October 2026
M T W T F S S
 1234
567891011
12131415161718
19202122232425
262728293031  
October 27, 2026

c24kannada

ವಸ್ತುಸ್ಥಿತಿಯತ್ತ

ಆನೇಕಲ್‌ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಮಹಿಳೆ ಸಾವುಆನೇಕಲ್ ಪೊಲೀಸ್ ಠಾಣೆ ಹಿಂಭಾಗದ ರಾಚಪ್ಪ ಬಿಲ್ಡಿಂಗ್‌ನಲ್ಲಿ ಘಟನೆ.


ಆನೇಕಲ್‌ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಮಹಿಳೆ ಸಾವುಆನೇಕಲ್ ಪೊಲೀಸ್ ಠಾಣೆ ಹಿಂಭಾಗದ ರಾಚಪ್ಪ ಬಿಲ್ಡಿಂಗ್‌ನಲ್ಲಿ ಘಟನೆ.

ಆನೇಕಲ್: ಆನೇಕಲ್ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ರಾಚಪ್ಪ ಬಿಲ್ಡಿಂಗ್‌ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಭುವನೇಶ್ವರಿ (55)ಎಂಬ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.
ಮೂಲತಃ ತಮಿಳುನಾಡಿನವರಾದ ಈ ದಂಪತಿ ಕಳೆದ 40 ವರ್ಷಗಳಿಂದ ಆನೇಕಲ್‌ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಭುವನೇಶ್ವರಿ ಅವರು ಪಾನಿಪುರಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ಸುಮಾರು 25 ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು, ಇತ್ತೀಚೆಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಈ ಹಿಂದೆಯೂ ಎರಡು-ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸ್ಥಳಕ್ಕೆ ಆನೇಕಲ್ ಪೊಲೀಸರು ಧಾವಿಸಿದ್ದು ಪತಿಶೀಲನೆ‌ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!