ವಿಧಾನಪರಿಷತ್ ಚುನಾವಣೆ: ಸತತ 5 ಬಾರಿ ಗೆದ್ದಿದ್ದ ಕಾಂಗ್ರೆಸ್ನ ಪುಟ್ಟಣ್ಣಗೆ ಸೋಲು; ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಗೆ ಜಯ
ಬೆಂಗಳೂರು : ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ವಿಧಾನಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಸತತ 5 ಬಾರಿ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಸೋಲುಂಡಿದ್ದು, ಎನ್ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್ ಗೆಲುವಿನ ನಗೆ ಬೀರಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 27,405 ಮತದಾರರಿದ್ದು, 22,468 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ನ್ ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ 10,810 ವೋಟ್ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ 9,902 ಮತಗಳು ಬಂದಿವೆ. ಅಂತಿಮವಾಗಿ 908 ಮತಗಳ ಅಂತರದಲ್ಲಿ ಎನ್ಡಿಎ ಅಭ್ಯರ್ಥಿ ಗೆದ್ದು ಬೀಗಿದ್ದಾರೆ. ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ 20,611 ಸಿಂಧುವಾಗಿದ್ದರೆ, 1,857 ಅಸಿಂಧುವಾಗಿವೆ.
2026ರ ಕರ್ನಾಟಕ ವಿಧಾನಪರಿಷತ್ ಚುನಾವಣೆಯ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪ್ರಚಂಡ ಗೆಲುವು ದಾಖಲಿಸಿದ ಎನ್.ಡಿ.ಎ (ಬಿಜೆಪಿ – ಜೆಡಿಎಸ್) ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಅವರಿಗೆ ಜೆಡಿಎಸ್ ಅಭಿನಂದನೆ ತಿಳಿಸಿದೆ.
ರಂಗನಾಥ್ ಅವರ ಮೇಲೆ ವಿಶ್ವಾಸವಿಟ್ಟು, ಶಿಕ್ಷಕರ ಹಿತರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ಮತ ನೀಡಿ ಬೆಂಬಲಿಸಿದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಸಮಸ್ತ ಶಿಕ್ಷಕ ಹಾಗೂ ಅಧ್ಯಾಪಕ ಬಂಧುಗಳಿಗೆ ಅನಂತ ಧನ್ಯವಾದಗಳು. ಹಾಗೆಯೇ, ಈ ಐತಿಹಾಸಿಕ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಎಲ್ಲಾ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರಿಗೂ ವಿಶೇಷ ಕೃತಜ್ಞತೆಗಳು ಎಂದು ತಿಳಿಸಿದೆ.
