ವೈಟ್ ಫೀಲ್ಡ್ ಪೊಲೀಸರಿಂದ ಬೃಹತ್ ಗಾಂಜಾ ವಶ.
ಬೃಹತ್ ಗಾಂಜಾ ವಶಕ್ಕೆ ಪಡೆದ ವೈಟ್ ಫೀಲ್ಡ್ ಪೊಲೀಸರು.ಖಚಿತ ಮಾಹಿತಿಯೊಂದಿಗೆ ಆರೋಪಿ ಜೊತೆಗೆ ಲ್ಯಾಪ್ಟ್ಯಾಪ್ಗಳ ಸಮೇತ ಆರೋಪಿಗಳ ಎಡೆಮುರಿ ಕಟ್ಟಿದ್ದಾರೆ.
ವೈಟ್ ಫೀಲ್ಡ್ ಪೊಲೀಸರಿಂದ ಬೃಹತ್ ಗಾಂಜಾ ವಶ
ವೈಟ್ ಫೀಲ್ಡ್ ವಿಭಾಗದ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ ಸುಮಾರು ₹55,00,000/- ಮೌಲ್ಯದ 27 ಕೆ.ಜಿ 239 ಗ್ರಾಂ ನಿಷೇಧಿತ ಮಾದಕ ವಸ್ತು ಹಾಗೂ 3.2 ಲೀಟರ್ ಹ್ಯಾಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ₹10,00,000/- ಮೌಲ್ಯದ 15 ಲ್ಯಾಪ್‌ಟಾಪ್‌ಗಳು ಹಾಗೂ ₹9,00,000/- ಮೌಲ್ಯದ 14 ಐ-ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಚಟುವಟಿಕೆಗಳ ವಿರುದ್ಧ ವೈಟ್ ಫೀಲ್ಡ್ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನು ಮುಂದುವರಿಸುತ್ತಿದ್ದಾರೆ. ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ವಿನಂತಿ

