉತ್ತರಿಸಲಿದೆ. ನಮ್ಮ ತಂದೆ ತಾಯಿ ಕಣ್ಣಲ್ಲಿ ನೀರಾಕಿಸಿರೋರಿಗೆ ಆ ದೇವರೆ ಶಿಕ್ಷೆ ಕೊಡ್ತಾನೆ ಎಂದು ಹೇಳಿದರು.

ಕೃಷಿ ವಿವಿ ಮಂಡ್ಯಕ್ಕೆ ಬರೋದನ್ನ ವಿರೋಧಿಸಿದ್ರು ಎಂಬ ಚಲುವರಾಯಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿದ ಅವರು  ಚಲುವರಾಯಸ್ವಾಮಿ ರಾಜಕೀಯ ಮಾಡೋದಿದ್ರೆ ನೇರವಾಗಿ ಮಾಡಲಿ. ಮಂಡ್ಯ ಜಿಲ್ಲೆಗೆ ನಾನು‌ ಕೊಟ್ಟಷ್ಟು ಕೊಡುಗೆ ಯಾವ ರಾಜಕಾರಣಿ ಕೊಟ್ಟಿದ್ದಾರೆ? ಮಂಡ್ಯ ಜಿಲ್ಲೆಗೆ ನಮ್ಮ ಕುಟುಂಬ ಕೊಟ್ಟಷ್ಟು ಕೊಡುಗೆ ಯಾರು ಕೊಟ್ಟಿಲ್ಲ. ಮಂಡ್ಯ ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಪುಟ ತೆಗೆದು ನೋಡಲು ಹೇಳಿ ಅವರಿಗೆ.
ಗೌರ್ನರ್ ಬಳಿ ಮಂಡ್ಯ ಕೃಷಿ ವಿವಿ ಮಾಡುವಂತೆ ತಿಳಿಸಿದ್ದೇನೆ. ಚಲುವರಾಯಸ್ವಾಮಿ ದೇವರು ಮುಟ್ಟಿ ಪ್ರಮಾಣ ಮಾಡಲಿ ನಾನು ವಿರೋಧ ಮಾಡಿದ್ದೀನಿ ಅಂತ. ಮಂಡ್ಯ ಕೃಷಿ ವಿವಿಗೆ ನನ್ನ ವಿರೋಧ ಇಲ್ಲ ಅಂತಲೇ ಪತ್ರ ಬರೆದಿದ್ದೇನೆ. ಮಂಡ್ಯ ಜಿಲ್ಲೆಗೆ ನಾವು ಏನ್ ಮಾಡಿದ್ದೀವಿ ಅಂತ ಬೇಕಿದ್ದರೆ ಚೆರ್ಚೆಗೆ ಬರಲಿ. ನಮ್ಮ ಕಾಲೇಜಿಗೆ ಏನು ಕೊಡದಿದ್ದರು ಪರವಾಗಿಲ್ಲ ಮಂಡ್ಯ ಕೃಷಿ ಕಾಲೇಜಿಗೆ ನೂರು ಕೋಟಿ ತಂದು ಅಭಿವೃದ್ಧಿ ಮಾಡಲಿ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!