February 2026
M T W T F S S
 1
2345678
9101112131415
16171819202122
232425262728  
May 23, 2026

c24kannada

ವಸ್ತುಸ್ಥಿತಿಯತ್ತ

ಬೆಂಗಳೂರಿನಲ್ಲಿ ಫೆಸ್ಟೋ ಸಂಸ್ಥೆಯ ಹೊಸ GCC ಉದ್ಘಾಟನೆ: 600 ಉದ್ಯೋಗಾವಕಾಶ.

ಬೆಂಗಳೂರಿನಲ್ಲಿ ಫೆಸ್ಟೋ ಸಂಸ್ಥೆಯ ಹೊಸ GCC ಉದ್ಘಾಟನೆ: 600 ಉದ್ಯೋಗಾವಕಾಶ.

 

ಬೆಂಗಳೂರಿನಲ್ಲಿ ಫೆಸ್ಟೋ ಸಂಸ್ಥೆಯ ಹೊಸ GCC ಉದ್ಘಾಟನೆ: 600 ಉದ್ಯೋಗಾವಕಾಶ.

ಬೆಂಗಳೂರು, ಫೆ,19:
ಭಾರತ ಕೈಗಾರಿಕಾ ಆಟೋಮೇಷನ್ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದ ಫೆಸ್ಟೋ (Festo) ಸಂಸ್ಥೆಯ 40 ವರ್ಷಗಳ ಯಶಸ್ವಿ ನೆನಪಿಗಾಗಿ ಬೆಂಗಳೂರಿನಲ್ಲಿ ನೂತನ ‘ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್’ (GCC)ನ್ನು ಬುಧವಾರ ಉದ್ಘಾಟಿಸಲಾಯಿತು.

ಈ ಮೂಲಕ ಈ ಭಾಗದಲ್ಲಿ ಸುಮಾರು 600 ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಫೆಸ್ಟೋ ಘೋಷಿಸಿದೆ.
ಎಲೆಕ್ಟ್ರಾನಿಕ್ಸ್ ಸಿಟಿ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಮುಂಭಾಗ ನೂತನ ಫೆಸ್ಟೋ ಸಂಸ್ಥೆಯು 71,000 ಚದರ ಅಡಿ ವಿಸ್ತೀರ್ಣದ ಬೃಹತ್ ಕೇಂದ್ರ ಇದಾಗಿದ್ದು ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಡೇಟಾ ಅನಾಲಿಟಿಕ್ಸ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಫೆಸ್ಟೋ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರವಿ ಶಾಸ್ತ್ರಿ “ನಮ್ಮ ಬೆಂಗಳೂರಿನ ಈ ಹೊಸ ಕೇಂದ್ರವು ಸುಸ್ಥಿರ ಭವಿಷ್ಯದ ಆಟೋಮೇಷನ್ ತರುವ ಫೆಸ್ಟೋ ಸಂಸ್ಥೆಯ ದೂರದೃಷ್ಟಿಗೆ ಪೂರಕವಾಗಿದೆ. ಭಾರತದ ಪ್ರತಿಭಾವಂತ ಎಂಜಿನಿಯರ್‌ಗಳ ನೆರವಿನೊಂದಿಗೆ ಜಾಗತಿಕ ಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿಗೆ (R&D) ನಾವು ಹೆಚ್ಚಿನ ಒತ್ತು ನೀಡುತ್ತಿದ್ದೇವೆ” ಎಂದು ತಿಳಿಸಿದರು.

ಫೆಸ್ಟೋ ಇಂಡಿಯಾ GCC ಮುಖ್ಯಸ್ಥರಾದ ಆಲೋಕ್ ಮಹೇಶ್ವರಿ ಮಾತನಾಡಿ, “ಕಳೆದ ನಾಲ್ಕು ದಶಕಗಳಿಂದ ಫೆಸ್ಟೋ ಸಂಸ್ಥೆಗೆ ಭಾರತವು ಒಂದು ಪ್ರಮುಖ ಮಾರುಕಟ್ಟೆಯಾಗಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರದ ಮೂಲಕ ನಮ್ಮ ತಂಡದ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಿದ್ದೇವೆ,” ಎಂದರು.

ಫೆಸ್ಟೋ ಆಡಳಿತ ಮಂಡಳಿ ಸದಸ್ಯ ಸೆಬಾಸ್ಟಿಯನ್ ಬೆಕ್ ಅವರು ಮಾತನಾಡಿ, “ಭಾರತದಲ್ಲಿ ಫೆಸ್ಟೋ ಸಂಸ್ಥೆಯ 40 ವರ್ಷಗಳ ಪಯಣವು ದೇಶದ ಕೈಗಾರಿಕಾ ಮತ್ತು ತಾಂತ್ರಿಕ ಸಾಮರ್ಥ್ಯದ ಮೇಲೆ ನಮಗಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಭವಿಷ್ಯದಲ್ಲಿ ಫೆಸ್ಟೋದ ಜಾಗತಿಕ ಡಿಜಿಟಲ್ ಸಾಮರ್ಥ್ಯಗಳನ್ನು ವಿಸ್ತರಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಫೆಸ್ಟೋ ಸಂಸ್ಥೆಯ ಬಗ್ಗೆ: ಜರ್ಮನಿಯ ಎಸ್ಲಿಂಗೆನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಫೆಸ್ಟೋ, ಆಟೋಮೇಷನ್ ತಂತ್ರಜ್ಞಾನ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ವಿಶ್ವದ ಅಗ್ರಗಣ್ಯ ಸ್ವತಂತ್ರ ಕೌಟುಂಬಿಕ ಸಂಸ್ಥೆಯಾಗಿದೆ. 1963ರಲ್ಲಿ ಭಾರತಕ್ಕೆ ಪ್ರವೇಶಿಸಿದ ಫೆಸ್ಟೋ, 1986ರಲ್ಲಿ ತನ್ನ ಅಧಿಕೃತ ಅಸ್ತಿತ್ವವನ್ನು ಸ್ಥಾಪಿಸಿತು. ಪ್ರಸ್ತುತ ದೇಶಾದ್ಯಂತ 1,000ಕ್ಕೂ ಹೆಚ್ಚು ನುರಿತ ಉದ್ಯೋಗಿಗಳನ್ನು ಹೊಂದಿರುವ ಈ ಸಂಸ್ಥೆ, 25,000ಕ್ಕೂ ಹೆಚ್ಚು ಗ್ರಾಹಕರಿಗೆ ಅತ್ಯಾಧುನಿಕ ಆಟೋಮೇಷನ್ ಪರಿಹಾರಗಳನ್ನು ಒದಗಿಸುತ್ತಿದೆ.

 

Leave a Reply

Your email address will not be published. Required fields are marked *

error: Content is protected !!