c24kannada

ವಸ್ತುಸ್ಥಿತಿಯತ್ತ

ಬಿಸಿಲಿಗೆ ಹೈರಾಣಾದ ಜನರು : ವಾಂತಿ, ಬೇದಿ, ಜ್ವರ, ಜಾಂಡೀಸ್​ ಉಲ್ಬಣ

 

ಚಿಕಬ್ಬಳ್ಳಾಪುರ : ಬೇಸಿಗೆ ಆರಂಭವಾಗಿದ್ದು, ಸೂರ್ಯನ ಶಾಖಕ್ಕೆ ಜನರು ತತ್ತರಿಸುತ್ತಿದ್ದಾರೆ.   ಇನ್ನು ಬಿಸಿಲಿನ ತಾಪಮಾನದಿಂದ ಚಿಕ್ಕಬಳ್ಳಾಪುರದಲ್ಲಿ  ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ವೃದ್ದರಲ್ಲಿ ವಾಂತಿ, ಬೇದಿ, ಜಾಂಡೀಸ್ ಉಲ್ಬಣಗೊಂಡಿದೆ. ಇದರಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಜಂಗುಳಿ ಉಂಟಾಗಿದೆ. ಮದ್ಯಾಹ್ನವಾಗುತ್ತಿದ್ದಂತೆ 36 ರಿಂದ 38 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರಿಂದ ಮಕ್ಕಳು, ಬಾಣಂತಿರು, ವೃದ್ದರಲ್ಲಿ ಡಿ ಹೈಡ್ರೇಶನ್ ಉಂಟಾಗಿ ಜ್ವರ, ವಾಂತಿ, ಬೇದಿ, ಜಾಂಡೀಸ್‍ನಂತ ಕಾಯಿಲೆಗಳು ಬರುತ್ತಿವೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಜನಜಂಗುಳಿ ಉಂಟಾಗಿದೆ. ಮಕ್ಕಳು, ಬಾಣಂತಿರಯ, ಗರ್ಭಿಣಿಯರು ಹಾಗೂ ವೃದ್ದರು ಹೆಚ್ಚಾಗಿ ನೀರು ಕುಡಿಯಬೇಕು ಆದಷ್ಟು ಮನೆ ಊಟ ಮಾಡುವಂತೆ, ಬಿಸಿಲಿನಿಂದ ರಕ್ಷಣೆ ಪಡೆಯುವಂತೆ ಮಕ್ಕಳ ತಜ್ಞ ಡಾ. ರವಿಕುಮಾರ್ ಸಲಹೆ ನೀಡಿದರು.

 

Leave a Reply

Your email address will not be published. Required fields are marked *

error: Content is protected !!