c24kannada

ವಸ್ತುಸ್ಥಿತಿಯತ್ತ

ಬಿಎಂಟಿಸಿ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ಸಿಕ್ಕಿಬಿದ್ದ ಕಿಲಾಡಿ ಕಳ್ಳಿಯರ ಗ್ಯಾಂಗ್

 

ಬೆಂಗಳೂರು​ : ಬಿಎಂಟಿಸಿ ಬಸ್​ ಮಹಿಳಾ ಕಂಡಕ್ಟರ್​ ಚಾಣಕ್ಷತನದಿಂದ ಕಿಲಾಡಿ ಕಳ್ಳಿಯರ ಗ್ಯಾಂಗ್ ಸಿಕ್ಕಿಬಿದ್ದಿದ್ದಾರೆ.  ಸೋಮವಾರ ರಾತ್ರಿ 7:15 ಕ್ಕೆ ಮೆಜೆಸ್ಟಿಕ್​ನಿಂದ ದೇವನಹಳ್ಳಿ ಬಳಿಯ ವಿಜಿಪುರಕ್ಕೆ ಹೋಗುತ್ತಿದ್ದ ಡಿಪೋ- ೫೦ ಕ್ಕೆ ಸೇರಿದ ಬಿಎಂಟಿಸಿ ಬಸ್​ ಅನ್ನು ಆಂಧ್ರಪ್ರದೇಶದಿಂದ ಬಂದ ನಾಲ್ವರು ಮಹಿಳೆಯರು ಹತ್ತಿದ್ದಾರೆ. ಬಸ್ ಪ್ರಯಾಣದ ವೇಳೆ ಪಕ್ಕದಲ್ಲಿದ್ದ ಮಹಿಳೆ ಬ್ಯಾಗ್​ನಿಂದ ಓರ್ವ ಕಳ್ಳಿ ಮೊಬೈಲ್ ಕಳ್ಳತನ ಮಾಡುತ್ತಿದ್ದಳು. ಇದನ್ನು, ನೋಡಿದ ಮಹಿಳಾ ಕಂಡಕ್ಟರ್ ಚಾಲಕ ಮುನಿರತ್ನ ಅವರಿಗೆ ವಿಚಾರ ಹೇಳಿದರು.

 

ಬಸ್ ಡೋರ್ ಲಾಕ್ ಮಾಡಿ ಪೋಲಿಸರು ಬರುವರೆಗೂ ಬಸ್ ನಿಲ್ಲಿಸಿ ಎಂದು ಹೇಳಿದ್ದಾರೆ. ಮಹಿಳಾ ಕಂಡಕ್ಟರ್​ ಮಾತನಿನಂತೆ ಚಾಲಕ ಡೋರ್​ ಲಾಕ್ ಮಾಡಿ, ಪೊಲೀಸರು ಬರುವವರೆಗೂ ಬಸ್​ ನಿಲ್ಲಿಸಿದ್ದಾರೆ. ಚಾಲಕ ಡೋರ್ ಲಾಕ್ ಮಾಡ್ತಿದ್ದಂತೆ ಕಳ್ಳಿಯರು ಮಗು ಅಳುತ್ತಿದೆ. ನಾವು ಹೋಗಬೇಕೆಂದು ನಾಟಕವಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಚಾಲಕ ಮಂಜುನಾಥ್ ಡೋರ್ ತೆರೆಯಲಿಲ್ಲ. ಬಳಿಕ, ಕದ್ದ ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಕಳ್ಳಿಯರು ಸೀಟ್ ಕೆಳಗೆ ಬಿಸಾಡಿದ್ದಾರೆ. ಪೋಲಿಸರು ಬಂದ ಮೇಲೆ ಮಹಿಳೆಯರ ಬ್ಯಾಗ್ ಚೆಕ್ ಮಾಡಿದಾಗ ಬ್ಯಾಗ್ ತುಂಬ ಬಂಗಾರ ಮತ್ತು ಸಾಕಷ್ಟು ಮೊಬೈಲ್ ಪೋನ್ ಪತ್ತೆಯಾಗಿವೆ. ಯಲಹಂಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

 

Leave a Reply

Your email address will not be published. Required fields are marked *

error: Content is protected !!