c24kannada

ವಸ್ತುಸ್ಥಿತಿಯತ್ತ

ಎಣ್ಣೆ ಚಟಕ್ಕಾಗಿ ಹೆತ್ತ ತಾಯಿಯ ತಾಳಿಯ ಮೇಲೆ ಕಣ್ಣಿಟ್ಟು,ಚಾಕು ಇರಿದ ಪಾಪಿ ಮಗ

ಬೆಂಗಳೂರು : ತಾಯಿಯೇ ದೇವರು ಅಂತಾ ಪೂಜೆ ಮಾಡೋದು ಬಿಟ್ಟು ಎಣ್ಣೆಗಾಗಿ ತಾಯಿಗೆ ಚಾಕು ಇರಿದ್ದಾನೆ ಪಾಪಿ ಮಗ. ಕುಡಿಯೋಕೆ ಹಣ ಕೊಟ್ಟಿಲ್ಲ ಅಂತಾ ತಾಯಿಗೆ ಚಾಕು ಇರಿದು ತಾಳಿ ಕಿತ್ಕೊಂಡಿದ್ದಾನೆ ಪಾಪಿ. ಬೆಂಗಳೂರಿನ ಜ್ಞಾನ ಭಾರತೀ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ಬೆಳಕಿಗೆ ಬಂದಿದೆ, ಕುಡಿತದ ಚಟಕ್ಕೆ ಬಿದ್ದಿದ್ದ ಮಗ ಮಹೇಶ್ ಅಲಿಯಾಸ್ ಕಲರ್ಸ್ ಹೆತ್ತ ತಾಯಿ ಜಯಲಕ್ಷ್ಮಿಗೆ ಚಾಕು ಇರಿದಿದ್ದಾನೆ.

 

ಕುಡಿತದ ಚಟಕ್ಕೆ ಬಿದ್ದಿದ್ದ ಆರೋಪಿ ಮಹೇಶ್ @ ಕಲರ್ಸ್, ಮಗ ಪೋಲಿಗೆ ಬಿದ್ದಿದ್ರೂ ಆಗಾಗ ಖರ್ಚಿಗೆ ಹಣ ಕೊಡ್ತಿದ್ದಳು ತಾಯಿ ಜಯಲಕ್ಷ್ಮಿ. ಕೂಲಿ ಕೆಲಸ ಮಾಡಿ ಮಗನ ಖರ್ಚಿಗೆ ಕೊಡ್ತಿದ್ದರು ತಾಯಿ ಜಯಲಕ್ಷ್ಮಿ, ಆದರೆ ಕಳೆದ ಎರಡು ಮೂರು ದಿನಗಳಿಂದ ಖರ್ಚಿಗೆ ದುಡ್ಡು ಕೊಟ್ಟಿರಲಿಲ್ಲ. ಕುಡಿಯೋಕೆ ಹಣ ಕೊಡು ಅಂತಾ ಪೀಡಿಸ್ತಿದ್ದ ಆರೋಪಿ ಮಹೇಶ್ @ ಕಲರ್ಸ್, ಆದ್ರೆ ಹಣ ಇರದೆ ಕೊಡೋಕೆ ಆಗ್ತಿರಲಿಲ್ಲ. ಹೀಗಾಗಿ ಹಣ ಇಲ್ಲ‌ ಎಂದಿದ್ದರು ತಾಯಿ ಜಯಲಕ್ಷ್ಮಿ. ಹಣ ಇಲ್ಲ ಎಂದಿದ್ದಕ್ಕೆ ತಾಳಿ ಕೊಡು ಎಂದು ಗಲಾಟೆ ತೆಗೆದಿದ್ದಾನೆ ಮಗ, ಗಲಾಟೆ ವೇಳೆ ತಾಯಿಗೆ ಚಾಕು ಇರಿದು ತಾಳಿ ಕಿತ್ಕೊಂಡು ಎಸ್ಕೇಪ್ ಆಗಿದ್ದಾನೆ ಮಗ. ನಂತರ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು ಚಿಕಿತ್ಸೆ ಕೊಡಿಸಿದ್ದಾರೆ, ಘಟನೆ ಸಂಬಂಧ ಆರೋಪಿಯನ್ನ ಬಂಧಿಸಿದ್ದಾರೆ ಪೊಲೀಸರು. ಕೊಲೆ ಯತ್ನ ಪ್ರಕರಣದ ಅಡಿ ಆರೋಪಿಯನ್ನ‌ ಬಂಧಿಸಿ ತನಿಖೆ ನಡೆಸಲಾಗ್ತಿದೆ. ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

 

Leave a Reply

Your email address will not be published. Required fields are marked *

error: Content is protected !!