c24kannada

ವಸ್ತುಸ್ಥಿತಿಯತ್ತ

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಯ ಹೊಟ್ಟೆಯಲ್ಲಿತ್ತು 5 ಕೆ.ಜಿ ಗೆಡ್ಡೆ

ದೊಡ್ಡಬಳ್ಳಾಪುರ : ಹೊಟ್ಟೆ ನೋವು ಎಂದು 45 ವರ್ಷದ ಮಹಿಳೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾರೆ, ತಪಾಸಣೆ ನಡೆಸಿದ ವೈದ್ಯರು ಆಕೆಯ ಹೊಟ್ಟೆಯಲ್ಲಿದ್ದ 5 ಕೆ.ಜಿ ಗೆಡ್ಡೆಯನ್ನ ಹೊರಗೆ ತೆಗೆದಿದ್ದಾರೆ ದೊಡ್ಡಬಳ್ಳಾಪುರ ನಗರದ 45 ವರ್ಷದ ಮಹಿಳೆ ಕಳೆದ ಮೂರು ತಿಂಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬಂದ ಮಹಿಳೆ ವೈದ್ಯರನ್ನು ಭೇಟಿ ಮಾಡಿದ್ದಾರೆ, ಮಹಿಳೆಯನ್ನು ಡಾ. ಅರ್ಚನಾ ಪರೀಕ್ಷೆ ನಡೆಸಿದ್ದಾರೆ, ಸ್ಕ್ಯಾನಿಂಗ್ ನಲ್ಲಿ ಆಕೆಯ ಹೊಟ್ಟೆಯಲ್ಲಿ 5 ಕೆ.ಜಿ ಗೆಡ್ಡೆ ಇರುವುದು ಪತ್ತೆಯಾಗಿದೆ.

 

ಡಾ.ಅರ್ಜನಾ ನೇತೃತ್ವದ ತಂಡ ಸತತ ಎರಡು ಗಂಟೆ ಶಸ್ತ್ರಚಿಕಿತ್ಸೆಯನ್ನ ನಡೆಸಿ ಆಕೆಯ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನ ಹೊರಗೆ ತೆಗೆದಿದ್ದಾರೆ, ಮಹಿಳೆ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯ ನಿಗಾ ಘಟಕದಲ್ಲಿ ದಾಖಲು ಮಾಡಲಾಗಿದೆ,ಹೆಚ್ಚಿನ ಪರೀಕ್ಷೆಗಾಗಿ ಗೆಡ್ಡೆಯನ್ನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಅರ್ಚನಾ ನೇತೃತ್ವದ ವೈದ್ಯರ ತಂಡವನ್ನ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ಟಿಎಚ್ಓ ಡಾ.ಶಾರದಾ ನಾಗನಾಥ್, ಡಾ.ಮಂಜುನಾಥ್ ಅಭಿನಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!