November 2026
M T W T F S S
 1
2345678
9101112131415
16171819202122
23242526272829
30  
November 28, 2026

c24kannada

ವಸ್ತುಸ್ಥಿತಿಯತ್ತ

ಬೆಂಗಳೂರಿನ ಸುತ್ತ ಅರಣ್ಯ ಇಲಾಖೆಯಿಂದ ೧೩೦೦ ಎಕರೆ ಜಾಗದಲ್ಲಿ ಹತ್ತು ಪಾರ್ಕ್‌ ನಿರ್ಮಾಣ. -ರಾಮಲಿಂಗಾರೆಡ್ಡಿ.

ಚಂದಾಪುರ ಟ್ರಾಫಿಕ್‌ ಸಿಗ್ನಲ್‌ ಗೆ ಚಾಲನೆ ನೀಡಿದ ಮಾಜಿ ರಾಜ್ಯ ಸಭಾ ಸಧಸ್ಯ ಕುಪೇಂದ್ರ ರೆಡ್ಡಿ ಮತ್ತು ಹಾಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ

ಚಂದಾಪುರ ಟ್ರಾಫಿಕ್‌ ಸಿಗ್ನಲ್‌ ಗೆ ಚಾಲನೆ ನೀಡಿದ ಮಾಜಿ ರಾಜ್ಯ ಸಭಾ ಸಧಸ್ಯ ಕುಪೇಂದ್ರ ರೆಡ್ಡಿ ಮತ್ತು ಹಾಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರಿನ ಸುತ್ತ ಅರಣ್ಯ ಇಲಾಖೆಯಿಂದ ೧೩೦೦ ಎಕರೆ ಜಾಗದಲ್ಲಿ ಹತ್ತು ಪಾರ್ಕ್‌ ನಿರ್ಮಾಣ. –ಸಚಿವ ರಾಮಲಿಂಗಾರೆಡ್ಡಿ.

 

ಆನೇಕಲ್‌,ನ,೨೭: ಬೆಂಗಳೂರು ನಗರವನ್ನು ಹಚ್ಚ ಹಸಿರಾಗಿಸಿ ನಾಗರೀಕರನ್ನು ಆರೋಗ್ಯವಾಗಿಡುವ ಉದ್ದೇಶದಿಂದ ಅರಣ್ಯ ಇಲಾಖೆ ನಗರದಲ್ಲಿ ೧೩೦೦ ಎಕರೆ ಜಾಗದಲ್ಲಿ ಹತ್ತು ಪಾರ್ಕ್‌ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಅವರು ನಾಗರಾಜ್‌ ರೆಡ್ಡಿ ನೇತೃತ್ವದ ಮಹೀಂದ್ರಾ ಹೋಮ್ಸ್ ಸಂಸ್ಥೆಯ ಸಹಕಾರದಲ್ಲಿ ಚಂದಾಪುರ ವೃತ್ತದಲ್ಲಿ ಸಿಗ್ನಲ್‌ ಲೈಟ್ಸ್‌ ಉದ್ಘಾಟನೆಗೊಳಿಸಿ ಸಚಿವರು ಮಾತನಾಡಿದರು. ನಗರದಲ್ಲಿ ಈಗಾಗಲೇ ಇರುವ ೩೮೦ ಎಕರೆಯ ಅತಿದೊಡ್ಡ ಪಾರ್ಕ್‌ ಜಾರಕ ಬಂಡೆ ಕಾವಲ್‌ ಹೊರತು ಪಡಿಸಿದರೆ ೨೫೦ ಎಕರೆಯ ಲಾಲ್‌ ಬಾಗ್‌, ೧೫೦ ಎಕರೆಯ ಕಬ್ಬನ್‌ ಪಾರ್ಕ್‌ ಅಷ್ಟೇ ದೊಡ್ಡವು ಎನಿಸಿಕೊಂಡಿವೆ ಉಳಿದಂತೆ ೮ರಿಂದ ೨೫ ಎಕೆರೆಗೆ ಸೀಮಿತಗೊಂಡ ಪಾರ್ಕ್ಗಳು ಇವೆ. ಇದೀಗ ಈ ಎಲ್ಲಾ ದಾಖಲೆ ಮೀರಿ ೧೩೦೦ ಎಕೆರೆ ಜಾಗದಲ್ಲಿ ೧೦ ಪಾರ್ಕ್‌ ಗಳು ಸೇರಿಕೊಂಡು ವಾಹನ ದಟ್ಟಣೆಯ ವಿಷಮ ಗಾಳಿಗೆ ತಿಲಾಂಜಲಿ ಹಾಡಲಿದ್ದೇವೆ ಎಂದರು. ಬೆಂಗಳೂರು ನಗರ ವೊಂದರಲ್ಲೇ ೧,೪೦ ಕೋಟಿ ಜನಸಂಖ್ಯೆಯಿದೆ, ಅದರಲ್ಲಿ ೧,೩೦ಕೋಟಿ ವಾಹನಗಳೇ ತುಂಬಿವೆ. ಅದರಲ್ಲೂ ಶೇಕಡ ೨೦ ಬೈಕ್ಗಳು ಹೊರತು ಪಡಿಸಿದರೆ ಉಳಿದ ೮೦% ಕಾರುಗಳು ಮತ್ತಿತರ ವಾಹನಗಳೇ ಸಂಚರಿಸುತ್ತಿವೆ. ಜನಸಂಖ್ಯೆಗೆ ಅನುಗುಣವಾಗಿ ವಾಹನಗಳಿರುವುದರಿಂದ ಸಹಜವಾಗಿ ಸಂಚಾರ ದಟ್ಟಣೆ ನಿರ್ಹಹಿಸಲು ಪೊಲೀಸರಿಗೆ ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ ಆನೇಕಲ್‌ ಭಾಗದಲ್ಲಿ ಟಿವಿಎಸ್ ಕಂಪೆನಿಯಿಂದ ಅತ್ತಿಬೆಲೆ ಸಂಚಾರ ಸಿಗ್ನಲ್‌ ವ್ಯವಸ್ಥೆ, ದೊಮ್ಮಸಂದ್ರದಲ್ಲೂ ಸಿಗ್ನಲ್‌ ವ್ಯವಸ್ಥೆಗೆ ಖಾಸಗೀ ಸಹಭಾಗಿತ್ವದಿಂದ ನೆರವೇರಿದೆ. ಇದೀಗ ಬಿಟಿ ನಾಗರಾಜ್‌ ರೆಡ್ಡಿ ಸಹಕಾರದಲ್ಲಿ ಚಂದಾಪುರ ವೃತ್ತದಲ್ಲಿ ಸ್ವಚ್ಚತೆ, ವಾಹನ ನಿರ್ವಹಣೆ, ಪಾರ್ಕ್‌, ವಿದ್ಯುತ್‌ ದೀಪ, ಸಿಸಿ ಕ್ಯಾಮೆರಾಗಳ ಲಭ್ಯತೆ, ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಅಲ್ಲದೆ ಪೊಲೀಸರೊಂದಿಗೆ ಕೈ ಜೋಡಿಸಿ ವಾಹನ ಸವಾರರಿಗೆ ಸಂಚಕಾರವಾದ ಸಂಚಾರ ದಟ್ಟಣೆಯನ್ನು ನಿಭಾಯಿಸುವಲ್ಲಿ ಸಹಕರಿಸಿದ್ದಾರೆ ಎಂದು ಶ್ಲಾಘಿಸಿದರು.

ಅದರಂತೆ ಕಲ್ಕೆರೆ ಅರಣ್ಯ ಇಲಾಖೆ ಕಚೇರಿ ವೃತ್ತದಲ್ಲಿ ನೂರು ಎಕರೆ ಜಾಗವಿದ್ದು, ಅರಣ್ಯ ಇಲಾಖೆಗೆ ತೊಡಕಾಗದಂತೆ ೯೦ ಎಕರೆಯಲ್ಲಿ ಸಿಮೆಂಟ್‌ ಇನ್ನಿತರೆ ಕೃತಕ ವಸ್ತುಗಳ ಬಳಸದೇ ಪಾರ್ಕ್‌ ವ್ಯವಸ್ಥೆಯನ್ನು ಮಾಡಲು ನಾಗರಾಜ್‌ ರೆಡ್ಡಿ ಸಹಕಾರವನ್ನು ಕೇಳಿದ್ದೇವೆ. ಅದಕ್ಕೆ ಅವರು ಒಪ್ಪಿದ್ದಾರೆ. ಅದಾದರೆ ಅಲ್ಲಿನ ಜನತೆಗೆ ಅದು ವರವಾಗಲಿದೆ ಎಂದರು. ಮಾತು ಮುಂದುವರೆಸಿ ಹೀಗೆಯೇ ಸರ್ಜಾಪುರ, ಅತ್ತಿಬೆಲೆ, ಆನೇಕಲ್‌ ಭಾಗಗಳಿಗೂ ಸಿಗ್ನಲ್‌ ವ್ಯವಸ್ಥೆ ಖಾಸಗೀ ಸಿಎಸ್‌ಆರ್‌ ಸಹಭಾಗಿತ್ವದಲ್ಲಿ ಮುಂದುವರೆಸಲು ಕರೆ ನೀಡಿದರು.

 

ಅನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು,

 

ಪ್ರತಿ ಶನಿವಾರ ಚಂದಾಪುರ ವೃತ್ತದಲ್ಲಿ ಸಂಚಾರದಟ್ಟಣೆ ವಿಪರೀತವಾಗಿದ್ದು ಈ ನಿಟ್ಟಿನಲ್ಲಿ ಬೊಮ್ಮಸಂದ್ರದ ನಾಗರಾಜ ರೆಡ್ಡಿ ಸಹಕಾರದಲ್ಲಿ ಸಿಗ್ನಲ್ ಲೈಟ್ಗಳನ್ನು ಅಳವಡಿಸಿ ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ ಚಂದಾಪುರ ಮೇಲ್ಸೇತುವೆ ಕೆಳಗಡೆ ವಾಹನ ನಿಲುಗಡೆ ಪಾರ್ಕ್ ವ್ಯವಸ್ಥೆ ವಿದ್ಯುತ್ ದೀಪ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಮೂರು ಕೋಟಿ ವೆಚ್ಚದಲ್ಲಿ ನಿರ್ವಹಿಸಿ ಎಂದು ನಾಗರಿಕರಿಗೆ ಸಾರ್ವಜನಿಕರಿಗೆ ಲೋಕಾರ್ಪಣೆಗೊಳಿಸಿ ಕೊಟ್ಟಿರುತ್ತಾರೆ ಇದಕ್ಕೆ ಆನೇಕಲ್ ಶಾಸಕ ಬಿ ಶಿವಣ್ಣ ಮನವಿ ಮಾಡಿದ್ದು ನಾಗರಾಜ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಹೀಗಾಗಿ ಸಿಗ್ನಲ್ ಲೈಟ್ಸ್ ಅಷ್ಟೇ ಅಲ್ಲದೆ ಮೇಲ್ಸೇತುವೆ ಅಂದವಾಗಿ ಕಾಣಲು ಸುಣ್ಣ ಬಣ್ಣ ಇನ್ನಿತರೆ ಹೈ ಫೈ ರೀತಿಯಲ್ಲಿ ವ್ಯವಸ್ಥೆ ಒದಗಿಸಿದ್ದಾರೆ. 2017 ರಲ್ಲಿ ಗೃಹ ಮಂತ್ರಿ ಆಗಿದ್ದಾಗ ಇಲ್ಲಿ ಸಂಚಾರ ಪೊಲೀಸ್ ಠಾಣೆ ಬೇಕಿತ್ತು ಎಂದು ಕೋರಿಕೆ ಸಲ್ಲಿಸಿದ್ದೆ. ಈಗ ಆನೇಕಲ್ ಸುತ್ತ ಎಲೆಕ್ಟ್ರಾನಿಕ್ ಸಿಟಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎರಡು ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವ ಯೋಜನೆ ಇದೆ ಸಂಚಾರ ನಿಯಂತ್ರಣ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸಿಗುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ತಿಳಿಸಿದರು

ಬಾಕ್ಸ್:

[ಆಶಾ ಕಾರ್ಯಕರ್ತರ ಮುಷ್ಕರಕ್ಕೆ ಹತ್ತು ದಿವಸ ದಿನಗಳು ಕಳೆದಿವೆ ಅವುಗಳಲ್ಲಿ 7- 8 ಬೇಡಿಕೆಗಳನ್ನ ಸರ್ಕಾರ ಬಗೆಹರಿಸಲಿದೆ ಎಂದು ಭರವಸೆ ನೀಡಲಾಗಿದೆ ಅವರನ್ನು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಕರೆಯಲಾಗಿದೆ ಮುಖ್ಯಮಂತ್ರಿ ಮಾತಿನ ಮೇಲೆ ಭರವಸೆ ಇಟ್ಟು ಬಂದರೆ ಅವರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಯೋಚಿಸಬಹುದು ಭರವಸೆಗಳನ್ನ ಲಿಖಿತ ರೂಪದಲ್ಲಿ ನೀಡಿದರೆ ಆಗುವುದಿಲ್ಲ ಯಾವ ಬೇಡಿಕೆ ನೈಜವಾಗಿದೆ ಎಂಬುದನ್ನರಿತು ಅವುಗಳನ್ನ ಬಗೆಹರಿಸಲಾಗುವುದು ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಆಶಿಸುತ್ತೇವೆ ಎಂದು ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.]

 

ಶಾಸಕ ಬಿ ಶಿವಣ್ಣ ಮಾತನಾಡಿ. ಚಂದಾಪುರ ವೃತ್ತವನ್ನು ಒಳಗೊಂಡಂತೆ ಇನ್ನೂ ಮೂರು ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನ ಅಳವಡಿಸಿ ಕೊಡುವಂತೆ ಬಿಟಿ ನಾಗರಾಜ್ ರೆಡ್ಡಿ ಅವರಿಗೆ ಕೋರಿಕೆ ಸಲ್ಲಿಸಲಾಗಿದೆ ದೊಮ್ಮಸಂದ್ರ ವೃತ್ತ ಸರ್ಜಾಪುರ ಸರ್ಕಲ್ ಮತ್ತು ಮತ್ತು ಆನೇಕಲ್ ಚೌಡರೆಡ್ಡಿ ವೃತ್ತಕ್ಕೆ ಸಂಚಾರ ಸಿಗ್ನಲ್ ಅಳವಡಿಸಿ ಕೊಡುವಂತೆ ಕೋರಲಾಗಿದೆ ಮನವಿಗೆ ಸ್ಪಂದಿಸಲು ರೆಡ್ಡಿ ಒಪ್ಪಿದ್ದಾರೆ ಎಂದು ತಿಳಿಸಿದರು

 

ಬಿಟಿ ನಾಗರಾಜ್ ರೆಡ್ಡಿ ಮಾತನಾಡಿ ಚಂದಾಪುರ ವೃತ್ತ ಅಭಿವೃದ್ಧಿಗೊಳಿಸಿ ಮೇಲ್ದರ್ಜೆಗೆ ಏರಿಸುವ ಯೋಜನೆ ಐದಾರು ವರ್ಷ ಕಳೆದಿದೆ ಸಾರ್ವಜನಿಕರು ಪೋಲಿಸ್ ಇಲಾಖೆ ಹಾಗೂ ಚಂದಾಪುರ ಪುರಸಭೆ ಸಮನ್ವಯತೆಯಿಂದ ಈ ಯೋಜನೆ ಇಂದು ಸಾರ್ವಜನಿಕರಿಗೆ ಲೋಕಾರ್ಪಣೆಗೊಳ್ಳುತ್ತಿದೆ ಈ ಯೋಜನೆ ನನಗೆ ತೃಪ್ತಿ ತಂದಿದೆ ಇನ್ನೂ ಬಸ್ ನಿಲ್ದಾಣದ ಎದುರು ಡಾಂಬರೀಕರಣ ಆಗಬೇಕಿದೆ ಶಾಸಕರು ಪುರಸಭೆಗೆ ಒಂದು ಲೆಟರ್ ಹೆಡ್ ಮೂಲಕ ಮನವಿ ಮಾಡಿದರೆ ಆ ಕಾರ್ಯ ಪೂರ್ಣಗೊಳ್ಳುತ್ತದೆ, ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವಕಾಶ ನೀಡುವುದಿಲ್ಲ ಎಂದು ಬಿಟಿ ನಾಗರಾಜ್ ರೆಡ್ಡಿ ತಿಳಿಸಿದರು ಇನ್ನೂ ಚಂದಾಪುರ ಸರ್ಕಲ್ ಬಹಳ ಉನ್ನತ ಮಟ್ಟದ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಉಸ್ತುಕರಾಗಿದ್ದೀರಿ ಎಂದು ರೆಡ್ಡಿ ಹೇಳಿದರು ಈಗಾಗಲೇ ಮೇಲ್ ಸೇತುವೆ ಕೆಳಗಡೆ ಕೆಲವರು ತಿಂಗಳಾನುಗಟ್ಟಲೆ ವಾಹನಗಳನ್ನು ನಿಲ್ಲಿಸಿ ಹೊರಡುತ್ತಾರೆ ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಈ ಕಾರಣಕ್ಕಾಗಿ ಶಾಸಕರು ಅನುಮತಿಸಿದರೆ ಮೇಲ್ಸೇತುವೆ ಕೆಳಗಡೆ ಸುಂಕ ಉಪಯೋಗಿಸಿ ವಾಹನ ನಿಲ್ದಾಣ ನಿರ್ವಹಣೆಗೆ ಅನುವು ಮಾಡಿಕೊಟ್ಟರೆ ವಾಹನ ನಿಲುಗಡೆಗೆ ಸುಗಮವಾಗುತ್ತದೆ ಎಂದು ಕೋರಿಕೆ ಸಲ್ಲಿಸಿದರು.

 

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ನೂತನ ಎಡಿಎ ಅಧ್ಯಕ್ಷ ಹರೀಶ್ ಹಾಗೂ ಬೆಂಗಳೂರು ದಕ್ಷಿಣ ಸಭಾ ಕ್ಷೇತ್ರದ ಅಭ್ಯರ್ಥಿ ಆರ್ ಕೆ ರಮೇಶ್, ಎಸ್ ಪಿ ಚಂದ್ರಕಾಂತ್, ಡಿವೈಎಸ್ಪಿ ಗೋಪಾಲ್ ನಾಯಕ್ ಸೂರ್ಯ ಸಿಟಿ ಇನ್ಸ್ಪೆಕ್ಟರ್ ಚಂದ್ರಪ್ಪ, ಜಿಗಣಿ ಇನ್ಸ್ಪೆಕ್ಟರ್ ನವೀನ್ ಕುಮಾರ್, ಆನೇಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಬನ್ನೇರ್ಘಟ್ಟ ಇನ್ಸ್ಪೆಕ್ಟರ್ ಕೆಂಪೇಗೌಡ,  ಮರಸೂರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಪುರುಷೋತ್ತಮರೆಡ್ಡಿ, ಬ್ಲಾಕ್ ಕಾಂಗ್ರೆಸ್ ಲಿಂಗಣ್ಣ, ರಘುನಾಥ್ ರೆಡ್ಡಿ, ರಾಜ್ಯ ಕಾಂಗ್ರೆಸ್ ವಕ್ತಾರ ರಾಮಚಂದ್ರಾರೆಡ್ಡಿ  ಹಾಗು ಚಂದಾಪುರ ಪುರಸಭೆಯ ಅಧ್ಯಕ್ಷರು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!