c24kannada

ವಸ್ತುಸ್ಥಿತಿಯತ್ತ

ಕೋಳಿ ಮಾಂಸ ತಿಂದ್ರೆ ಅಕಾಲಿಕ ಮರಣ, ಭಯಾನಕ ಕ್ಯಾನ್ಸರ್..! ಎಚ್ಚರಿಕೆ ಕೊಟ್ಟ ತಜ್ಞರು

ಕೋಳಿ ಮಾಂಸವನ್ನು ವಿಶ್ವಾದ್ಯಂತ ಅತ್ಯಂತ ಜನಪ್ರಿಯ ಆರೋಗ್ಯಕರ ಪ್ರೋಟೀನ್ ಆಹಾರವೆಂದು ಪರಿಗಣಿಸಲಾಗಿದೆ. ಆದರೂ, ಇತ್ತೀಚಿನ ಅಧ್ಯಯನವು ವಾರಕ್ಕೆ 300 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಕೋಳಿ ಮಾಂಸವನ್ನು ತಿನ್ನುವುದು ಸಾವಿನ ಅಪಾಯಕ್ಕೆ ಇಲ್ಲವೇ ಕರುಳಿನ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಅಂತ ಎಚ್ಚರಿಸಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

 

ಉತ್ತಮ ಆರೋಗ್ಯಕ್ಕೆ ಯಾವುದು ಒಳ್ಳೆಯ ಆಹಾರ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ಮಾಂಸಾಹಾರಿ ಅಥವಾ ಸಸ್ಯಾಹಾರಿ  ಇದರಲ್ಲಿ ಯಾವುದು ಬೆಸ್ಟ್ ಎಂಬ ಗೊಂದಲವಿದೆ. ತಜ್ಞರು ತಮ್ಮದೇ ರೀತಿಯ ವಿಶ್ಲೇಷಣೆ ಮೂಲಕ ಉತ್ತರಿಸುತ್ತಾರೆ. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳೂ ನಡೆದಿವೆ. ಇತ್ತೀಚಿನ ಅಧ್ಯಯನವೊಂದು ಪ್ರತಿದಿನ ಕೋಳಿ ತಿನ್ನೋರಿಗೆ ಎಚ್ಚರಿಕೆ ನೀಡಿದರು.  ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಸಂಶೋಧಕರ ಪ್ರಕಾರ.. ಹೆಚ್ಚು ಕೋಳಿ ಮಾಂಸ ತಿನ್ನೋದು ಅಪಾಯಕಾರಿ ಎಂದು ಹೇಳಿದೆ. ವಾರಕ್ಕೆ 300 ಗ್ರಾಂಗಿಂತ ಹೆಚ್ಚು ಕೋಳಿ ಮಾಂಸ ತಿಂದರೆ ಹೊಟ್ಟೆ, ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಅದರಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆ ಎಂದು ಹೇಳಿದೆ. ಇಷ್ಟುದಿನ ಕೆಂಪು ಮಾಂಸ ತಪ್ಪಿಸಬೇಕು, ಕೋಳಿ ಮಾಂಸ  ಉತ್ತಮ ಆಯ್ಕೆ ಎಂದು ನಂಬಲಾಗಿತ್ತು. ಆದರೆ ಈ ಅಧ್ಯಯನ ಜನರ ನಂಬಿಕೆಯನ್ನ ಸುಳ್ಳು ಮಾಡಿದೆ.

 

ಕೋಳಿಯನ್ನು ಹೆಚ್ಚಾಗಿ ತಿನ್ನೋದ್ರಿಂದ ಜೀರ್ಣಾಂಗ ವ್ಯವಸ್ಥೆ ಮೇಲೆ  ಕ್ಯಾನ್ಸರ್ ತೂಗುಗತ್ತಿಯ ಅಪಾಯ ಹೆಚ್ಚಿದೆ ಎಂಬುದನ್ನ ಸಂಶೋಧಕರು ಕಂಡುಕೊಂಡಿದ್ದಾರೆ. 20 ವರ್ಷಗಳ ಅವಧಿಯಲ್ಲಿ 4,869 ವಯಸ್ಕರ ಡೇಟಾ ಅಧ್ಯಯನ ಮಾಡಲಾಗಿದೆ. ಹೆಚ್ಚು ಕೋಳಿ ಮಾಂಸ ಸೇವಿಸಿದೋರಿಗೆ ಅಕಾಲಿಕ ಮರಣದ ಅಪಾಯವೂ ಹೆಚ್ಚಾಗಿದೆ.  ನೀವು ಯಾವುದೇ ಆಹಾರ ಸೇವಿಸಿ. ಅದು ಸಸ್ಯಹಾರ ಆಗಿರಲಿ ಅಥವಾ ಮಾಂಸ ಆಹಾರ ಆಗಿರಲಿ. ಆದರೆ ನಿಮ್ಮ ಆಹಾರದಲ್ಲಿ ಸಮತೋಲನ ಇರಲಿ. ಮಾಂಸಾಹಾರ ಸೇವನೆಯಿಂದ ಹೃದಯ ಬಡಿತ ಹೆಚ್ಚುತ್ತದೆ. ಹೆಚ್ಚು ಕೋಳಿ ಮಾಂಸ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

 

Leave a Reply

Your email address will not be published. Required fields are marked *

error: Content is protected !!