[t4b-ticker]

ಕಾರು ಗುದ್ದಿದ ರಭಸಕ್ಕೆ ಕಾಂಪೌಂಡ್​ ಮೇಲೆ ನೇತಾಡಿದ ಮಹಿಳೆ: ಎದೆ ಝಲ್​ ಎನಿಸುವ ದೃಶ್ಯ

1 min read
Share it

https://youtu.be/pte3b_isBt0?si=IvfSjBOG6qcU_Ij9

ಮಂಗಳೂರು : ಬೈಕ್ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್​ ಮೇಲೆ ನೇತಾಡಿರುವ ಎದೆ ಝಲ್ ಎನಿಸುವ ಭೀಕರ ಅಪಘಾತ ಮಂಗಳೂರು ನಗರದಲ್ಲಿ ನಡೆದಿದೆ. ಮುರಳಿ ಪ್ರಸಾದ್ ಎನ್ನುವಾತ ಬೈಕ್​ ಮೇಲೆ ತೆರಳತ್ತಿದ್ದು, ಈತನಿಗೆ ಗುದ್ದಿ ಹತ್ಯೆ ಮಾಡುವ ಪ್ಲ್ಯಾನ್ ಇತ್ತು. ಆದ್ರೆ, ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಕಾರು ಗುದ್ದಿದೆ. ಪರಿಣಾಮ ಮಹಿಳೆ ಕಾಂಪೌಂಡ್​ ಮೇಲೆ ಬಿದ್ದು ನೇತಾಡಿದ್ದಾಳೆ. ಬಳಿಕ ಸ್ಥಳೀಯರು ಓಡೋಡಿ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಕಾರು ಚಾಲಕ ಸತೀಶ್ ಕುಮಾರ್​​ ಈ ಕೃತ್ಯ ಎಸಗಿದ್ದಾನೆ. ಅದೃಷ್ಟವಶಾತ್​ ಮಹಿಳೆ ಬದುಕಿದ್ದಾಳೆ.

 

ಮಂಗಳೂರಿನ ಬಿಜೈ ಬಳಿ ಭೀಕರ ಅಪಘಾತದ ಮೂಲಕ ಕೊಲೆ ಯತ್ನ ನಡೆದಿದೆ. ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿಯಾಗಿದ್ದ ಸತೀಶ್ ಕುಮಾರ್.ಕೆ.ಎಂ ಎಂಬವವರಿಗೆ ಎದುರು ಮನೆ ನಿವಾಸಿ ಮುರಳಿ ಪ್ರಸಾದರವರು ಡಿಕ್ಕಿ ಹೊಡೆದು ಕೊಲೆಮಾಡಲು ಯತ್ನಿಸಿದ ಘಟನೆ ಮಂಗಳೂರಿನ ಬಿಜೈ ಬಳಿ ನಡೆದಿದೆ. ಸತೀಶ್ ಕುಮಾರ್.ಕೆ.ಎಂ ರವರಿಗೆ ಮುರಳಿ ಪ್ರಸಾದ್ ಹಾಗೂ ಅವರ ಮನೆಯವರೊಂದಿಗೆ ಮೊದಲಿನಿಂದಲು ಸದಾಕಾಲ ತಂಟೆತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಈ ಹಿಂದೆ ಮುರಳಿ ಪ್ರಸಾದ ತಂದೆಯವರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿತ ಸತೀಶ್ ಕುಮಾರ್.ಕೆ.ಎಂ ಎಂಬಾತನು ಕಾರಣ ವಿಲ್ಲದೆ ಬೈಕ್ನಲ್ಲಿ ಬಂದು ತಾಗಿಸಿಕೊಂಡು ಹೋಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಈ ಬಗ್ಗೆ ಉರ್ವಾ ಠಾಣೆಯಲ್ಲಿ 2023 ರಲ್ಲಿ ದೂರು ದಾಖಲಾಗಿದೆ.

 

ಆದರೆ ನಿನ್ನೆ ಬೆಳಗ್ಗೆ ಸುಮಾರು 08:15 ರ ವೇಳೆಗೆ ಬಿಜೈ ಕಾಪಿಕಾಡ್ ನ 6 ನೇ ಮುಖ್ಯ ರಸ್ತೆಯಲ್ಲಿ ಮುರಳಿ ಪ್ರಸಾದ ರವರು ತನ್ನ ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ಹೋಗುತ್ತಿರುವಾಗ ಸತೀಶ್ ಕುಮಾರ್.ಕೆ.ಎಂ ಕಾರಿನಲ್ಲಿ ಕಾದು ಕುಳಿತು ಉದ್ದೇಶ ಪೂರ್ವಕವಾಗಿ ಮುರಳಿ ಪ್ರಸಾದರವರನ್ನು ಕೊಲೆಮಾಡುವ ಉದ್ದೇಶದಿಂದ ಕಾರನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಗೆ ಗಂಭೀರ ಗಾಯವಾಗಿದೆ,ಮುರಳಿ ಪ್ರಸಾದ ರವರಿಗೆ ಗಾಯಗಳು ಉಂಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಸತೀಶ್ ಕುಮಾರ್.ಕೆ.ಎಂ ರವರನ್ನು ವಶಕ್ಕೆ ಪಡೆದುಕೊಂಡು, ಕಾರನ್ನು ಪೊಲೀಸರು ವಶಪಡಿಸಿದ್ದಾರೆ ಉದ್ದೇಶ ಪೂರ್ವಕವಾಗಿ ಪೂರ್ವ ದ್ವೇಷದಿಂದ ಕೊಲೆಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದು, ಈ ಬಗ್ಗೆ ನಗರದ ಉರ್ವಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು ಹಾಗೂ ಕಾರನ್ನು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿ ಹೆಂಗಸಿಗೆ ಡಿಕ್ಕಿ ಪಡಿಸಿದ ಕುರಿತು ಮಂ.ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ,ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ನೋವು ಅನುಭವಿಸುವಂಥಹ ಸ್ಥಿತಿ ಉಂಟಾಗಿದೆ.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?