c24kannada

ವಸ್ತುಸ್ಥಿತಿಯತ್ತ

ಭಾರತ ಮೂಲದ ತಂದೆ-ಮಗಳು ಗುಂಡಿಗೆ ಸಾವು,,ಯಾಕೆ ನಮ್ಮ ಭಾರತೀಯರೇ ಬಲಿ!​..?

 

ಆಡೋ ಮಕ್ಕಳ ಕೈಯ್ಯಲ್ಲೂ ಮದ್ದು-ಗುಂಡು, ಬಂದೂಕುಗಳು ಅಮೆರಿಕದಲ್ಲಿ ರಾರಾಜಿಸುತ್ತಿರುತ್ತವೆ. ಇದಕ್ಕೆ ಸಾಕ್ಷಿಯಾಗಿ ಆಗಾಗ ಶೂಟೌಟ್ ಪ್ರಕರಣಗಳು ನಡೆಯುತ್ತಲೇ ಇದೆ.  ಇದೀಗ ಮತ್ತೆ ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೆರಿಕದಲ್ಲಿ ಗನ್ ಸದ್ದು ಮಾಡಿದೆ.  ಅಟ್ಟಹಾಸಕ್ಕೆ ಭಾರತೀಯ ಮೂಲದವರು ಅಸುನೀಗಿದ್ದಾರೆ. ಅಮೆರಿಕಾದಲ್ಲಿ ಶೂಟೌಟ್‌ಗಲು ಸರ್ವೆಸಾಮಾನ್ಯ ಎನ್ನುವಂತಾಗಿದೆ. ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದ್ರೂ ಗನ್‌ಗಳ ಸದ್ದು ಕಮ್ಮಿಯಾಗದಾಗಿದೆ. ಇದೀಗ ಮತ್ತೆ ಆಗಂತುಕನ ಅಟ್ಟಹಾಸಕ್ಕೆ ಅಮಾಯಕರ ಪ್ರಾಣಪಕ್ಷಿ ಹಾರಿಹೋಗಿದೆ. ವರ್ಜಿನಿಯಾದಲ್ಲಿ ಬಂದೂಕುದಾರಿಯ ದುರುಳತನಕ್ಕೆ ಭಾರತೀಯ ಮೂಲದ ತಂದೆ-ಮಗಳು ಸಾವನ್ನಪ್ಪಿದ್ದಾರೆ.

 

ಅಮೆರಿಕದ ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿ ಶೂಟೌಟ್‌ ನಡೆದಿದ್ದು, ಭಾರತ ಮೂಲದ ಪ್ರದೀಪ್ ಕುಮಾರ್ ಪಟೇಲ್‌ ಗುಂಡೇಟಿಗೆ ಬಲಿಯಾಗಿದ್ದಾರೆ. ಪ್ರದೀಪ್ ಪುತ್ರಿ 24 ವರ್ಷದ ಉರ್ಮಿ ಕೂಡಾ ಗುಂಡೇಟಿಗೆ ಅಸುನೀಗಿದ್ದಾರೆ. ಆಗಂತುಕನ ಗುಂಡಿಗೆ ಸ್ಥಳದಲ್ಲೇ ಪ್ರದೀಪ್‌ ಸಾವನ್ನಪ್ಪಿದ್ದು,  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಪುತ್ರಿ ಉರ್ಮಿ ಸಾವನ್ನಪ್ಪಿದ್ದಾರೆ.   ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರಾಗಿರೋ ಪ್ರದೀಪ್ ಪಟೇಲ್, ಪತ್ನಿ ಹಂಸಬೆನ್, ಪುತ್ರಿ ಉರ್ಮಿ ಜೊತೆ ಅಮೆರಿಕದಲ್ಲಿ ವಾಸ ಮಾಡುತ್ತಾ ಇದ್ದರು.  ಕಳೆದ ಆರು ವರ್ಷಗಳಿಂದ ತಮ್ಮ ಸಂಬಂಧಿಯ ಶಾಪ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.  ಹೀಗೆ ತಮ್ಮ ಕಾರ್ಯದಲ್ಲಿ ತೊಡಗಿದ್ದಾಗ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಶಾಪ್‌ನ ಓಪನ್ ಮಾಡ್ತಿದ್ದಂತೆ ಮದ್ಯ ಖರೀದಿಸುವ ನೆಪದಲ್ಲಿ ಫ್ರೇಜಿಯರ್ ಡೆವೋನ್ ವಾರ್ಟನ್ ಎಂಬ ದುಷ್ಕರ್ಮಿ ಎಂಟ್ರಿ ಕೊಟ್ಟಿದ್ದ. ರಾತ್ರಿ ಯಾಕೆ ಶಾಪ್ ಕ್ಲೋಸ್ ಮಾಡಿದ್ರಿ ಅಂತ ಪ್ರಶ್ನಿಸಿ ಶೂಟ್ ಮಾಡಿದ್ದಾನೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.

 

ಕೊಲೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವರ್ಜಿನಿಯಾದ ಪೊಲೀಸರು ಆರೋಪಿ ಫ್ರೇಜಿಯರ್ ಡೆವೋನ್ ವಾರ್ಟನ್ ಎಂಬ ದುಷ್ಕರ್ಮಿಯನ್ನ ಬಂಧಿಸಿದ್ದಾರೆ. ಇವನ ವಿರುದ್ಧ ಕೊಲೆ, ಶಸ್ತ್ರಾಸ್ತ ಕಾನೂನುಗಳ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಶೂಟೌಟ್‌ ಬಗ್ಗೆ ವಿಚಾರಣೆ ಮುಂದುವರಿದಿದೆ. ಅಮೆರಿಕದಲ್ಲಿ ಶಸ್ತ್ರಾಗಳ ಬಗ್ಗೆ ಕಠಿಣ ಕಾನೂನು ತರುವ ಅವಶ್ಯಕತೆ ಇದೆ. ಇಲ್ಲದಿದ್ರೆ ದುರುಳ ಜನರ ದರ್ಪ, ದುಷ್ಕೃತ್ಯಗಳಿಗೆ ಅಮಾಯಕರು ಬಲಿಯಾಗಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!