ಐತಿಹಾಸಿಕ ಮಹಾ ಕುಂಭಮೇಳದ ಹಿನ್ನೆಲೆಯೇನು ..?
1 min read
ಉತ್ತರಪ್ರದೇಶದ ಪ್ರಯಾಗ್ ರಾಜ್ ಅಕ್ಷರಶಃ ದೇವನಗರಿಯಾಗಿ ಪರಿವರ್ತನೆಯಾಗಿದೆ. ಈ ಬಾರಿಯ ಮಹಾಕುಂಭಕ್ಕೆ ಸರಾಸರಿ 10, 000 ಎಕರೆ ಪ್ರದೇಶದಲ್ಲಿ ಮಹಾಕುಂಭ ನಗರವೇ ಸ್ಥಾಪನೆಯಾಗಿದೆ. ಶಿವರಾತ್ರಿ ವರೆಗೆ ನಡೆಯುವ ಈ ಮಹಾಕುಂಭಮೇಳದ ಮಹಾಹಬ್ಬಕ್ಕೆ ಚಾಲನೆ ಸಿಕ್ಕಿದೆ.. 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಕ್ಕೆ 45 ಕೋಟಿಗೂ ಹೆಚ್ಚಿನ ಭಕ್ತರು ಪಾಲ್ಗೋಳ್ಳುವ ನಿರೀಕ್ಷೆ ಇದೆ . ಕುಂಭ ಮೇಳ ಹಿಂದೂಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆ. ಕುಂಭ ಮೇಳದಲ್ಲಿ ನಾಲ್ಕು ಪ್ರಕಾರಗಳಿವೆ ಮೋದಲನೆಯದು ಕುಂಭಮೇಳ, ಎರಡನೆಯದು “ಅರ್ಧ ಕುಂಭಮೇಳ”, ಮೂರನೆಯದ್ದು “ಪೂರ್ಣ ಕುಂಭ” ಹಾಗೂ ನಾಲ್ಕನೆಯದ್ದೇ ಈ “ಮಹಾಕುಂಭಮೇಳ” .
