ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ನಗುವಿನ ಒಡೆಯ ಪುನೀತ್ ರಾಜಕುಮಾರ್ಗೆ 50ರ ಸಂಭ್ರಮ
1 min read
ಇಂದು ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ೫೦ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ.. ರಾಜ್ಯಾದ್ಯಂತ ಮರೆಯಲಾರದ ರಾಜರತ್ನನ ನೆನಪು ಮನೆ ಮಾಡಿದೆ.. ಮಧ್ಯರಾತ್ರಿಯಿಂದಲೇ ಅಪ್ಪು ಅಭಿಮಾನಿಗಳ ಸೆಲೆಬ್ರೇಷನ್ ಜೋರಾಗಿದೆ. ಇವತ್ತು ಬಾನದಾರಿಯಲ್ಲಿ ಜಾರಿ ಹೋದ ಮರೆಯಲಾರದ ಮಾಣಿಕ್ಯ. ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ನಗುವಿನ ಒಡೆಯ ಪುನೀತ್ ರಾಜಕುಮಾರ್ಗೆ 50ರ ಸಂಭ್ರಮ. ಅಪ್ಪು ನಮ್ಮೊಂದಿಗಿಲ್ಲದಿದ್ರೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರ ಅನ್ನೋದಕ್ಕೆ ಈ ಜನಸಾಗರವೇ ಸಾಕ್ಷಿಯಾಗಿದೆ.
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ. ಮಧ್ಯರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸಮಾಧಿ ದರ್ಶನ ಪಡೆಯಲು ಆಗಮಿಸಿದರು. ಆದ್ರೆ, ಬೆಳಗ್ಗೆ ದರ್ಶನ ವ್ಯವಸ್ಥೆ ಇರುವ ಕಾರಣದಿಂದ ಅಪ್ಪು ಅಭಿಮಾನಿಗಳು, ಕಂಠೀರವ ಸ್ಟುಡಿಯೋ ಮುಂದೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹಾಗೇ ಅಪ್ಪು ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದರು. ಪುನೀತ್ ರಾಜ್ಕುಮಾರ್ 50ನೇ ಹುಟ್ಟುಹಬ್ಬ ಪ್ರಯುಕ್ತ, ‘ಅಪ್ಪು’ಸಿನಿಮಾ ರೀ-ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ನಿನ್ನೆ ಮೋಹಕ ತಾರೆ ರಮ್ಯಾ ಅಪ್ಪು ಸಿನಿಮಾ ನೋಡಿದರು. ವೀರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ಚಿತ್ರ ವೀಕ್ಷಿಸಿದ ರಮ್ಯಾ, ಸಿಕ್ಕಾಪಟ್ಟೆ ಖುಷಿ ಪಟ್ಟರು. ರಮ್ಯಾರಿಗೆ ನಟಿ ಶರ್ಮಿಳಾ ಮಾಂಡ್ರೆ ಸಾಥ್ ನೀಡಿದರು. ಇನ್ನು, ಸಿನಿಮಾ ವೀಕ್ಷಿಸಿದ ಬಳಿಕ ಮಾತ್ನಾಡಿದ ರಮ್ಯಾ, 23 ವರ್ಷದ ಹಿಂದೆ ಈ ಸಿನಿಮಾನ ನೋಡಿದ್ದೆ. ಆಗಿದ್ದ ಸೇಮ್ ಕ್ರೇಜ್ ಈಗಲೂ ಇದೆ. ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದು ಬಹಳ ಖುಷಿ ಕೊಡ್ತು. ನಾನು ಕೂಡ ಅಪ್ಪು ಫ್ಯಾನ್ ಅಂತ ಹೇಳಿದರು
ಅಪ್ಪು ಹುಟ್ಟುಹುಬ್ಬ ಪ್ರಯುಕ್ತ ಹಬ್ಬದ ವಾತವರಣ ಸೃಷ್ಟಿಸಿದೆ.. ಅಪ್ಪು ದೈಹಿಕವಾಗಿ ನಮ್ಮೆಲ್ಲರನ್ನ ಅಗಲಿದ್ರೂ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ವಿರಾಜಮಾನರಾಗಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಅನ್ನೋ ರೀತಿ ಅಭಿಮಾನಿಗಳ ಆರಾಧ್ಯದೈವ ಎಂದಿಗೂ ಕನ್ನಡಿಗರ ಹೃದಯದಲ್ಲಿ ಅಜರಾಮರ.
