[t4b-ticker]

ಪಾಸ್‌ಪೋರ್ಟ್‌ಗೆ ಜನನ ಪ್ರಮಾಣಪತ್ರವೇ ಕಡ್ಡಾಯ.. ಹೊಸ ಕಾನೂನು ದೇಶಾದ್ಯಂತ ಜಾರಿ!

1 min read
Share it

 

ನವದೆಹಲಿ: ಕೇಂದ್ರ ಸರ್ಕಾರ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವ ದೇಶದ ಎಲ್ಲಾ ನಾಗರಿಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ.  ಅಷ್ಟೇ ಅಲ್ಲ ಶಾಲೆಯ ಪ್ರವೇಶಾತಿ, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ನಂಬರ್ ಎಲ್ಲದಕ್ಕೂ ಜನನ ಪ್ರಮಾಣ ಪತ್ರವೇ ಏಕೈಕ ಮಾನದಂಡ ಎನ್ನಲಾಗಿದೆ. 2025ರ ಪಾಸ್‌ಪೋರ್ಟ್‌ ಕಾನೂನಿನ ಬಗ್ಗೆ ಗೆಜೆಟ್‌ ನೋಟಿಫಿಕೇಷನ್ ಹೊರಡಿಸಲಾಗಿದೆ. ಇದರ ಪ್ರಕಾರ ಅಕ್ಟೋಬರ್ 1, 2023ರ ಬಳಿಕ ಜನಿಸಿದ ದೇಶದ ಎಲ್ಲಾ ನಾಗರಿಕರಿಗೆ ಈ ಕಾನೂನು ಅನ್ವಯವಾಗುತ್ತದೆ. ಅಕ್ಟೋಬರ್ 1, 2023ರ ನಂತರ ಜನಿಸಿದ ಯಾರೇ ಆದರೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು ಎಂದು ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.

 

ಇದಕ್ಕೂ ಮೊದಲು ಅಂದ್ರೆ ಅಕ್ಟೋಬರ್ 1, 2023ಕ್ಕೂ ಮೊದಲು ಜನಿಸಿದವರಿಗೆ ಜನನ ಪ್ರಮಾಣ ಪತ್ರ ಬದಲು ಇತರೆ ದಾಖಲಾತಿಗಳನ್ನು ಸಲ್ಲಿಸಲು ಅನುಮತಿ ಇತ್ತು. ಪರ್ಯಾಯ ದಾಖಲೆಗಳು ಅಂದ್ರೆ ಅಧಿಕೃತ ಶಿಕ್ಷಣ ಸಂಸ್ಥೆಗಳ ಶಾಲೆ ವರ್ಗಾವಣೆ ಪತ್ರ, ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ನೀಡಲು ಅವಕಾಶವಿತ್ತು. ಆದರೆ ಇನ್ಮುಂದೆ ಅಕ್ಟೋಬರ್ 1, 2023ರ ನಂತರ ಜನಿಸಿದವರು ಜನನ ಪ್ರಮಾಣ ಪತ್ರ ಸಲ್ಲಿಸದೇ ಇದ್ದರೆ ಪಾಸ್‌ಪೋರ್ಟ್ ಪಡೆಯುವಂತಿಲ್ಲ.

 

ದೇಶದಲ್ಲಿ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಜಾರಿಯಾಗಿದೆ. ಇದರ ಪ್ರಕಾರ ಜನನ ಪ್ರಮಾಣ ಪತ್ರವನ್ನು ಬಹಳ ಮುಖ್ಯವಾದ ಒಂದೇ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಅಕ್ಟೋಬರ್ 1, 2023ರ ಬಳಿಕ ಪಾಸ್‌ಪೋರ್ಟ್, ಶಾಲಾ ಪ್ರವೇಶಾತಿ, ಡ್ರೈವಿಂಗ್ ಲೈಸೆನ್ಸ್‌, ಮತದಾರರ ಚೀಟಿ, ಮದುವೆ ಪ್ರಮಾಣ ಪತ್ರ, ಸರ್ಕಾರಿ ಉದ್ಯೋಗಗಳ ನೇಮಕಾತಿ, ಆಧಾರ್ ಕಾರ್ಡ್ ನಂಬರ್ ಎಲ್ಲದಕ್ಕೂ ಜನನ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ.

 

2023 ಅಕ್ಟೋಬರ್ 1ರಿಂದ ಹುಟ್ಟಿದ ಮಕ್ಕಳ ಜನನ ಪ್ರಮಾಣ ಪತ್ರ ಭವಿಷ್ಯದಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಸರ್ಕಾರದ ಯಾವುದೇ ಯೋಜನೆ ಹಾಗೂ ಸವಲತ್ತುಗಳಿಗೂ ಇದು ಇತರೆ ಎಲ್ಲಾ ದಾಖಲಾತಿಗಳಿಗಿಂತ ಪ್ರಮುಖವಾದ ದಾಖಲಾತಿ ಆಗೋದ್ರಲ್ಲಿ ಅನುಮಾನವೇ ಇಲ್ಲ. ಈಗಿನ ಪೋಷಕರು ಈ ಮಕ್ಕಳ ಅಧಿಕೃತ ಜನನ ಪ್ರಮಾಣ ಪತ್ರವನ್ನು ಪಡೆದು ಭವಿಷ್ಯದ ದೃಷ್ಟಿಯಿಂದ ಜೋಪಾನವಾಗಿ ಕಾಪಾಡಿಕೊಳ್ಳಬೇಕು

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?