ರಾಜ್ಯದ 2 ಸ್ಥಳಗಳಲ್ಲಿ ಮಾಕ್ ಡ್ರಿಲ್ ಕನ್ಫರ್ಮ್​.. NCC, NSS ವಿದ್ಯಾರ್ಥಿಗಳು ಮಾಕ್​ ಡ್ರಿಲ್​ನಲ್ಲಿ ಭಾಗವಹಿಸುವಂತೆ ಸೂಚನೆ

1 min read
Share it

ಬೆಂಗಳೂರು :  ಭಾರತ ಹಾಗೂ ಪಾಕಿಸ್ತಾನದ​ ನಡುವೆ ಯುದ್ಧದ ಸಾಧ್ಯತೆ ಹಿನ್ನೆಲೆ ದೇಶದ ಪ್ರಮುಖ ಸೂಕ್ಷ್ಮ ಭಾಗಗಳಲ್ಲಿ ಮಾಕ್​ ಡ್ರಿಲ್​​ ಮಾಡಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.  ಹೀಗಾಗಿ ನಾಳೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಸೂಚಿಸಲಾಗಿದೆ.  ನಾಗರಿಕರ ರಕ್ಷಣೆಗಾಗಿ ನಾಳೆ ದೇಶಾದ್ಯಂತ ಮಾಕ್​ ಡ್ರಿಲ್​ ಅಂದ್ರೆ ಅಣಕು ಪ್ರದರ್ಶನ ನಡೆಸಲು ಸೂಚನೆ ನೀಡಿದೆ.  ಎಲ್ಲಾ ರಾಜ್ಯಗಳಲ್ಲಿ ವಾಯು ದಾಳಿಯ ಸೈರನ್‌ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ.

 

ಗೃಹ ರಕ್ಷಕ ದಳ, ಎನ್‌ ಎಸ್‌ ಎಸ್‌ ,  ಎನ್‌ ಸಿ ಸಿ ವಿದ್ಯಾರ್ಥಿಗಳು ಮಾಕ್​ ಡ್ರಿಲ್​ನಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ. ಇನ್ನು, ಕರ್ನಾಟಕದ ಎರಡು ಪ್ರದೇಶದಲ್ಲಿ ಅಂದ್ರೆ ಬೆಂಗಳೂರು ಮಲ್ಲೇಶ್ವರಂ ಮತ್ತು ರಾಯಚೂರಿನಲ್ಲಿ ಮಾಕ್​ಡ್ರಿಲ್​ ನಡೆಯಲಿದೆ. ಕರ್ನಾಟಕದ ಈ ಎರಡು ಪ್ರದೇಶಗಳಲ್ಲಿ ಮಾತ್ರ ಮಾಕ್ ಡ್ರಿಲ್ ನಡೆಯಲಿದೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ. ದೇಶದ ಪ್ರಮುಖ ವಾಣಿಜ್ಯ ಚಟುವಟಿಕೆಗಳ ಮೂಲವೇ ಬೆಂಗಳೂರು. ಹೀಗಾಗಿ ಬೆಂಗಳೂರು ಮತ್ತು ರಾಯಚೂರಿನಲ್ಲಿ ಮಾಕ್ ಡ್ರಿಲ್ ಮಾಡಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?