ಆಕಾಶದಲ್ಲೇ ಪಾಕಿಸ್ತಾನದ ಯುದ್ಧ ವಿಮಾನ ಡಂ ಢಮಾರ್.. ಹೇಗಿತ್ತು ಭಾರತದ ದಾಳಿ..?
1 min read
ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಬುಧವಾರ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಕುದ್ದು ಹೋಗಿರುವ ಪಾಕಿಸ್ತಾನ ಪ್ರತೀಕಾರಕ್ಕೆ ಮುಂದಾಗಿದೆ. ಭಾರತೀಯ ನಾಗರಿಕರ ಮತ್ತು ನಮ್ಮ ಸೇನಾ ನೆಲೆಯನ್ನು ಟಾರ್ಗೆಟ್ ಮಾಡುತ್ತಿದ್ದ ಪಾಕಿಸ್ತಾನಿ ಯುದ್ಧ ವಿಮಾನವನ್ನು ಭಾರತದ ದಾಳಿ ಹೊಡೆದುರುಳಿಸಲಾಗಿದೆ. ಪಾಕಿಸ್ತಾನಿ ಜೆಟ್ ಭಾರತದ ಪಠಾಣ್ಕೋಟ್ ಮೇಲೆ ದಾಳಿಗೆ ಯತ್ನಿಸಿ ಬರುತ್ತಿತ್ತು. ಇದನ್ನು ಗಮನಿಸಿದ ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ದಾಳಿ ಮಾಡಿ ಹೊಡೆದು ಹಾಕಿದೆ. ಆಕಾಶದಲ್ಲಿ ನಡೆದ ಪಾಕಿಸ್ತಾನಿ ವಿಮಾನವನ್ನೂ ಶೂಟ್ ಮಾಡಿ ಸ್ಫೋಟಿಸಲಾಗಿದೆ. ಈ ದೃಶ್ಯವನ್ನು ನೋಡಲು ಭಯಾನಕ ರೋಮಾಂಚನಕಾರಿಯಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಬಗ್ಗೆ ಸೇನೆಯಿಂದ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗಿದೆ.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ, ಭಯೋತ್ಪಾದಕರಿಗೆ ಬುದ್ಧಿ ಕಲಿಸಲು ಆಪರೇಷನ್ ಸಿಂಧೂರ ನಡೆಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಭಯೋತ್ಪಾದಕರನ್ನು ಹೊಡೆದ ಬೆನ್ನಲ್ಲೇ ಉಗ್ರ ಪೋಷಕ ಪಾಕಿಸ್ತಾನ ಭಾರತ ಮೇಲೆ ದಾಳಿ ಮಾಡಿತು. ಗಡಿ ಭಾಗದಲ್ಲಿ ದಾಳಿ ಭಾರತದ ನಾಗರಿಕರ ಮೇಲೆ ಅಟ್ಯಾಕ್ ಮಾಡಿತು. ಆ ಮೂಲಕ ಪಾಕಿಸ್ತಾನ ಭಾರತವನ್ನು ಕೆರಳಿಸಿ, ಯುದ್ಧಕ್ಕೆ ರಣವಿಳ್ಯವನ್ನು ನೀಡಿತು. ಭಾರತ ತನ್ನ ರಕ್ಷಣೆಗಾಗಿ ಪಾಕಿಸ್ತಾನದ ಯಾವೆಲ್ಲ ಪ್ರದೇಶಗಳಿಂದ ದಾಳಿ ಆಗುತ್ತಿತ್ತೋ ಅಲ್ಲಿಗೆ ನುಗ್ಗಿ ಹೊಡೆದಿದೆ. ಅದರ ಜೊತೆಗೆ ಭಾರತದ ಮೇಲಿ ದಾಳಿಗೆ ಯತ್ನಿಸಿದ್ದನ್ನೂ ವಿಫಲಗೊಳಿಸಿದೆ ನಮ್ಮ ಸೇನೆ.
