ಮುಂಬರುವ ಕಸಾಪ ಚುನಾವಣೆಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬೆಂಬಲಿಸಿ- ನಿವೃತ್ತ ಡಿಸಿ ಡಾ ಸಿ ಸೋಮಶೇಖರ್ ಮನವಿ.
ಮುಂದಿನ ಕಸಾಪ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೇ ಸ್ಪರ್ದಿ ಬೆಂಬಲಿಸಿ- ಡಾ ಸಿ ಸೋಮಶೇಖರ್ ಮನವಿ.

ಮುಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಬೆಂಬಲಿಸಿ, ಸಾಹಿತ್ಯ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡೇ ಕನ್ನಡದಲ್ಲಿಯೇ ಕೇಂದ್ರ ಆಯೋಗದ ಆಡಳಿತ ಸೇವಾ ಪರೀಕ್ಷೆ ಬರೆದು ವಿವಿದ ಹುದ್ದೆಗೇರಿ ಸೇವೆ ಸಲ್ಲಿಸಿರುವ ಅರ್ಹತೆಯಡಿ ನನ್ನನ್ನು ರಾಜ್ಯದ ಸಾಹಿತ್ಯಾಸಕ್ತರು ಬೆಂಬಲಿಸಿ ಎಂದು ನಿವೃತ್ತ ಡಿಸಿ ಡಾ ಸಿ ಸೋಮಶೇಖರ್ ಪತ್ರಿಕಾಘೋಷ್ಟಿಯಲ್ಲಿ ಮನವಿ ಮಾಡಿದ್ದಾರೆ.
ಅವರು ಇಂದು ಆನೇಕಲ್ ಖಾಸಗೀ ಹೋಟೆಲ್ ಒಂದರಲ್ಲಿ ಕಸಾಪ ಸಧಸ್ಯರೊಂದಿಗೆ ಕರೆದಿದ್ದ ಮಾಧ್ಯಮಘೋಷ್ಟಿಯಲ್ಲಿ ಚುನಾವಣೆಗೆ ಸ್ಪರ್ದಿಸಲು ಬಯಸಿರುವೆ, ಆನೇಕಲ್ ಗಡಿ ಭಾಗದಲ್ಲಿದ್ದರೂ ಸಾಕಷ್ಟು ಸಾಹಿತ್ಯಾಭಿರುಚಿ ಇರುವ ಕ್ಷೇತ್ರವಾದ್ದರಿಂದ ಇಲ್ಲಿಂದಲೇ ಇಡೀ ರಾಜ್ಯದ ಕಸಾಪ ಸಧಸ್ಯರಿಗೆ ಮನವಿ ರವಾನೆಯಾಗಲಿ. ಸದಾ ಕನ್ನಡದ ನಿತ್ಯೋತ್ಸವದ ಸೇವೆಗೆ ನಾನು ತೊಡಗಿಸಿಕೊಳ್ಳಲು ಅವಕಾಶ ನೀಡಿ ಎಂದು ಕೋರಿದರು. ಸಂಸ್ಕೃತಿ ಮತ್ತು ಪ್ರಗತಿ ಒಂದೇ ನಾಣ್ಯದ ಎರೆಡು ಮುಖಗಳು ಎಂದು ನಂಬಿರುವ ನಾಣು ಕಲೆ ಕನ್ನಡ ಸೇವೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನನ್ನ ತುಡಿತ ಇದ್ದೇ ಇದೆ ಇದಕ್ಕೆ ಇನ್ನಷ್ಟು ಸಾಹಿತ್ಯಾಭಿಮಾನಿಗಳು ಬೆಂಬಲ ನೀಡಲು ನನ್ನೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಹಿರಿಯ ಸಾಹಿತಿ ಪತ್ರಕರ್ತ ತಾನಂ ಕುಮಾರಸ್ವಾಮಿ ಮಾತನಾಡಿ ಕಸಾಪ ಹಳಿತಪ್ಪಿದೆ ಅದನ್ನ ಸರಿದಾರಿಗೆ ತರುವಲ್ಲಿ ಆಡಳಿತದ ಚುಕ್ಕಾಣಿಯ ನರನಾಡಿ ಗೊತ್ತಿರುವುದಷ್ಟೇ ಅಲ್ಲದೆ ಭಾಷೆ, ನಾಡು ಬೆಳವಣಿಗೆಯ ಬಗ್ಗೆ ಸ್ಪಷ್ಟ ಅರಿವಿರುವ ಸೋಮಶೇಖರ್ ಅಂತಹವರು ಬರಬೇಕಿದೆ ಎಂದರು.
ಘೋಷ್ಟಿಯಲ್ಲಿ ಸ್ವಾಗತಿಸಿ ನಿರೂಪಿಸಿದ ಪತ್ರಕರ್ತ ಸಂಪಾದಕ ಡಾ ಚಿನ್ನಪ್ಪ ಚಿಕ್ಕಹಾಗಡೆ, ತಾ ಕಸಾಪ ಅಧ್ಯಕ್ಷ ಆದೂರು ಪ್ರಕಾಶ್, ಹಾರಗದ್ದೆ ನಟರಾಜ್, ವೆಂಕಟೇಶ್, ನೊಸೆನೂರು ರವಿಚಂದ್ರ, ಅಪ್ಸರ್ ಆಲಿಖಾನ್, ಮಧು, ಧನಂಜಯ್, ತಿಮ್ಮೇಶ್, ನಾಗಲೇಖ, ಅಮರೇಶ್ ಇದ್ದರು.
