c24kannada

ವಸ್ತುಸ್ಥಿತಿಯತ್ತ

ಅಪಘಾತ ತಪ್ಪಿಸಲು ಹೋಗಿ KSRTC ಬಸ್ ಪಲ್ಟಿ

ಚಿಕ್ಕೋಡಿ : ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮೈಶಾಳ ಗ್ರಾಮದ ಬಳಿ ಮಹಾರಾಷ್ಟ್ರದ ಮೀರಜನಿಂದ ವಿಜಯಪುರಕ್ಕೆ ತೆರಳುತ್ತಿದ್ದ KSRTC ಬಸ್ ಟ್ರಾಕ್ಟರ್ ಓವರಟೇಕ್ ಮಾಡಲು ಹೋಗಿ ಮುಂದೆ ಲಾರಿ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿ ಬಿದ್ದಿದೆ ಬಸ್. ಬಸ್ ನಲ್ಲಿ 40 ಕ್ಕೂ ಹೆಚ್ಚು ಜನರ ಪ್ರಯಾಣ ಮಾಡ್ತಿದ್ರು 23 ಜನರಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಯಾಳುಗಳನ್ನು ಮೀರಜ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗ್ತಿದೆ. ಬಸ್ ಬೀಳುತ್ತಿದ್ದಂತೆ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆಗೆ ದಾವಿಸಿದ್ರು ಸ್ಥಳಕ್ಕೆ ಕಾಗವಾಡ ಬಸ್ ಡಿಪೊ ಮ್ಯಾನೇಜರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 

 

 

Leave a Reply

Your email address will not be published. Required fields are marked *

error: Content is protected !!