[t4b-ticker]

ಈ 80 ದೇಶಗಳು ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ.. ಕಾರಣವೇನು ಗೊತ್ತಾ?

1 min read
Share it

ಹಿಂದೂ ಧರ್ಮದಲ್ಲಿ ತುಳಸಿ ಪವಿತ್ರ ಸಸ್ಯ ಎಂಬ ನಂಬಿಕೆ ಇದೆ. ವಿಷ್ಣುವಿಗೆ ಪ್ರಿಯಾವಾದ ತುಳಸಿ ಗಿಡವನ್ನು ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ಬೆಳೆಸಿ ಪೂಜೆ ಮಾಡುವ ಪದ್ಧತಿ ನಡೆದುಬಂದಿದೆ.ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿರುವುದೂ ಸಹ ಅದನ್ನು ಪೂಜನೀಯವಾಗಿ ಗುರುತಿಸಲು ಕಾರಣವಾಗಿದೆ. ಭಾರತದಲ್ಲಿ ಹೀಗೆ ವಿಶೇಷ ಸ್ಥಾನವನ್ನಲಂಕರಿಸಿದ ತುಳಸಿ ಹಾಗೂ ಅದರ ಎಲೆಗಳಿಗೀಗ ವಿದೇಶಗಳಲ್ಲಿ ಭಾರೀ ಡಿಮ್ಯಾಂಡ್ ಸೃಷ್ಟಿಯಾಗುತ್ತಿದೆ.

 

ವಿಶ್ವದ ಸುಮಾರು 80 ರಾಷ್ಟ್ರಗಳು ಭಾರತದಿಂದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಆಶ್ಚರ್ಯವೆಂದರೆ ಇದರಲ್ಲಿ ಇಸ್ಲಾಂ ರಾಷ್ಟ್ರಗಳು ಕೂಡ ಸೇರಿವೆ. ಅದರಲ್ಲಿ ಪ್ರಮುಖವಾದ ದೇಶಗಳು ಅಂದ್ರೆ ಅಮೆರಿಕಾ, ಜರ್ಮನ್​, ಸ್ಪೇನ್, ಬಾಂಗ್ಲಾದೇಶ, ಇರಾಕ್, ಆಸ್ಟ್ರೇಲಿಯಾ, ರೋಮಾನಿಯಾ, ರಷ್ಯಾ, ನೆದರ್​ಲ್ಯಾಂಡ್​ ಮತ್ತು ಸಿಂಗಾಪುರ್  ಇಷ್ಟು ದೇಶಗಳಲ್ಲಿ ಅತಿಹೆಚ್ಚು ತುಳಸಿ ಎಲೆಗಳನ್ನು ಖರೀದಿ ಮಾಡುತ್ತಿರುವ ರಾಷ್ಟ್ರ ಅಂದ್ರೆ ಅದು ಅಮೆರಿಕಾ. 80 ರಾಷ್ಟ್ರಗಳಲ್ಲಿಯೇ ಅಮೆರಿಕಾ ಅತಿಹೆಚ್ಚು ತುಳಸಿ ದಳಗಳನ್ನು ಖರೀದಿ ಮಾಡುತ್ತಿದೆ. ಏಕಾಏಕಿ ತುಳಸಿ ಎಲೆಗಳಿಗೆ ಇಷ್ಟೊಂದು ಬೇಡಿಕೆ ಸೃಷ್ಟಿಯಾಗಿದ್ದು ಏಕೆ. ಅದರ ಹಿಂದಿರುವ ಕಾರಣವೇನು ಎಂಬುದನ್ನು ನೋಡೊಣಾ ಬನ್ನಿ…

 

ಭಾರತದಿಂದ ವಿದೇಶಗಳು ಈ ಪ್ರಮಾಣದಲ್ಲಿ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದರ ಹಿಂದೆ ಅನೇಕ ಕಾರಣಗಳು ಇವೆ. ಅದರಲ್ಲಿ ಪ್ರಮುಖವಾಗಿ ಔಷಧಿ ತಯಾರಿಕೆಯಲ್ಲಿ ತುಳಸಿ ಉಪಯೋಗಿಸಲು ಮತ್ತು ಚಹಾದಲ್ಲಿ ತುಳಸಿ ಬಳಕೆ ಮಾಡಿಕೊಳ್ಳಲು ಇಷ್ಟೊಂದು ಪ್ರಮಾಣದ ತುಳಸಿ ಎಲೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.ಕೇವಲ ಔಷಧ ಮತ್ತು ಚಹಾ ತಯಾರಿಕೆಗೆ ಮಾತ್ರವಲ್ಲ ಕಾಸ್ಮೆಟಿಕ್ ಉತ್ಪಾದನೆಯಲ್ಲೂ ಈಗ ತುಳಸಿಯನ್ನು ಬಳಸಲಾಗುತ್ತಿದೆ. ಅನೇಕ ಕಂಪನಿಗಳು ತುಳಸಿಯನ್ನು ಬಳಸಿಕೊಂಡು ಸೌಂದರ್ಯವರ್ಧಕ ಉತ್ಪನ್ನಗಳನ್ನು ಉತ್ಪಾದಿಸುತ್ತಿವೆ. ಹೀಗಾಗಿ ವಿದೇಶಗಳಲ್ಲಿ ತುಳಸಿ ಎಲೆಗಳ ಬೇಡಿಕೆ ವಿಪರೀತವಾಗಿದೆ.

 

ಭಾರತೀಯ ಆಯುರ್ವೇದಿಕ ಪದ್ಧತಿಯಲ್ಲಿ ಅರಿಷಿಣ ಬಿಟ್ಟರೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುವುದು ತುಳಸಿಗೆ. ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯನ್ನು ಗುಣಗೊಳಿಸುವ ಸಾಮರ್ಥ್ಯದಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ತುಳಸಿಗಿದೆ. ಸದ್ಯ ವಿಶ್ವದಲ್ಲಿ ಆಯುರ್ವೇದಿಕ ಔಷಧ ಪದ್ಧತಿಯ ಅಳವಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಹೀಗಾಗಿ ತುಳಸಿ ದಳಕ್ಕೆ ಈಗ ಎಲ್ಲಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದೆ.ಇದಿಷ್ಟು ಮಾತ್ರವಲ್ಲ ಕೆಲವು ವಿದೇಶಿ ಕಂಪನಿಗಳು ತಾವು ತಯಾರು ಮಾಡುತ್ತಿರುವ ಸುಗಂಧದ್ರವ್ಯ ಅಂದ್ರೆ ಪರ್ಫ್ಯೂಮ್​ನಲ್ಲಿಯೂ ಕೂಡ ತುಳಸಿಯ ಎಣ್ಣೆಯನ್ನು ಉಪಯೋಗಿಸಲು ಆರಂಭಿಸುತ್ತಿದ್ದಾರೆ.ಇನ್ನು ಅನೇಕ ವಿದೇಶಿ ಕಂಪನಿಳು ನೈಸರ್ಗಿಕ ಕೀಟ ನಾಶಕಗಳನ್ನು ಉತ್ಪಾದನೆ ಮಾಡುತ್ತಿದ್ದು. ಅವುಗಳ ತಯಾರಿಕೆಗೂ ಕೂಡ ಈ ತುಳಸಿಯನ್ನು ಉಪಯೋಗಿಸಲು ಆರಂಭಿಸಿದ್ದಾರೆ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?