ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ನಾಳೆನೆ ಕಾಲ ಬರಬಹುದು…ಇದೇ ಅವಧಿಯಲ್ಲಿ ಸಿಎಂ ಆಗ್ತಾರೆ – ಬೈರವಿ ಅಮ್ಮ ಹೇಳಿಕೆ
1 min read
ಹುಬ್ಬಳ್ಳಿ : ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ನಾಳೆನೆ ಕಾಲ ಬರಬಹುದು. ಇದೇ ಅವಧಿಯಲ್ಲಿ ಸಿಎಂ ಆಗ್ತಾರೆ ಎಂದು ಹುಬ್ಬಳ್ಳಿಯಲ್ಲಿ ಬೈರವಿ ಅಮ್ಮ ಹೇಳಿದರು. ನನ್ನ ಮಾತು ಯಾವತ್ತೂ ಸುಳ್ಳ ಆಗಲ್ಲ. ಇಲ್ಲಿತನಕ ಸುಳ್ಳ ಆಗಿಲ್ಲ,ಸುಳ್ಳ ಆಗೋದು ಅಲ್ಲ. ನಾನೂ ಮೂರು ವರ್ಷದ ಹಿಂದೆ ಡಿಕೆಶಿವಕುಮಾರ್ ಮನೆಗೆ ಹೋಗಿದ್ದೆ. ಡಿಕೆ ಶಿವಕುಮಾರ್ ನನ್ನ ಕರೆದಿದ್ರು. ಮುಂದೆ ಏನಾಗತ್ತೆ ಅಂತಾ ಕೇಳಿದ್ರು, ಏನ ಆಗಬೇಕು ಅಂತಾ ಕೇಳಿದೆ. ಮುಂದಿನ ಕಥೆ ಏನು ಅಂತಾ ಕೇಳಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾ ಹೇಳಿದ್ದೆ. ನೀನು ದುಡಿದ ದುಡ್ಡು,ಇನ್ಯಾವನೋ ತಿಂದು ಗುಂಡಾಗ್ತಾನೆ ಅನ್ನೋದು ಅದರ ಅರ್ಥ. ಸತ್ಯ ಆಯ್ತೋ ಇಲ್ಬೋ ಎಂದು ಭೈರವಿ ಅಮ್ಮ ಹೇಳಿದರು. ನಾನು ವಿನಯ್ ಕುಲಕರ್ಣಿ ಮನೆಗೆ ಹೋಗಿ ಶಾಸಕ ಆಗ್ತಾನೆ ಅಂದಿದ್ದೆ. ಶಾಸಕ ಆದ್ನೋ ಇಲ್ವೋ, ನನ್ನ ಮಾತು ಸುಳ್ಳು ಆಗಲ್ಲ. ಸಿಎಂ ಬದಲಾವಣೆ ಅಲ್ಲ,ಆ ಸೀಟ್ ನಲ್ಲಿ ಡಿಕೆನೆ ಕೂತಕೊಬೇಕಿತ್ತು ಎಂದ ಭೈರವಿ ಅಮ್ಮ. ಇದೇ ಅವಧಿಯಲ್ಲಿ ಆಗ್ತಾರಾ ಅನ್ನೋ ಪ್ರಶ್ನೆಗೆ. ಹೌದು ಇದೆ ಅವಧಿಯಲ್ಲಿ ಆಗೋದು ಎಂದು ಹೇಳಿದರು. ಒಂದು ಸಲ ಆಗಲಿ ಸಾಕು ಎಂದ ಭೈರವಿ ಅಮ್ಮ ಹೇಳಿದರು.
